ಮೊಟೊ ಜಿ20 ನಂತರ ಮೊಟೊ ಜಿ70 ಟ್ಯಾಬನ್ನು ಭಾರತದಲ್ಲಿ ಲಾಂಚ್ ಮಾಡಲು ಮೊಟೊರೊಲ ಭರದ ಸಿದ್ಧತೆ ನಡೆಸಿದೆ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Nov 27, 2021 | 9:25 PM

ಲಾಂಚ್ ಆಗಲಿರುವ ಟ್ಯಾಬ್ಲೆಟ್ ಅನ್ನು ಮೊದಲ ಬಾರಿ ಗೂಗಲ್ ಪ್ಲೇ ಕನ್ಸೋಲ್ನಲ್ಲಿ ನೋಡಲಾಗಿತ್ತು ಮತ್ತು ಅದು ಈಗ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ನಿಂದ ಸರ್ಟಿಫೈ ಆಗಿದೆ.

ಮೊಟೊರೊಲ ಕಂಪನಿಯು ರೊಚ್ಚಿಗೆದ್ದಂತಿದೆ. ಕೇವಲ ಒಂದು ದಿನದ ಹಿಂದೆ ನಾವು ಈ ಕಂಪನಿಯು 200 ಮೆಗಾಪಿಕ್ಸೆಲ್ ಮೇನ್ ಕೆಮೆರಾ ಅಳವಡಿಸಿರುವ ಸ್ಮಾರ್ಟ್ ಫೋನ್ ಲಾಂಚ್ ಮಾಡಲಿದೆ ಅಂತ ಚರ್ಚಿಸಿದ್ದೆವು. ಇಂದು ಇದೇ ಕಂಪನಿ ಲಾಂಚ್ ಇಷ್ಟರಲ್ಲೇ ಲಾಂಚ್ ಮಾಡಲಿರುವ ಮೊಟೊ ಟ್ಯಾಬ್ ಜಿ70 ಕುರಿತು ಚರ್ಚಿಸಬೇಕಿದೆ. ಮೊಟೊ ಟ್ಯಾಬ್ ಜಿ20 ಈಗಾಗಲೇ ಲಾಂಚ್ ಮಾಡಿರುವ ಮೊಟೊರೊಲ ಸಂಸ್ಥೆಯು ಅದಕ್ಕಿಂತ ಕೊಂಚ್ ಪ್ರಿಮೀಯರ್ ಮೊಟೊ ಟ್ಯಾಬ್ ಜೊ70 ಲಾಂಚ್ ಮಾಡಬಹುದೆಂದು ಹೇಳಲಾಗುತ್ತಿದೆ.

ಲಾಂಚ್ ಆಗಲಿರುವ ಟ್ಯಾಬ್ಲೆಟ್ ಅನ್ನು ಮೊದಲ ಬಾರಿ ಗೂಗಲ್ ಪ್ಲೇ ಕನ್ಸೋಲ್ನಲ್ಲಿ ನೋಡಲಾಗಿತ್ತು ಮತ್ತು ಅದು ಈಗ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ನಿಂದ ಸರ್ಟಿಫೈ ಆಗಿದೆ. ಒಮ್ಮೆ ಈ ಸರ್ಟಿಫಿಕೇಟ್ ಸಿಕ್ಕಿದೆ ಅಂತಾದರೆ, ಪ್ರಾಡಕ್ಟ್ ಅನ್ನು ಭಾರತದಲ್ಲಿ ಶೀಘ್ರದಲ್ಲೇ ಲಾಂಚ್ ಮಾಡಬಹುದು. ಮೊಟೊ ಜಿ 70 ಟ್ಯಾಬ್ ಅನ್ನು ಈಗಾಗಲೇ ಮಾರ್ಕೆಟ್ನಲ್ಲಿರುವ ಲೆನೊವೊ ಟ್ಯಾಬ್ ಪಿ11 ಪ್ಲಸ್ ನ ಬ್ರ್ಯಾಂಡೆಡ್ ಆವೃತ್ತಿ ಅನ್ನಬಹುದು.

ಮೊಟೊ ಟ್ಯಾಬ್ ಜಿ70 ಬಿಐಎಸ್ ಪ್ರಮಾಣೀಕರಣವನ್ನು ಪಾಸು ಮಾಡಿದೆ ಎಂದು ಕಂಪನಿ ಮತ್ತು ಅವುಗಳ ಉತ್ಪಾದನೆ ಕುರಿತು ಒಳಗಿನ ಮಾಹಿತಿ ನೀಡುವ ಮುಕುಲ್ ಶರ್ಮಾ ಟ್ವಿಟರ್‌ನಲ್ಲಿ ಬಹಿರಂಗಪಡಿಸಿದ್ದಾರೆ. ಹಿಂದೆ, ಮೊಟೊ ಟ್ಯಾಬ್ ಜಿ70 ಅನ್ನು ಗೂಗಲ್ ಪ್ಲೇ ಕನ್ಸೋಲ್‌ನಲ್ಲಿ ಗುರುತಿಸಲಾಗಿತ್ತು. ಟ್ಯಾಬ್ಲೆಟ್ ಡಬ್ಲ್ಯುಯುಎಕ್ಸ್ ಜಿಎ ಡಿಸ್ಪ್ಲೇ ಜೊತೆಗೆ 2000 x 1200 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ ಬರುತ್ತದೆ ಅನ್ನೋದು ಲಿಸ್ಟಿಂಗ್ ಮೂಲಕ ಬಹಿರಂಗಗೊಂಡಿದೆ.

ಇದು ಮಿಡಿಯಾಟೆಕ್ ಕೊಂಪಿಯಾನೊ ಎಸ್ಓಸಿ ನಿಂದ ಚಾಲಿತವಾಗಿದೆ ಮತ್ತು ಎಮ್ಟಿ8183ಅ ಮಾದರಿ ಸಂಖ್ಯೆಯನ್ನು ಹೊಂದಿದೆ ಎಂದು ಗೊತ್ತಾಗಿದೆ. ಮೊಟೊ ಟ್ಯಾಬ್ ಜಿ70 4 ಜಿಬಿ ರ್ಯಾಮ್ ರೂಪಾಂತರದಲ್ಲಿ ಬರಬಹುದೆಂದು ನಿರೀಕ್ಷಿಸಲಾಗಿದೆ. ಆದರೆ ಮೊಟೊರೊಲ ಹೆಚ್ಚಿನ ರ್ಯಾಮ್ ರೂಪಾಂತರಗಳನ್ನು ಪ್ರಾರಂಭಿಸಬಹುದು. ಟ್ಯಾಬ್ಲೆಟ್ ಆಂಡ್ರಾಯ್ಡ್ 11 ರಲ್ಲಿ ರನ್ ಆಗುತ್ತದೆ ಮತ್ತು ಇದನ್ನು ಆಂಡ್ರಾಯ್ಡ್ 12 ಗೆ ಅಪ್‌ಗ್ರೇಡ್ ಮಾಡಬಹುದು.

ಅಂದಹಾಗೆ, ಮೊಟೊ ಜಿ70 ಟ್ಯಾಬ್ ಬೆಲೆ ಮತ್ತು ಲಾಂಚ್ ಮಾಡುವ ದಿನವನ್ನು ಮೊಟೊರೊಲ ಬಹಿರಂಗಪಡಿಸಿಲ್ಲ.

ಇದನ್ನೂ ಓದಿ:   ಸೆಲ್ಫಿ ಕೇಳಿ ನಟಿ ಕವಿತಾ ಗೌಡ ಅವರನ್ನು ಕಿಡ್ನ್ಯಾಪ್ ಮಾಡಿದ ದುಷ್ಕರ್ಮಿಗಳು!; ವೈರಲ್ ವಿಡಿಯೋದ ಅಸಲಿಯತ್ತೇನು?