Zaid Khan: ‘ಕರುನಾಡ ಜನ ನನ್ನ ಕೈ ಬಿಡಲ್ಲ’: ಮೊದಲ ಶೋಗೆ ಸಿಕ್ಕ ಪ್ರತಿಕ್ರಿಯೆಗೆ ‘ಬನಾರಸ್’ ನಟ ಝೈದ್ ಖಾನ್ ಸಂತಸ
Banasar Kannada Movie: ಪ್ಯಾನ್ ಇಂಡಿಯಾ ಮಟ್ಟದಲ್ಲಿ ‘ಬನಾರಸ್’ ಚಿತ್ರ ಬಿಡುಗಡೆ ಆಗಿದೆ. ಈ ಸಿನಿಮಾ ಹೌಸ್ಫುಲ್ ಪ್ರದರ್ಶನ ಕಂಡಿರುವುದರಿಂದ ಚಿತ್ರತಂಡದವರ ಮೊಗದಲ್ಲಿ ನಗು ಅರಳಿದೆ.
ಜಮೀರ್ ಅಹ್ಮದ್ ಅವರ ಪುತ್ರ ಝೈದ್ ಖಾನ್ (Zaid Khan) ಅವರು ಮೊದಲ ಬಾರಿಗೆ ನಟಿಸಿರುವ ‘ಬನಾರಸ್’ ಸಿನಿಮಾ ಇಂದು (ನ.4) ಬಿಡುಗಡೆ ಆಗಿದೆ. ಟೈಮ್ ಲೂಪ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಜಯತೀರ್ಥ (Jayatheertha) ನಿರ್ದೇಶನ ಮಾಡಿದ್ದಾರೆ. ಗಾಂಧಿನಗರದಲ್ಲಿ ಪ್ರೇಕ್ಷಕರ ಜೊತೆ ಸಿನಿಮಾ ನೋಡಿದ ಝೈದ್ ಖಾನ್ ಅವರು ಸಖತ್ ಖುಷಿಯಲ್ಲಿದ್ದಾರೆ. ತಮ್ಮ ಸಿನಿಮಾಗೆ ಜನರಿಂದ ಸಿಕ್ಕಿರುವ ಪ್ರತಿಕ್ರಿಯೆ ಕಂಡು ಅವರು ಸಂಭ್ರಮಿಸುತ್ತಿದ್ದಾರೆ. ‘ಕರುನಾಡ ಜನರು ನನ್ನ ಕೈ ಬಿಡಲ್ಲ’ ಎಂದು ಅವರು ಖುಷಿಯಿಂದ ಹೇಳಿದ್ದಾರೆ. ‘ಬನಾರಸ್’ (Banasar) ಹೌಸ್ಫುಲ್ ಪ್ರದರ್ಶನ ಕಂಡಿರುವುದರಿಂದ ಚಿತ್ರತಂಡದವರ ಮೊಗದಲ್ಲಿ ನಗು ಅರಳಿದೆ.