ನಿರಂತರ 9 ಗಂಟೆಗಳ ಕಾರ್ಯಾಚರಣೆ ಬಳಿಕ ಕಾಳಿ ನದಿಗೆ ಬಿದ್ದಿದ್ದ ಲಾರಿ ಹೊರಕ್ಕೆ

Edited By:

Updated on: Aug 15, 2024 | 8:36 PM

ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕೊಡಿಭಾಗ್ ಬಳಿಯ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ್ ಕಲ್ಪಿಸಲು ಕಾಳಿ ನದಿಗೆ ಕಟ್ಟಿರುವ ಸೇತುವೆ ಕಳೆದ ಆಗಸ್ಟ್ 6 ರ ಮಧ್ಯರಾತ್ರಿ ಕುಸಿದಿತ್ತು. ಈ ವೇಳೆ ಕಾಳಿ ನದಿಗೆ ಬಿದ್ದಿದ್ದ ಲಾರಿಯನ್ನು ಸತತ ಕಾರ್ಯಚರಣೆ ಮೂಲಕ ರಕ್ಷಣಾ ಸಿಬ್ಬಂದಿಗಳು ಇಂದು ಮೇಲಕ್ಕೆತ್ತಿದ್ದಾರೆ.

ಕಾರವಾರ, ಆಗಸ್ಟ್​ 15: ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕೊಡಿಬಾಗ್ ಬ್ರಿಡ್ಜ್ (bridge collapse)​ ಬಳಿ ಕಾಳಿ ನದಿಗೆ ಬಿದ್ದಿದ್ದ ಲಾರಿಯನ್ನು ಸತತ ಕಾರ್ಯಚರಣೆ ಮೂಲಕ ರಕ್ಷಣಾ ಸಿಬ್ಬಂದಿಗಳು ಮೇಲಕ್ಕೆತ್ತಿದ್ದಾರೆ. ಮಳೆ ಪ್ರಮಾಣ ತಗ್ಗಿದ ಹಿನ್ನೆಲೆ ಇಂದು ಬೆಳಿಗ್ಗೆ‌ 9 ಗಂಟೆಯಿಂದ ಐಆರ್​ಬಿ ಹಾಗೂ ಜಿಲ್ಲಾಡಳಿತದಿಂದ ಜಂಟಿ ಕಾರ್ಯಾಚರಣೆ ಮಾಡಲಾಗಿದೆ. ಹೀಗಾಗಿ ಸ್ಥಳದಲ್ಲಿ ಪೊಲೀಸರು, ಅಧಿಕಾರಿಗಳು ಬೀಡು ಬಿಟ್ಟಿದ್ದರು. ಆಗಸ್ಟ್ 7ರಂದು ಸೇತುವೆ ಕುಸಿದಾಗ ಕಾಳಿ ನದಿಗೆ ಲಾರಿ ಬಿದ್ದಿತ್ತು. ತಮಿಳುನಾಡು ಮೂಲದ ಸೆಂಥಿಲ್ ಒಡೆತನದ ಲಾರಿಯನ್ನು 2 ಕ್ರೇನ್, 3 ಟೋಯಿಂಗ್ ವೆಹಿಕಲ್, ಈಶ್ವರ ಮಲ್ಪೆ ತಂಡದಿಂದ ಹೊರತೆಗೆಯಲಾಗಿದೆ. ಜಿಲ್ಲಾಡಳಿತದ ಅಧಿಕಾರಿಗಳು ಸೇರಿ 100ಕ್ಕೂ ಜನರ ಪ್ರಯತ್ನ ಸಫಲವಾಗಿದೆ. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Loading...
Unable to load recommendations.
Follow Us
ಸೂರಜ್​, ಮಹಾವೀರ್​ ಉತ್ತುರೆ

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನವಲಿಹಾಳ ಗ್ರಾಮದ ಸೂರಜ ಉತ್ತೂರೆ. ಕಸ್ತೂರಿ ವಾಹಿನಿಯಲ್ಲಿ ರಾಜಕೀಯ ವರದಿಗಾರನಾಗಿ ಪತ್ರಿಕೊದ್ಯಮ ಪ್ರವೇಶಿಸಿದ ಇವರು. ಡಿಸೆಂಬರ್ 2022 ರಂದು ಹಾವೇರಿ ಜಿಲ್ಲೆ tv9 ವರದಿಗಾರನಾಗಿ ಕೆಲಸ ಆರಂಭಿಸಿದ್ರು ನವೆಂಬರ್ 2023 ರಂದು ಉತ್ತರ ಕನ್ನಡ ಜಿಲ್ಲೆಗೆ ವರ್ಗಾವಣೆ ಆಗಿದ್ದೂ ಸದ್ಯ ಉತ್ತರ ಕನ್ನಡ ಜಿಲ್ಲೆಯ tv9 ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ.

Read More