ಕಡಿಮೆ ಆಗಿಲ್ಲ ಶ್ರೀನಾಥ್ ಎನರ್ಜಿ; ‘ನೀನೆ ಸಾಕಿದ ಗಿಣಿ’ ಹಾಡಿಗೆ ಡ್ಯಾನ್ಸ್

Edited By:

Updated on: Jan 21, 2026 | 9:04 AM

ನಟ ಶ್ರೀನಾಥ್ ಅವರು ಮಾಡಿದ ಸಿನಿಮಾಗಳು ಸೂಪರ್ ಹಿಟ್ ಆಗಿ ಗಮನ ಸೆಳೆದಿವೆ. ಈಗ ಅವರ ಎನರ್ಜಿ ಕಡಿಮೆ ಆಗಿಲ್ಲ ಎಂಬುದಕ್ಕೆ ವಿಡಿಯೋ ಸಾಕ್ಷಿ. ಅವರ ವಿಡಿಯೋ ವೈರಲ್ ಆಗಿ ಗಮನ ಸೆಳೆದಿವೆ. ಈ ವಿಡಿಯೋದಲ್ಲಿ ಅವರು ನೀನೆ ಸಾಕಿದ ಗಿಣಿ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ಆ ವಿಡಿಯೋ ಗಮನ ಸೆಳೆಯುವ ರೀತಿಯಲ್ಲಿ ಇದೆ.

ನಟ ಶ್ರೀನಾಥ್ ಅವರಿಗೆ ಈಗ 82 ವರ್ಷ ವಯಸ್ಸು. ಅವರಿಗೆ ಇನ್ನೂ ಎನರ್ಜಿ ಕಡಿಮೆ ಆಗಿಲ್ಲ. ಕಲಬುರಗಿ ಜಿಲ್ಲೆಯ ಚಿತ್ತಾಪೂರ ತಾಲೂಕಿನ ನಾಲವಾರದ ಮಠದಲ್ಲಿ ನಡೆದ ಕೋರಿ ಸಿದ್ದೇಶ್ವರ ಜಾತ್ರೆಗೆ ನಟ ಶ್ರೀನಾಥ್ ಬಂದಿದ್ದರು. ಈ ವೇಳೆ ‘ಮಾನಸ ಸರೋವರ’ ಚಿತ್ರದ ‘ನೀನೆ ಸಾಕಿದ ಗಿಣಿ’ ಹಾಡಿಗೆ ಶ್ರೀನಾಥ್ ಮಕ್ಕಳೊಂದಿಗೆ ಹೆಜ್ಜೆ ಹಾಕಿದ್ದಾರೆ. ನಂತರ ಸಿದ್ದ ತೋಟೆಂದ್ರ ಶಿವಾಚಾರ್ಯರಿಂದ ನಾಲವಾರ ರತ್ನ ಪ್ರಶಸ್ತಿ ಸ್ವೀಕರಿಸಿದರು. ಶ್ರೀನಾಥ್ ಅವರ ಎನರ್ಜಿ ನೋಡಿ ಎಲ್ಲರಿಗೂ ಖುಷಿ ಆಗಿದೆ. ಆ ಸಂಧರ್ಭದ ವಿಡಿಯೋ ಮೇಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.