AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಪಂದನ ವಿಜಯ್ ಅಂತ್ಯಕ್ರಿಯೆ: ಅತ್ತಿಗೆಯ ಅಂತಿಮ ಸಂಸ್ಕಾರದ ಸರ್ವ ವಿಧಿವಿಧಾನಗಳನ್ನು ಪೂರೈಸಿದ ಬಳಿಕ ಮುರಳಿ ಮನೆಗೆ ಹೊರಟರು

ಸ್ಪಂದನ ವಿಜಯ್ ಅಂತ್ಯಕ್ರಿಯೆ: ಅತ್ತಿಗೆಯ ಅಂತಿಮ ಸಂಸ್ಕಾರದ ಸರ್ವ ವಿಧಿವಿಧಾನಗಳನ್ನು ಪೂರೈಸಿದ ಬಳಿಕ ಮುರಳಿ ಮನೆಗೆ ಹೊರಟರು

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 09, 2023 | 7:13 PM

ಶ್ರೀಮುರಳಿ ಹಿರಿಯರೆಲ್ಲರನ್ನು ಮನೆಗೆ ತಲುಪಿಸಿದ ಬಳಿಕ ತಮ್ಮ ಕುಟುಂಬದ ಜೊತೆಗೆ ವಾಪಸ್ಸು ಹೋಗುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಹೊರಡುವ ಮೊದಲು ಸಹ ಅವರು ಬಿಕೆ ಶಿವರಾಂ ಮನೆ ಬಳಿ ಕೆಲವರನ್ನು ಸಂತೈಸುತ್ತಿದ್ದಾರೆ.

ಬೆಂಗಳೂರು: ಸೋಮವಾರ ಬೆಳಗ್ಗೆ ಥಾಯ್ಲೆಂಡ್ ರಾಜಧಾನಿ ಬ್ಯಾಂಕಾಕ್ ನಲ್ಲಿ ಹಠಾತ್ತನೆ ನಿಧಾನರಾದ ಸ್ಪಂದನ ವಿಜಯರಾಘವೇಂದ್ರ ಅವರ ಅಂತಿಮ ವಿಧಿವಿಧಾನಗಳು ನಗರದ ಹರಿಶ್ಚಂದ್ರ ಘಾಟ್ ನಲ್ಲಿರುವ ಚಿತಾಗಾರದಲ್ಲಿ (Harishchandra Ghat Crematorium) ಇಂದು ಸಾಯಂಕಾಲ ನೆರವೇರಿದವು. ಕುಟುಂಬದವರು ಮತ್ತು ಆಪ್ತರಲ್ಲದೆ ಸಾವಿರಾರು ಜನ ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಕಳೆದ ಮೂರು ದಿನಗಳಿಂದ ಅಗಲಿದ ಅತ್ತಿಗೆಯ ತವರು ಮನೆಯಲ್ಲೇ ಇದ್ದು ಎಲ್ಲ ವ್ಯವಸ್ಥೆಗಳನ್ನು ನೋಡಿಕೊಳ್ಳುತ್ತಿದ್ದ ವಿಜಯರಾಘವೇಂದ್ರ ಕಿರಿಯ ಸಹೋದರ ಶ್ರೀಮುರಳಿ (Sri Murali) ಹಿರಿಯರೆಲ್ಲರನ್ನು ಮನೆಗೆ ತಲುಪಿಸಿದ ಬಳಿಕ ತಮ್ಮ ಕುಟುಂಬದ ಜೊತೆಗೆ ವಾಪಸ್ಸು ಹೋಗುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಹೊರಡುವ ಮೊದಲು ಸಹ ಅವರು ಬಿಕೆ ಶಿವರಾಂ (BK Shivaram) ಮನೆ ಬಳಿ ಕೆಲವರನ್ನು ಸಂತೈಸುತ್ತಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ