ಗಲಿಬಿಲಿ ಅಳಿಯ, ಮುದ್ದಿನ ಅಳಿಯ, ರೌಡಿ ಅಳಿಯ, ಅಸಾಧ್ಯ ಅಳಿಯ, ಈಗ ಕರ್ನಾಟಕದ ಅಳಿಯ

|

Updated on: Sep 17, 2023 | 7:16 AM

Olle Hudga Pratham: ಬಿಗ್​ಬಾಸ್ ಖ್ಯಾತಿಯ ಪ್ರಥಮ್ ಅಲಿಯಾಸ್ ಒಳ್ಳೆ ಹುಡುಗ ಪ್ರಥಮ್ ನಟಿಸಿ, ನಿರ್ದೇಶನ ಮಾಡಿರುವ 'ಕರ್ನಾಟಕ ಅಳಿಯ' ಸಿನಿಮಾದ ಹಾಡೊಂದನ್ನು ಬಿಡುಗಡೆ ಮಾಡಲಾಗಿದೆ. ವೇದಿಕೆ ಮೇಲೆ ಮಾತನಾಡಿದ ನಟ ಶಶಿಕುಮಾರ್, ಗಲಿಬಿಲಿ ಅಳಿಯ, ಮುದ್ದಿನ ಅಳಿಯ, ರೌಡಿ ಅಳಿಯ, ಅಸಾಧ್ಯ ಅಳಿಯ, ಈಗ ಕರ್ನಾಟಕದ ಅಳಿಯ ಎಂದಿದ್ದಾರೆ.

ಬಿಗ್​ಬಾಸ್ (Bigg Boss) ಖ್ಯಾತಿಯ ಪ್ರಥಮ್ (Pratham) ಅಲಿಯಾಸ್ ಒಳ್ಳೆ ಹುಡುಗ ಪ್ರಥಮ್ ನಟಿಸಿ, ನಿರ್ದೇಶನ ಮಾಡಿರುವ ‘ಕರ್ನಾಟಕ ಅಳಿಯ’ ಸಿನಿಮಾದ ಹಾಡೊಂದನ್ನು ಬಿಡುಗಡೆ ಮಾಡಲಾಗಿದೆ. ಕಾರ್ಯಕ್ರಮಕ್ಕೆ ಅರುಣ್ ಸಾಗರ್, ನಟ ಶಶಿಕುಮಾರ್ ಸೇರಿದಂತೆ ಹಲವಾರು ಮಂದಿ ಆಗಮಸಿದ್ದರು. ವೇದಿಕೆ ಮೇಲೆ ಮಾತನಾಡಿದ ನಟ ಶಶಿಕುಮಾರ್, ‘ಗಲಿಬಿಲಿ ಅಳಿಯ’, ‘ಮುದ್ದಿನ ಅಳಿಯ’, ‘ರೌಡಿ ಅಳಿಯ’, ‘ಅಸಾಧ್ಯ ಅಳಿಯ’ ಹೀಗೆ ಶಿವಣ್ಣ, ವಿಷ್ಣುವರ್ಧನ್, ನಾನು ಅಳಿಯಂದಿರ ಬಗ್ಗೆ ಸಿನಿಮಾ ಮಾಡಿಬಿಟ್ಟಿದ್ದೇವೆ ಈಗ ಕರ್ನಾಟಕದ ಅಳಿಯ ಬರುತ್ತಿದೆ ಒಳ್ಳೆಯದಾಗಲಿ” ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ