ನಾಳೆ ಗೊತ್ತಾಗಲಿವೆ ಮೆಟ್ರೋ ಪ್ರಯಾಣದ ಪರಿಷ್ಕೃತ ದರಗಳು, ಏರಿಕೆಗೆ ಬಿಎಂಆರ್ಸಿಲ್ ಬೋರ್ಡ್ ಒಪ್ಪಿಗೆ
ಮೆಟ್ರೋ ಪ್ರಯಾಣದ ದರ ಎಷ್ಟು ಪರ್ಸೆಂಟ್ ಹೆಚ್ಚಾಗಲಿದೆ. ಪ್ರತಿ ಸ್ಟೇಜ್ಗೆ ಪ್ರಯಾಣಿಕರು ಎಷ್ಟು ಹೆಚ್ಚುವರಿ ಹಣ ನೀಡಬೇಕಾಗುತ್ತದೆ ಅನ್ನೋದನ್ನು ಮತ್ತೊಂದು ಸಲ ಬೋರ್ಡ್ ಚರ್ಚಿಸಲಿದ್ದು ಹೆಚ್ಚಳ ಮಾಡಿರುವ ಅಂಕಿ ಅಂಶಗಳನ್ನು ನಾಳೆ (ಶುಕ್ರವಾರ) ಪ್ರೆಸ್ ಮೀಟ್ ನಡೆಸಿ ತಿಳಿಸಲಾಗುವುದು ಮತ್ತು ಪರಿಷ್ಕೃತ ದರಗಳು ಜಾರಿಗೊಳ್ಳುವ ದಿನಾಂಕವನ್ನೂ ನಾಳೆಯೇ ತಿಳಿಸಲಾಗುವುದೆಂದು ಚೌಹಾನ್ ಹೇಳಿದರು.
ಬೆಂಗಳೂರು: ರಾಜ್ಯದಲ್ಲಿ ದರ ಏರಿಕೆಯ ಪರ್ವ ಮುಂದುವರಿದಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಬಿಎಂಟಿಸಿ ಟಿಕೆಟ್ ದರವನ್ನು ಶೇಕಡ15ರಷ್ಟು ಹೆಚ್ಚಿಸಿದ ಬೆನ್ನಲ್ಲೇ ಬೆಂಗಳೂರು ನಗರದ ಮತ್ತೊಂದು ಪ್ರಮುಖ ಸಾರಿಗೆ ಸಂಪರ್ಕ ಸಾಧನವಾಗಿರುವ ಮೆಟ್ರೋ ಟ್ರೈನು ಪ್ರಯಾಣದ ದರ ಹೆಚ್ಚಿಸಲು ಬಿಎಂಆರ್ಸಿಲ್ ಸಿದ್ದತೆಗಳನ್ನು ಮಾಡಿಕೊಂಡಿದೆ. ಇವತ್ತು ನಗರದಲ್ಲಿ ನಡೆದ ಬೋರ್ಡ್ ಮೀಟಿಂಗ್ ನಲ್ಲಿ ಸಂಸ್ಥೆಯ ದರ ಏರಿಕೆ ಸಮಿತಿ ನೀಡಿದ ಶಿಫಾರಸ್ಸುಗಳನ್ನು ಮಂಡಳಿಯ ಮುಂದೆ ಮಂಡಿಸಲಾಗಿದ್ದು ದರ ಹೆಚ್ಚಳಕ್ಕೆ ಅನುಮೋದನೆ ಸಿಕ್ಕಿದೆ ಎಂದು ಬಿಎಂಆರ್ಸಿಎಲ್ ಹಿರಿಯ ಸಾರ್ವಜನಿಕ ಸಂಪರ್ಕಾಧಿಕಾರಿ ಯಶ್ವಂತ್ ಚೌಹಾನ್ ಹೇಳಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: 1,000 ಕಿಮೀ ಮೈಲಿಗಲ್ಲು; ವಿಶ್ವದ ಮೂರನೇ ಅತಿದೊಡ್ಡ ಮೆಟ್ರೋ ಜಾಲ ಭಾರತದ್ದು