ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಮತ್ತೆ ಜೈಲಿಗೆ: ಸ್ಫೋಟಕ ಅಂಶ ಬಿಚ್ಚಿಟ್ಟ ಲಾಯರ್

Updated on: Jun 13, 2025 | 3:42 PM

ಶಾಸಕ ವಿನಯ್ ಕುಲಕರ್ಣಿಯನ್ನು ಸಿಬಿಐ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಯೋಗೇಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಜಾಮೀನು ಅರ್ಜಿ ಮಾಡಿದ್ದಲ್ಲೇ ಒಂದು ವಾರದೊಳಿಗೆ ಕೋರ್ಟ್​ ಗೆ ಹಾಜರಾಗಬೇಕೆಂದು ವಿನಯ್ ಕುಲಕರ್ಣಿಗೆ ಸೂಚನೆ ನೀಡಿತ್ತು. ಅದಂತೆ ಇಂದು(ಜೂನ್ 12) ವಿನಯ್ ಕುಲಕರ್ಣಿ ಅವರು ಕೋರ್ಟ್​ ಗೆ ಹಾಜರಾಗಿದ್ದು, ಬಳಿಕ ಕೋರ್ಟ್ ಸೂಚನೆಯ ಮೇರೆಗೆ ಸಿಬಿಐ ಅಧಿಕಾರಿಗಳು ವಶಕ್ಕೆ ಪಡೆದುಕೊಂಡು ಪರಪ್ಪನ ಅಗ್ರಹಾರ ಜೈಲಿಗೆ ಕರೆದೊಯ್ಯುತ್ತಿದ್ದಾರೆ

ಬೆಂಗಳೂರು, (ಜೂನ್ 13): ಶಾಸಕ ವಿನಯ್ ಕುಲಕರ್ಣಿಯನ್ನು ಸಿಬಿಐ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಯೋಗೇಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಜಾಮೀನು ಅರ್ಜಿ ಮಾಡಿದ್ದಲ್ಲೇ ಒಂದು ವಾರದೊಳಿಗೆ ಕೋರ್ಟ್​ ಗೆ ಹಾಜರಾಗಬೇಕೆಂದು ವಿನಯ್ ಕುಲಕರ್ಣಿಗೆ ಸೂಚನೆ ನೀಡಿತ್ತು. ಅದಂತೆ ಇಂದು(ಜೂನ್ 13) ವಿನಯ್ ಕುಲಕರ್ಣಿ ಅವರು ಕೋರ್ಟ್​ ಗೆ ಹಾಜರಾಗಿದ್ದು, ಬಳಿಕ ಕೋರ್ಟ್ ಸೂಚನೆಯ ಮೇರೆಗೆ ಸಿಬಿಐ ಅಧಿಕಾರಿಗಳು ವಶಕ್ಕೆ ಪಡೆದುಕೊಂಡು ಪರಪ್ಪನ ಅಗ್ರಹಾರ ಜೈಲಿಗೆ ಕರೆದೊಯ್ಯುತ್ತಿದ್ದಾರೆ.

ಇನ್ನು ಈ ಬಗ್ಗೆ ಎಸ್ಪಿಪಿ ಗಂಗಾಧರ ಶೆಟ್ಟಿ ಪ್ರತಿಕ್ರಿಯಿಸಿ, ಸುಪ್ರೀಂ ಕೋರ್ಟ್ ನಲ್ಲಿ ಅವರ ಜಾಮೀನು ಅರ್ಜಿ ವಜಾ ಆಗಿತ್ತು. ಒಂದು ವಾರದ ಒಳಗೆ ನ್ಯಾಯಲಯಕ್ಕೆ ಹಾಜರಾಗಲು ಆದೇಶ ನೀಡಲಾಗಿತ್ತು. ಇಂದು ನ್ಯಾಯಾಲಯಕ್ಕೆ ಹಾಜರಾದ ಮೇಲೆ ಅವರನ್ನ ಜೈಲಿಗೆ ಕಳಿಸಲಾಗಿದೆ. ಇತ್ತೀಚೆಗೆ ಹೈ ಕೋರ್ಟ್ ನಲ್ಲಿ ಚಂದ್ರಶೇಖರ ಎಂಬ ಆರೋಪಿ ಜಾಮೀನು ಅರ್ಜಿಯನ್ನೂ ಹೈ ಕೋರ್ಟ್ ವಜಾ ಮಾಡಿತ್ತು. ಇದು ಸಮಾಜಕ್ಕೆ ಒಂದು ಒಳ್ಳೆ ಸಂದೇಶ. ಯಾರೇ ಆಗಿದ್ರು ತಪ್ಪು ಮಾಡಿದ್ರೆ ಅಂತವರ ವಿರುದ್ಧ ಕ್ರಮ ಆಗುತ್ತೆ ಎಂದು ಹೇಳಿದರು.

.ನ್ಯಾಯಲಯದಲ್ಲಿಯೇ ಪ್ರತ್ಯಕ್ಷ, ಪರೋಕ್ಷವಾಗಿ ಸಾಕ್ಷಿಧಾರರಿಗೆ ಬೆದರಿಕೆ ಹಾಕುವ ಕೆಲಸಗಳು ಆಗುತ್ತಿದೆ. ಅಂತವರ ಬಗ್ಗೆ ನ್ಯಾಯಲಯ ಕ್ರಮ ಕೈಗೊಳ್ಳುತ್ತೆ. ಎ9 ಆರೋಪಿ ಅಶ್ವಥ್ ಎಂಬಾತ ಮಹಿಳಾ ಸಾಕ್ಷಿಯೊಬ್ಬರಿಗೆ ಬೆದರಿಕೆ ಹಾಕಿದ್ದ. ಸಾಕ್ಷಿಧಾರರಿಗೆ ರಕ್ಷಣೆ ನೀಡಲು ಮನವಿ ಮಾಡಿದ್ವಿ. ಕೇಂದ್ರ ತನಿಖಾ ಸಂಸ್ಥೆಯಿಂದ ಮಹಿಳಾ ಸಾಕ್ಷಿಗೆ ರಕ್ಷಣೆ ಆದೇಶ ಆಗಿದೆ. ಅಶ್ವಥ್ ಜಾಮೀನು ರದ್ದು ಮಾಡಲು ಮನವಿ ಮಾಡಲಾಗಿದೆ ಎಂದರು.

Published on: Jun 13, 2025 02:18 PM