ಕೇದಾರನಾಥದಲ್ಲಿ ಈ ಋತುವಿನ ಮೊದಲ ಹಿಮಪಾತ; ಭಕ್ತರ ಮೇಲೆ ಹಿಮದ ಮಳೆ!
ಕೇದಾರನಾಥ ದೇವಾಲಯದ ಆವರಣ, ಭೈರವನಾಥ ಗುಡ್ಡ ಹಾಗೂ ಸುತ್ತಮುತ್ತಲಿನ ಪರ್ವತ ಶ್ರೇಣಿಗಳು ಪೂರ್ಣವಾಗಿ ಹಿಮದಿಂದ ಆವೃತಗೊಂಡಿದ್ದು, ಪ್ರಕೃತಿಯ ಈ ಸೌಂದರ್ಯವನ್ನು ಕಣ್ಣುಂಬಿಕೊಳ್ಳಲು ಭಕ್ತಾದಿಗಳು ಹಾಗೂ ಪ್ರವಾಸಿಗರು ಸಂಭ್ರಮಿಸುತ್ತಿದ್ದಾರೆ. ಹವಾಮಾನ ವೈಪರೀತ್ಯ ಹಾಗೂ ಉಷ್ಣಾಂಶ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಧಾಮಕ್ಕೆ ಆಗಮಿಸುವ ಯಾತ್ರಿಕರು ಕಡ್ಡಾಯವಾಗಿ ಬೆಚ್ಚಗಿನ ಉಡುಪುಗಳು ಮತ್ತು ಅತ್ಯಗತ್ಯ ವೈದ್ಯಕೀಯ ಸೌಲಭ್ಯಗಳೊಂದಿಗೆ ಬರಬೇಕು ಎಂದು ಸ್ಥಳೀಯ ಆಡಳಿತ ಹಾಗೂ ಪೊಲೀಸ್ ಇಲಾಖೆ ಮನವಿ ಮಾಡಿದೆ.
ಕೇದಾರನಾಥ, ಅಕ್ಟೋಬರ್ 30:: ಉತ್ತರಾಖಂಡದ ಪ್ರಸಿದ್ಧ ಪವಿತ್ರ ಯಾತ್ರಾಸ್ಥಳವಾದ ಕೇದಾರನಾಥ ಧಾಮದಲ್ಲಿ ನಿನ್ನೆಯಿಂದ ಸತತವಾಗಿ ಬೀಳುತ್ತಿರುವ ಹಿಮದಿಂದಾಗಿ ಪರಿಸರ ಪೂರ್ತಿ ಬದಲಾಗಿದೆ. ಕೇದಾರನಾಥದಲ್ಲಿ ಈ ಋತುವಿನ ಮೊದಲ ಹಿಮಪಾತ ಉಂಟಾಗಿದ್ದು, ಮಂದಿರದ ಸುತ್ತಮುತ್ತಲಿನ ಹಿಮಾಲಯನ್ ಬೆಟ್ಟಗಳು ಹಾಗೂ ಆವರಣವು ದಟ್ಟವಾದ ಬಿಳಿ ಹಿಮದ ಹೊದಿಕೆಯಿಂದ ಕಂಗೊಳಿಸುತ್ತಿವೆ. ನಿರಂತರ ಹಿಮಪಾತ ಹಾಗೂ ತಂಪಾದ ಗಾಳಿಯ ಪರಿಣಾಮವಾಗಿ ಕೇದಾರನಾಥ ಕಣಿವೆಯಲ್ಲಿ ತಾಪಮಾನವು ಗಣನೀಯವಾಗಿ ಕುಸಿದಿದ್ದು, ಶೂನ್ಯಕ್ಕಿಂತ ಕೆಳಮಟ್ಟಕ್ಕೆ ಕುಸಿಯುವ ಮೂಲಕ ತೀವ್ರ ಚಳಿ ಆವರಿಸಿದೆ.
ಕೇದಾರನಾಥ ದೇವಾಲಯದ ಆವರಣ, ಭೈರವನಾಥ ಗುಡ್ಡ ಹಾಗೂ ಸುತ್ತಮುತ್ತಲಿನ ಪರ್ವತ ಶ್ರೇಣಿಗಳು ಪೂರ್ಣವಾಗಿ ಹಿಮದಿಂದ ಆವೃತಗೊಂಡಿದ್ದು, ಪ್ರಕೃತಿಯ ಈ ಸೌಂದರ್ಯವನ್ನು ಕಣ್ಣುಂಬಿಕೊಳ್ಳಲು ಭಕ್ತಾದಿಗಳು ಹಾಗೂ ಪ್ರವಾಸಿಗರು ಸಂಭ್ರಮಿಸುತ್ತಿದ್ದಾರೆ. ಹವಾಮಾನ ವೈಪರೀತ್ಯ ಹಾಗೂ ಉಷ್ಣಾಂಶ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಧಾಮಕ್ಕೆ ಆಗಮಿಸುವ ಯಾತ್ರಿಕರು ಕಡ್ಡಾಯವಾಗಿ ಬೆಚ್ಚಗಿನ ಉಡುಪುಗಳು ಮತ್ತು ಅತ್ಯಗತ್ಯ ವೈದ್ಯಕೀಯ ಸೌಲಭ್ಯಗಳೊಂದಿಗೆ ಬರಬೇಕು ಎಂದು ಸ್ಥಳೀಯ ಆಡಳಿತ ಹಾಗೂ ಪೊಲೀಸ್ ಇಲಾಖೆ ಮನವಿ ಮಾಡಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ