ನ್ಯಾಯಾಧೀಶರಿಂದ ತರಾಟೆಗೊಳಗಾದ ಪೊಲೀಸರು ಮುರುಘಾ ಮಠದ ಶಿವಮೂರ್ತಿ ಸ್ವಾಮೀಜಿಗಳ ವಿಚಾರಣೆ ಶುರುಮಾಡಿದ್ದಾರೆ

ನ್ಯಾಯಾಧೀಶರಿಂದ ತರಾಟೆಗೊಳಗಾದ ಪೊಲೀಸರು ಮುರುಘಾ ಮಠದ ಶಿವಮೂರ್ತಿ ಸ್ವಾಮೀಜಿಗಳ ವಿಚಾರಣೆ ಶುರುಮಾಡಿದ್ದಾರೆ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 03, 2022 | 12:20 PM

ಶುಕ್ರವಾರ ಜೈಲು ಮತ್ತು ಆಸ್ಪತ್ರೆಗಳಲ್ಲಿ ನಡೆದ ನಾಟಕೀಯ ಬೆಳವಣಿಗೆಗಳನ್ನು ಇಡೀ ಕರ್ನಾಟಕ ವೀಕ್ಷಿಸಿದೆ. ಏತನ್ಮಧ್ಯೆ, ಪೊಲೀಸರ ತನಿಖಾ ವೈಖರಿಯಿಂದ ಅಸಮಾಧಾನಗೊಂಡಿರುವ ನ್ಯಾಯಾಧೀಶರು ಸ್ವಾಮೀಜಿಯನ್ನು ಇತರ ಆರೋಪಿಗಳಂತೆ ಪರಿಗಣಿಸಲು ಸೂಚಿಸಿದ್ದಾರೆ.

ಮಠದ ಅನುಯಾಯಿಗಳ (followers) ನಡುವೆ ಮಠದಲ್ಲಿ ನಿರಾತಂಕದಿಂದ ಇರುತ್ತಿದ್ದ ಶಿವಮೂರ್ತಿ ಸ್ವಾಮೀಜಿಗಳ ಬದುಕು ಈಗ ಜೈಲಿನ ಕತ್ತಲು ಕೋಣೆಗೆ ಶಿಫ್ಟ್ ಆಗಿದೆ. ಗುರುವಾರ ಸ್ವಾಮೀಜಿಯನ್ನು ಬಂಧಿಸಿದ ನಂತರ ಶುಕ್ರವಾರ ಜೈಲು ಮತ್ತು ಆಸ್ಪತ್ರೆಗಳಲ್ಲಿ ನಡೆದ ನಾಟಕೀಯ ಬೆಳವಣಿಗೆಗಳನ್ನು (dramatic developments) ಇಡೀ ಕರ್ನಾಟಕ ವೀಕ್ಷಿಸಿದೆ. ಏತನ್ಮಧ್ಯೆ, ಪೊಲೀಸರ ತನಿಖಾ ವೈಖರಿಯಿಂದ ಅಸಮಾಧಾನಗೊಂಡಿರುವ ನ್ಯಾಯಾಧೀಶರು (judge) ಸ್ವಾಮೀಜಿಯನ್ನು ಇತರ ಆರೋಪಿಗಳಂತೆ ಪರಿಗಣಿಸಲು ಸೂಚಿಸಿದ್ದಾರೆ. ನ್ಯಾಯಾಲಯದಿಂದ ತರಾಟೆಗೆಗೊಳಗಾದ ಪೊಲೀಸರು ಸ್ವಾಮೀಜಿಗಳನ್ನು 3-ದಿನ ಕಸ್ಟಡಿಗೆ ಪಡೆದು ವಿಚಾರಣೆ ಆರಂಭಿಸಿದ್ದಾರೆ.