ಬಿಜೆಪಿ ಮತ್ತು ಜೆಡಿಎಸ್ ಒಂದುಗೂಡಿರುವುದು ಎದುರಾಳಿಗಳಲ್ಲಿ ಭೀತಿ ಮೂಡಿಸಿದೆ: ತಾರಾ, ಬಿಜೆಪಿ ನಾಯಕಿ
ಮಂಡ್ಯ ಬಿಜೆಪಿ ನಾಯಕ ಬಿ ಎಸ್ ಯಡಿಯೂರಪ್ಪನವರ ತವರು ಜಿಲ್ಲೆಯಾಗಿದೆ ಮತ್ತು ಹೆಚ್ ಡಿ ದೇವೇಗೌಡ ತಮ್ಮ ರಾಜಕೀಯ ಬದುಕಿನುದ್ದಕ್ಕೂ ಹೋರಾಟ ಮಾಡುತ್ತಾ ಬಂದಿದ್ದಾರೆ, ಇಂಥ ಮಹಾನಾಯಕರು ಜೊತೆಗೂಡಿರುವುದರಿಂದ ಕಾಂಗ್ರೆಸ್ ನಾಯಕರಲ್ಲಿ ಭೀತಿ ಮನೆ ಮಾಡಿದೆ ಎಂದು ತಾರಾ ಹೇಳಿದರು.
ಮಂಡ್ಯ: ಚಿತ್ರನಟಿ ಮತ್ತು ಬಿಜೆಪಿ ನಾಯಕಿ ತಾರಾ (BJP leader Tara) ಅವರು ನಿನ್ನೆ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥ ಹೆಚ್ ಡಿ ಕುಮಾರಸ್ವಾಮಿಯವರ (HD Kumaraswamy) ಪರ ಪ್ರಚಾರ ಮಾಡಿದರು. ಅವರು ಮಾತಾಡುವಾಗ ವೇದಿಕೆ ಮೇಲೆ ಜೆಡಿಎಸ್ ಕಾರ್ಯಕರ್ತರ (JDS workers) ವೃಥಾ ಓಡಾಟ ಕೇವಲ ತಾರಾಗೆ ಮಾತ್ರ ಅಲ್ಲ ಎದುರು ಕುಳಿತಿದ್ದ ಸಾವಿರಾರು ಜನರಿಗೂ ಕಿರಿಕಿರಿಯನ್ನುಂಟು ಮಾಡಿತು. ಬೋಲೋ ಭಾರತ್ ಮಾತಾಕೀ ಜೈ ಮತ್ತು ಜೈ ಶ್ರೀರಾಮ್ ಎನ್ನುತ್ತಾ ಭಾಷಣ ಆರಂಭಿಸಿದ ತಾರಾ, ತಾನು ಜೆಡಿಎಸ್ ಉಮೇದುವಾರ ಕುಮಾರಣ್ಣನ ಪರ ಪ್ರಚಾರಕ್ಕಲ್ಲ ಅವರ ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದೇನೆ ಎಂಬ ಭಾವನೆ ಮೂಡುತ್ತಿದೆ ಎಂದು ಹೇಳಿದರು. ಜೆಡಿಎಸ್ ಮತ್ತು ಬಿಜೆಪಿ ನಡುವೆ ಮೈತ್ರಿ ಏರ್ಪಟ್ಟಿರುವುದು ಕೆಲವರಲ್ಲಿ ಅಶ್ಚರ್ಯ ಮೂಡಿಸಿದೆ, ಕೆಲವರಲ್ಲಿ ಗಾಬರಿ ಮೂಡಿಸಿದೆ ಅದರೆ ಎದುರಾಳಿಗಳಲ್ಲಿ ಭಯ ಮೂಡಿಸಿದೆ ಎಂದು ತಾರಾ ಹೇಳಿದರು. ಮಂಡ್ಯ ಬಿಜೆಪಿ ನಾಯಕ ಬಿ ಎಸ್ ಯಡಿಯೂರಪ್ಪನವರ ತವರು ಜಿಲ್ಲೆಯಾಗಿದೆ ಮತ್ತು ಹೆಚ್ ಡಿ ದೇವೇಗೌಡ ತಮ್ಮ ರಾಜಕೀಯ ಬದುಕಿನುದ್ದಕ್ಕೂ ಹೋರಾಟ ಮಾಡುತ್ತಾ ಬಂದಿದ್ದಾರೆ, ಇಂಥ ಮಹಾನಾಯಕರು ಜೊತೆಗೂಡಿರುವುದರಿಂದ ಕಾಂಗ್ರೆಸ್ ನಾಯಕರಲ್ಲಿ ಭೀತಿ ಮನೆ ಮಾಡಿದೆ ಎಂದು ತಾರಾ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಅಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ದೇವೇಗೌಡ ಕುಟುಂಬದ ಜೊತೆ ವೈರತ್ವ ಇದ್ದಿದ್ರೆ ಕುಮಾರಸ್ವಾಮಿಯನ್ನು ಕರೆದೊಯ್ದು ಸಿಎಂ ಮಾಡ್ತಿರಲಿಲ್ಲ: ಡಿಕೆ ಶಿವಕುಮಾರ್