ನಾಲ್ವಡಿ ಕೃಷ್ಣರಾಜ್ ಒಡೆಯರ್ ನಂತರ ಮೈಸೂರಿಗೆ ಅತಿಹೆಚ್ಚು ಕೊಡುಗೆ ನೀಡಿದ್ದು ಸಿದ್ದರಾಮಯ್ಯ: ಎಂ ಲಕ್ಷ್ಮಣ್
ಟಿಪ್ಪು ಅಂದಕ್ಷಣ ಬಿಜೆಪಿ ನಾಯಕರು ಯಾಕೆ ಉರಿದು ಬೀಳುತ್ತಾರೋ ಗೊತ್ತಿಲ್ಲ ಎಂದ ಲಕ್ಷ್ಮಣ ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಗುರುತರವಾದ ಆರೋಪ ಮಾಡಿದರು. ಕೇಂದ್ರ ಗೃಹ ಸಚಿವರು ಮಾಜಿ ಸಂಸದನ ಮೊಬೈಲ್ ಫೋನ್ ಸೀಜ್ ಮಾಡಿದ್ದಾಗ ಅದನನ್ನೇನಾದರೂ ಎಸ್ಐಟಿಗೆ ಕೊಟ್ಟಿದ್ದರೆ ಪ್ರಜ್ವಲ್ ರೇವಣ್ಣ ಥರ ಪ್ರತಾಪ್ ಸಿಂಹ ಸಹ ಜೈಲು ಸೇರುತ್ತಿದ್ದರು ಎಂದು ಕೆಪಿಸಿಸಿ ವಕ್ತಾರ ಹೇಳಿದರು.
ಮೈಸೂರು, ಆಗಸ್ಟ್ 6: ಮೈಸೂರು ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ್ ಒಡೆಯರ್ (Nalwadi Krishna Raj Wodeyar) ಅವರು ಮೈಸೂರಿಗೆ ನೀಡಿರುವ ಕಾಣಿಕೆ ಅಪಾರ, ಅವರ ಕೊಡುಗೆಯನ್ನು ಕರ್ನಾಟಕ ಕಾಂಗ್ರೆಸ್ ಕಡೆಗಣಿಸುತ್ತಿಲ್ಲ, ಅವರು ಮೈಸೂರಿಗೆ ಶೈಕ್ಷಣಿಕ ಸಂಸ್ಥೆಗಳು, ಕುಡಿಯುವ ನೀರು, ಆಸ್ಪತ್ರೆಗಳು, ಪಾರಂಪರಿಕ ಕಟ್ಟಡಗಳು ಮೊದಲಾವುಗಳನ್ನು ನೀಡಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ ಹೇಳಿದರು. ಮಾಧ್ಯಮಗಳೊಂದಿಗೆ ಮಾತಾಡಿದ ಅವರು, ಪ್ರಜಾಪ್ರಭುತ್ವ ವ್ಯವಕೆಪಿಸಿಸಿ ವಕ್ತಾರ ಸ್ಥೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿಗೆ ನೀಡಿರುವಷ್ಟು ಕಾಣಿಕೆಯನ್ನು ಬೇರೆ ಯಾವ ರಾಜಕಾರಣಿಯೂ ನೀಡಿಲ್ಲ ಎಂದರು. 2013-18ರ ಅವಧಿಗೆ ಸಿಎಂ ಆಗಿದ್ದಾಗ ಅವರು ಮೈಸೂರು ನಗರದ ಅಭಿವೃದ್ಧಿಗಾಗಿ ₹3,800 ಕೋಟಿ ನೀಡಿದ್ದಾರೆ ಎಂದು ಹೇಳಿದ ಲಕ್ಷ್ಮಣ, ನಗರಕ್ಕೆ ಉಂಡುವಾಡಿ ಯೋಜನೆ ಕುಡಿಯುವ ನೀರು, ಕಾಲೇಜು ಕಟ್ಟಡಗಳು, 12 ಆಸ್ಪತ್ರೆಗಳು, 120 ಕಿಮೀ ಉದ್ದ ಕಾಂಕ್ರೀಟ್ ರಸ್ತೆ ಮೊದಲಾದವುಗಳನ್ನು ಸಿದ್ದರಾಮಯ್ಯ ನೀಡಿದ್ದಾರೆ ಎಂದರು.
ಇದನ್ನೂ ಓದಿ: ನಾಗಮಂಗಲ ಗಲಭೆ ಆರ್ಎಸ್ಎಸ್, ಬಿಜೆಪಿ, ಜೆಡಿಎಸ್ ಹುನ್ನಾರ: ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಗಂಭೀರ ಆರೋಪ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
