ಡಿನ್ನರ್ ಆಯ್ತು ಈಗ ರಾಜ್ಯೋತ್ಸವ ಸಭೆ ಹೆಸರಿನಲ್ಲಿ ಸಿಎಂ ಸಿದ್ದರಾಮಯ್ಯ ತಂತ್ರ: ಸಂಪುಟ ಪುನಾರಚನೆಗೆ ಮಾತ್ರ ಮನ್ನಣೆ

Updated on: Oct 27, 2025 | 10:56 AM

ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವರ ವಿಶ್ವಾಸ ಗಳಿಸಲು ರಾಜರಾಜ್ಯೋತ್ಸವ ಪ್ರಶಸ್ತಿ ಸಭೆಯನ್ನು ತಂತ್ರವಾಗಿ ಬಳಸುತ್ತಿದ್ದಾರೆ. ನಾಯಕತ್ವ ಬದಲಾವಣೆ ವದಂತಿಗಳ ನಡುವೆ ಸಂಪುಟ ಪುನಾರಚನೆ ಮೂಲಕ ಸ್ಥಿರತೆಯ ಸಂದೇಶ ನೀಡಲು ಸಿದ್ದರಾಮಯ್ಯ ಮುಂದಾಗಿದ್ದಾರೆ. ಆದರೆ, ಡಿ.ಕೆ. ಶಿವಕುಮಾರ್ ಅವರು ದೆಹಲಿಗೆ ತೆರಳಿದ್ದು, ಹೈಕಮಾಂಡ್ ಭೇಟಿಗೆ ಸಮಯ ಕೋರಿದ್ದಾರೆ. ಹೈಕಮಾಂಡ್ ನಿರ್ಧಾರ ಮಹತ್ವ ಪಡೆಯಲಿದೆ.

ಬೆಂಗಳೂರು, ಅಕ್ಟೋಬರ್ 27: ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವರ ವಿಶ್ವಾಸ ಗಳಿಸಲು ಹೊಸ ತಂತ್ರಕ್ಕೆ ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇತ್ತೀಚೆಗೆ ನಡೆದ ಡಿನ್ನರ್ ಮೀಟಿಂಗ್‌ ನಡೆಸಿದ್ದ ಅವರು ಇದೀಗ, ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಯ ಸಭೆಯನ್ನು ಬಳಸಿಕೊಂಡು ಸಚಿವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಈ ಮೂಲಕ, ನಾಯಕತ್ವ ಬದಲಾವಣೆ ಇಲ್ಲ ಎಂಬ ಸಂದೇಶ ರವಾನಿಸಲು ಅವರು ಉದ್ದೇಶಿಸಿದ್ದಾರೆ. ಅದಕ್ಕಾಗಿ ಸಂಪುಟ ಪುನಾರಚನೆ ಮೇಲೆ ಮಾತ್ರ ಗಮನ ಹರಿಸಲು ಅವರು ತಂತ್ರ ಹೂಡಿದ್ದಾರೆ. ಸಿದ್ದರಾಮಯ್ಯ ಅಕ್ಟೋಬರ್ 28ರಂದು ಸಚಿವರು ಮತ್ತು ಶಾಸಕರ ಅನೌಪಚಾರಿಕ ಸಭೆ ಕರೆದಿದ್ದಾರೆ. ಇದರ ಮುಖ್ಯ ಉದ್ದೇಶ, ರಾಜರಾಜ್ಯೋತ್ಸವ ಪ್ರಶಸ್ತಿಯ ನೆಪದಲ್ಲಿ ಮುಂದಿನ ತಂತ್ರಗಾರಿಕೆಯ ಬಗ್ಗೆ ಚರ್ಚಿಸುವುದು ಎನ್ನಲಾಗಿದೆ.