ರತ್ನನ್ ಪ್ರಪಂಚದಲ್ಲಿ ಉಡಾಳ್ ಬಾಬು ಆಗಿ ಮಿಂಚಿದ ಪ್ರಮೋದ್ ಪಂಜು ಹೇಳಿದ ಅಚ್ಚರಿ ವಿಚಾರಗಳು
ಧನಂಜಯ ನಟನೆಯ ‘ರತ್ನನ್ ಪ್ರಪಂಚ’ ಸಿನಿಮಾ ಅಮೇಜಾನ್ ಪ್ರೈಮ್ನಲ್ಲಿ ರಿಲೀಸ್ ಆಗಿ ಮೆಚ್ಚುಗೆ ಪಡೆದುಕೊಂಡಿತ್ತು. ಈ ಸಿನಿಮಾದಲ್ಲಿ ಅನೇಕ ಪಾತ್ರಗಳು ಹೈಲೈಟ್ ಆಗಿವೆ. ಅದರಲ್ಲಿ ಪ್ರಮೋದ್ ಪಂಜು ನಿರ್ವಹಿಸಿದ್ದ ಉಡಾಳ್ ಬಾಬು ಹೆಸರಿನ ಪಾತ್ರವೂ ಒಂದು.
ಧನಂಜಯ ನಟನೆಯ ‘ರತ್ನನ್ ಪ್ರಪಂಚ’ ಸಿನಿಮಾ ಅಮೇಜಾನ್ ಪ್ರೈಮ್ನಲ್ಲಿ ರಿಲೀಸ್ ಆಗಿ ಮೆಚ್ಚುಗೆ ಪಡೆದುಕೊಂಡಿತ್ತು. ಈ ಸಿನಿಮಾದಲ್ಲಿ ಅನೇಕ ಪಾತ್ರಗಳು ಹೈಲೈಟ್ ಆಗಿವೆ. ಅದರಲ್ಲಿ ಪ್ರಮೋದ್ ಪಂಜು ನಿರ್ವಹಿಸಿದ್ದ ಉಡಾಳ್ ಬಾಬು ಹೆಸರಿನ ಪಾತ್ರವೂ ಒಂದು. ದ್ವಿತೀಯಾರ್ಧದಲ್ಲಿ ಬರುವ ಈ ಪಾತ್ರ ಸಾಕಷ್ಟು ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಉತ್ತರ ಕರ್ನಾಟಕ ಶೈಲಿಯಲ್ಲಿ ಮೂಡಿಬಂದ ಈ ಪಾತ್ರಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರಿಗೆ ಬೇಡಿಕೆ ಕೂಡ ಹೆಚ್ಚಿದೆ. ಈ ಎಲ್ಲಾ ವಿಚಾರಗಳ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಹಾಗಾದರೆ, ಪ್ರಮೋದ್ ಅವರು ಏನೆಲ್ಲ ಮಾಹಿತಿ ಹಂಚಿಕೊಂಡರು? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.
ರತ್ನಾಕರ (ಧನಂಜಯ) ಒಬ್ಬ ಮಧ್ಯಮವರ್ಗದ ಹುಡುಗ. ಅವನ ತಾಯಿ ಸರೋಜಾ (ಉಮಾಶ್ರೀ) ವಿಚಿತ್ರ ಸ್ವಭಾವದ ಮಹಿಳೆ. ಆ ಸ್ವಭಾವದ ಕಾರಣದಿಂದಲೇ ತಾಯಿ ಕಂಡರೆ ರತ್ನಾಕರನಿಗೆ ಸದಾ ಕಿರಿಕಿರಿ. ಆದರೆ ಆಕೆ ತನ್ನ ನಿಜವಾದ ತಾಯಿ ಅಲ್ಲ ಎಂಬುದು ಸಿನಿಮಾ ಆರಂಭವಾದ ಕೆಲವೇ ನಿಮಿಷಗಳಲ್ಲಿ ರತ್ನಾಕರನಿಗೆ ಗೊತ್ತಾಗುತ್ತದೆ. ಹಾಗಾದರೆ ತನ್ನ ನಿಜವಾದ ತಾಯಿ ಯಾರು ಎಂಬುದನ್ನು ಕಂಡು ಹಿಡಿಯಲು ರತ್ನಾಕರ ಮಾಡುವ ಪ್ರಯತ್ನ ಕಥೆ ‘ರತ್ನನ್ ಪ್ರಪಂಚ’ದಲ್ಲಿದೆ.
ಇದನ್ನೂ ಓದಿ: