Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾಸನದಲ್ಲಿ ಚಪ್ಪಲಿ ಅಂಗಡಿಗೆ ಬೆಂಕಿಬಿದ್ದು ಲಕ್ಷಾಂತರ ಬೆಲೆಯ ಪಾದರಕ್ಷೆಗಳು ಭಸ್ಮ, ಶಾರ್ಟ್ ಸರ್ಕ್ಯೂಟ್​ನಿಂದಾದ ಅವಗಢ

ಹಾಸನದಲ್ಲಿ ಚಪ್ಪಲಿ ಅಂಗಡಿಗೆ ಬೆಂಕಿಬಿದ್ದು ಲಕ್ಷಾಂತರ ಬೆಲೆಯ ಪಾದರಕ್ಷೆಗಳು ಭಸ್ಮ, ಶಾರ್ಟ್ ಸರ್ಕ್ಯೂಟ್​ನಿಂದಾದ ಅವಗಢ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Nov 27, 2021 | 5:35 PM

ಅಗ್ನಿ ಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರಾದರೂ ಚಪ್ಪಲಿ ಅಂಗಡಿಯಲ್ಲಿದ್ದ ದಾಸ್ತಾನು ಉಳಿಸಲು ಸಾಧ್ಯವಾಗಿಲ್ಲ. ಈ ದುರ್ಘಟನೆಯಲ್ಲಿ ಅಂಗಡಿ ಮಾಲೀಕನ ಅಜಾಗರೂಕತೆ ಮತ್ತು ನಿರ್ಲಕ್ಷ್ಯ ಧೋರಣೆ ಸ್ಪಷ್ಟವಾಗಿ ಕಾಣುತ್ತಿದೆ.

ರಾಜ್ಯದಲ್ಲಿ ಪ್ರತಿವರ್ಷ ನಡೆಯುವ ಬೆಂಕಿ ಆಕಸ್ಮಿಕಗಳ ಸರಾಸರಿಯನ್ನು ನೋಡಿದ್ದೇಯಾದರೆ, ಪ್ರಾಯಶಃ 2021 ರಲ್ಲಿ ಅತಿಹೆಚ್ಚು ದುರ್ಘಟನೆಗಳು ನಡೆದಿರಬಹುದು ಅನಿಸುತ್ತದೆ. ಪ್ರತಿ ತಿಂಗಳು 2-3 ಅಗ್ನಿ ಅವಗಢಗಳ ಬಗ್ಗೆ ನಾವು ಕೇಳುತ್ತಿರುತ್ತೇವೆ. ಇಂದು ಹಾಸನದಲ್ಲಿ ಬೆಂಕಿ ದುರ್ಘಟನೆ ನಡೆದಿದೆ. ನಗರದ ಕಸ್ತೂರ್ಬಾ ರಸ್ತೆಯಲ್ಲಿರುವ ಚಪ್ಪಲಿ ಅಂಗಡಿಯೊಂದಕ್ಕೆ ಬೆಂಕಿ ಹೊತ್ತಿಕೊಂಡು ಆ ಪ್ರದೇಶದಲ್ಲಿ ಆತಂಕದ ಸ್ಥಿತಿ ನಿರ್ಮಾಣಗೊಂಡಿತ್ತು. ಅಂಗಡಿಯಲ್ಲಿದ್ದ ಲಕ್ಷಾಂತರ ರೂ. ಬೆಲೆಯ ಪಾದರಕ್ಷೆಗಳು ಮತ್ತು ಅಲ್ಲಿದ್ದ ಇತರ ವಸ್ತುಗಳು ಸುಟ್ಟು ಭಸ್ಮವಾಗಿವೆ. ಅದೃಷ್ಟವಶಾತ್ ಈ ಏರಿಯಾ ಅಂಗಡಿ ಮುಂಗಟ್ಟುಗಳಿಂದ ಆವರಿಸಿದ್ದರೂ ಪಕ್ಕದ ಅಂಗಡಿಗಳಿಗೆ ಬೆಂಕಿ ಹೊತ್ತಿಕೊಂಡಿಲ್ಲ.

ಅದರೆ ಹೊಗೆಯಿಂದಾಗಿ ಅಕ್ಕಪಕ್ಕದ ಅಂಗಡಿಗಳ ಗೋಡೆಗಳು ಕಪ್ಪಾಗಿವೆ. ಅಪೊಲೋ ಫಾರ್ಮಸಿ ಫಲಕ ಮತ್ತು ಗೋಡೆ ಕಪ್ಪಾಗಿವೆ. ಶಾರ್ಟ್ ಸರ್ಕ್ಯುಟ್ ನಿಂದ ಅಂಗಡಿಗೆ ಬೆಂಕಿ ತಾಕಿತು ಅಂತ ಹೇಳಲಾಗುತ್ತಿದೆ. ಅಂಗಡಿ ಹೊರಗಿರುವ ವಿದ್ಯುತ್ ಕಂಬಗಳು ಮತ್ತು ಅಪಾಯಕಾರಿಯಾಗಿ ಜೋತಾಡುತ್ತಿರುವ ವೈರ್ಗಳನ್ನು ನೋಡುತ್ತಿದ್ದರೆ, ಶಾರ್ಟ್ ಸರ್ಕ್ಯೂಟ್ ಸಾಧ್ಯತೆ ನಿಚ್ಚಳವಾಗಿ ಗೋಚರಿಸುತ್ತದೆ.

ಅಗ್ನಿ ಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರಾದರೂ ಚಪ್ಪಲಿ ಅಂಗಡಿಯಲ್ಲಿದ್ದ ದಾಸ್ತಾನು ಉಳಿಸಲು ಸಾಧ್ಯವಾಗಿಲ್ಲ. ಈ ದುರ್ಘಟನೆಯಲ್ಲಿ ಅಂಗಡಿ ಮಾಲೀಕನ ಅಜಾಗರೂಕತೆ ಮತ್ತು ನಿರ್ಲಕ್ಷ್ಯ ಧೋರಣೆ ಸ್ಪಷ್ಟವಾಗಿ ಕಾಣುತ್ತಿದೆ. ಎರ್ರಾಬಿರ್ರಿಯಾಗಿ ನೇತಾಡುತ್ತಿರುವ ವೈರ್ ಗಳನ್ನು ನೀಟಾಗಿ ಜೋಡಿಸಿ ಎತ್ತರಿಸದಿದ್ದರೆ ಮುಂದೆಯೂ ಅನಾಹುತ ತಪ್ಪಿದ್ದಲ್ಲ.

ಇದನ್ನೂ ಓದಿ:   Nathan Smith Catch: ನ್ಯೂಜಿಲೆಂಡ್ ಆಟಗಾರ ಹಿಡಿದ ಕ್ಯಾಚ್ ಕಂಡು ನಿಬ್ಬೆರಗಾದ ಕ್ರಿಕೆಟ್ ಜಗತ್ತು: ಇಲ್ಲಿದೆ ರೋಚಕ ವಿಡಿಯೋ