ಯುವ ದಸರಾ ಉದ್ಘಾಟನೆಗಾಗಿ ಮೈಸೂರಿಗೆ ಬಂದ ಪ್ರಭುದೇವಗೆ ಪೇಟ ತೊಡಿಸಿ, ಹಾರ ಹಾಕಿ ಸ್ವಾಗತ
ಸಾಂಸ್ಕೃತಿಕ ನಗರಿ ಮೈಸೂರಿಗೆ ನಟ, ನೃತ್ಯ ನಿರ್ದೇಶಕ ಪ್ರಭುದೇವ ಆಗಮಿಸಿದ್ದು, ಯುವ ದಸರಾ ಸಮಿತಿಯಿಂದ ಅವರಿಗೆ ಭವ್ಯ ಸ್ವಾಗತ ಲಭಿಸಿದೆ. ಅಕ್ಟೋಬರ್ 13ರಂದು ಮೈಸೂರಿನ ಉತ್ತನಹಳ್ಳಿಯಲ್ಲಿ ಯುವ ದಸರಾ ಉದ್ಘಾಟಿಸಲಿರುವ ಪ್ರಭುದೇವ, ಅ.13ರಿಂದ 17ರವರೆಗೆ ನಡೆಯುವ ದಸರಾ ಸಂಭ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಮೈಸೂರು, ಅಕ್ಟೋಬರ್ 12: ಸಾಂಸ್ಕೃತಿಕ ನಗರಿ ಮೈಸೂರಲ್ಲಿ ಅದ್ಧೂರಿಯಾಗಿ ನಡೆಯಲಿರುವ ಯುವ ದಸರಾ 2026ಕ್ಕೆ ನಟ ಮತ್ತು ನೃತ್ಯ ನಿರ್ದೇಶಕ ಪ್ರಭುದೇವ ಚಾಲನೆ ನೀಡಲಿದ್ದಾರೆ. ಈ ಹಿನ್ನಲೆ ಮೈಸೂರಿಗೆ ಆಗಮಿಸಿದ ಅವರನ್ನು ಯುವ ದಸರಾ ಸಮಿತಿಯು ಅದ್ದೂರಿಯಾಗಿ ಸ್ವಾಗತಿಸಿದೆ. ಮೈಸೂರಿನ ಉತ್ತನಹಳ್ಳಿಯಲ್ಲಿ ನಡೆಯಲಿರುವ ಯುವ ದಸರಾ ಕಾರ್ಯಕ್ರಮವನ್ನು ಅಕ್ಟೋಬರ್ 13ರಂದು ಪ್ರಭುದೇವ ಅವರು ಉದ್ಘಾಟಿಸಲಿದ್ದಾರೆ. ಅಕ್ಟೋಬರ್ 13ರಿಂದ 17ರವರೆಗೆ ಐದು ದಿನಗಳ ಕಾಲ ಯುವ ದಸರಾ ಕಾರ್ಯಕ್ರಮಗಳು ನಡೆಯಲಿವೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Oct 12, 2026 11:44 AM
Loading...
Unable to load recommendations.
Follow Us
