AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುಪ್ರೀಂಕೋರ್ಟ್ ಆದೇಶದಿಂದ ದರ್ಶನ್​ಗೆ ಅನುಕೂಲ: ಡಿಬಾಸ್ ಫ್ಯಾನ್ಸ್​​​​ಗೆ ಗುಡ್​ ನ್ಯೂಸ್ ಕೊಟ್ಟ ವಕೀಲ

ಸುಪ್ರೀಂಕೋರ್ಟ್ ಆದೇಶದಿಂದ ದರ್ಶನ್​ಗೆ ಅನುಕೂಲ: ಡಿಬಾಸ್ ಫ್ಯಾನ್ಸ್​​​​ಗೆ ಗುಡ್​ ನ್ಯೂಸ್ ಕೊಟ್ಟ ವಕೀಲ

ರಮೇಶ್ ಬಿ. ಜವಳಗೇರಾ
|

Updated on: May 15, 2026 | 3:06 PM

Share

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ (Renukaswamy Case) ಸಂಬಂಧಿಸಿದಂತೆ, ಸ್ಯಾಂಡಲ್ ವುಡ್ ನಟ ದರ್ಶನ್ (Darshan) ಜಾಮೀನು (Bail) ಅರ್ಜಿ ವಜಾಗೊಂಡಿದೆ. ಹಲವು ಕಾರಣಗಳನ್ನು ನೀಡಿ ನಟ ದರ್ಶನ್ ಸಲ್ಲಿಸಿದ್ದ ಸುಪ್ರೀಂಕೋರ್ಟ್​ (Supreme Court) ಜಾಮೀನು ಅರ್ಜಿಯನ್ನು ವಜಾ ಮಾಡಿ ಆದೇಶ ಹೊರಡಿಸಿದೆ. ಅಲ್ಲದೇ 1 ವರ್ಷದಲ್ಲಿ ಎಲ್ಲಾ ಸಾಕ್ಷಿಗಳ ವಿಚಾರಣೆ ನಡೆಸಬೇಕು. ಬಳಿಕ ಜಾಮೀನು ಅರ್ಜಿ ಬಗ್ಗೆ ಪರಿಗಣಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಹೀಗಾಗಿ ದರ್ಶನ್​​​ಗೆ ಒಂದು ವರ್ಷ ಜೈಲು ಖಾಯಂ ಆದಂತಾಗಿದೆ. ಇನ್ನು ಸುಪ್ರೀಂಕೋರ್ಟ್​ ತೀರ್ಪು ದರ್ಶನ್​​ಗೆ ಅನುಕೂಲ ಎಂದು ವಕೀಲ ಬಾಲನ್ ಹೇಳಿದ್ದಾರೆ.

ಬೆಂಗಳೂರು, (ಮೇ 15): ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ (Renukaswamy Case) ಸಂಬಂಧಿಸಿದಂತೆ, ಸ್ಯಾಂಡಲ್ ವುಡ್ ನಟ ದರ್ಶನ್ (Darshan) ಜಾಮೀನು (Bail) ಅರ್ಜಿ ವಜಾಗೊಂಡಿದೆ. ಹಲವು ಕಾರಣಗಳನ್ನು ನೀಡಿ ನಟ ದರ್ಶನ್ ಸಲ್ಲಿಸಿದ್ದ ಸುಪ್ರೀಂಕೋರ್ಟ್​ (Supreme Court) ಜಾಮೀನು ಅರ್ಜಿಯನ್ನು ವಜಾ ಮಾಡಿ ಆದೇಶ ಹೊರಡಿಸಿದೆ. ಅಲ್ಲದೇ 1 ವರ್ಷದಲ್ಲಿ ಎಲ್ಲಾ ಸಾಕ್ಷಿಗಳ ವಿಚಾರಣೆ ನಡೆಸಬೇಕು. ಬಳಿಕ ಜಾಮೀನು ಅರ್ಜಿ ಬಗ್ಗೆ ಪರಿಗಣಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಹೀಗಾಗಿ ದರ್ಶನ್​​​ಗೆ ಒಂದು ವರ್ಷ ಜೈಲು ಖಾಯಂ ಆದಂತಾಗಿದೆ. ಇನ್ನು ಸುಪ್ರೀಂಕೋರ್ಟ್​ ತೀರ್ಪು ದರ್ಶನ್​​ಗೆ ಅನುಕೂಲ ಎಂದು ವಕೀಲ ಬಾಲನ್ ಹೇಳಿದ್ದಾರೆ.

ಸುಪ್ರೀಂಕೋರ್ಟ್ ಆದೇಶದ ಬಗ್ಗೆ ಟಿವಿ9 ಜತೆ ಮಾತನಾಡಿದ ವಕೀಲ ಬಾಲನ್, ಜಾಮೀನು ರಿಜೆಕ್ಟ್ ಆಗಿ ಒಂದು ವರ್ಷ ಕಾಲಾವಕಾಶ ಕೊಟ್ಟಿರುವುದು ದರ್ಶನ್ ಗೆ ಅನುಕೂಲವಾಗಿದೆ. ಒಂದು ವರ್ಷದಲ್ಲಿ ಪ್ರಮುಖ ಸಾಕ್ಷಿಗಳನ್ನ ವಿಚಾರಣೆ ಮಾಡಿ ಆಗಲಿಲ್ಲ ಅಂದ್ರೆ ಜಾಮೀನು ಅರ್ಜಿ ಹಾಕಿ ಅನ್ನೋ ಲಿಬೆರ್ಟಿ ಕೊಟ್ಟಿದ್ದಾರೆ.ಟನಲ್ ಇದ್ರು ಬೆಳಕು ಇರ್ಲಿಲ್ಲ . ಇದೀಗ ಒಂದು ವರ್ಷದ ನಂತರ ಬೆಳಕು ಸಿಗುತ್ತೆ ಅಂತ ಹೇಳಿದ್ದಾರೆ ಅದು ಅನುಕೂಲವೇ ಅಲ್ವಾ ಎಂದರು.

ಇನ್ನು ಈ ಪ್ರಕರಣದಲ್ಲಿ ಒಟ್ಟು 232 ಸಾಕ್ಷಿಗಳಿದ್ದಾರೆ. ಒಂದು ವರ್ಷದಲ್ಲಿ 60 ಸಾಕ್ಷಿಗಳನ್ನು ವಿಚಾರಣೆ ಮಾಡಬಹುದು. ಪ್ರತ್ಯೇಕ ಕೋರ್ಟ್ ಕೊಟ್ರೆ ಎಲ್ಲಾ ಸಾಕ್ಷಿಗಳ ಮಾಡಬಹುದು ಅಷ್ಟೇ. ಹೀಗಾಗಿ ಎಲ್ಲಾ ಸಾಕ್ಷಿ ವಿಚಾರಣೆ ಒಂದು ವರ್ಷದಲ್ಲಿ ಮುಗಿಯಲ್ಲ. ಇದರಿಂದ ಒಂದು ವರ್ಷದ ಬಳಿಕ ದರ್ಶನ್​​ಗೆ ಜಾಮೀನು ಸಿಗುತ್ತೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ದರ್ಶನ್ ಜಾಮೀನು ಅರ್ಜಿ: ಸುಪ್ರೀಂ ಕೋರ್ಟ್​​ನಲ್ಲಿ ವಾದ-ಪ್ರತಿವಾದ ಹೀಗಿತ್ತು?

Follow Us