ಎಲ್ಲ ರಿಪೋರ್ಟ್ಸ್ ಸಿಕ್ಕ ನಂತರ ದರ್ಶನ್ ಚಿಕಿತ್ಸೆಯ ಸ್ವರೂಪ ನಿರ್ಧರಿಸಲಾಗುವುದು: ಡಾ ನವೀನ್ ಅಪ್ಪಾಜಿಗೌಡ

|

Updated on: Nov 01, 2024 | 6:21 PM

ದರ್ಶನ್​ ಬೆನ್ನುನೋವಿನ ಶಮನಕ್ಕಾಗಿ ಆಪರೇಷನ್ ಮಾಡಬೇಕಾಗುತ್ತದೆಯೋ ಅಥವಾ ಫಿಸಿಯೋಥೆರಫಿಯಿಂದ ಅದನ್ನು ವಾಸಿಮಾಡಬಹುದೋ ಅನ್ನೋದನ್ನು ವೈದ್ಯರು ಇನ್ನೂ ನಿರ್ಧರಿಸಿಲ್ಲ, ಕೇವಲ ಬೆನ್ನು ನೋವಿನ ಚಿಕಿತ್ಸೆಗೆ ಅಂತ ಹೈಕೋರ್ಟ್ ನಟನಿಗೆ 6-ವಾರದ ಮಧ್ಯಂತರ ಜಮೀನು ನೀಡಿದೆ ಅನ್ನೋದನ್ನು ಮರೆಯಬಾರದು.

ಬೆಂಗಳೂರು: ವಿಪರೀತ ಬೆನ್ನು ನೋವಿನಿಂದ ಬಳಲುತ್ತಿರುವ ನಟ ದರ್ಶನ್ ಅವರನ್ನು ಬಿಜಿಎಸ್ ಗ್ಲೆನೀಗಲ್ಸ್ ಗ್ಲೋಬಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಅರೋಗ್ಯ ಸ್ಥಿತಿಯ ಬಗ್ಗೆ ವಿವರಣೆ ನೀಡಿದ ಡಾ ನವೀನ್ ಅಪ್ಪಾಜಿಗೌಡ, ಸದ್ಯಕ್ಕೆ ದರ್ಶನ್​ ಅವರ ಚೆಕಪ್ ಅಷ್ಟೇ ಮಾಡಲಾಗಿದೆ, ಅವರ ಎಮ್​ಆರ್​ಐ, ಎಕ್ಸ್-ರೇ ಮತ್ತು ರಕ್ತ ಪರೀಕ್ಷಣೆ ಆಗಬೇಕಿದೆ. ರಿಪೋರ್ಟ್ ಗಳು ಬಂದ ಬಳಿಕ ಚಿಕಿತ್ಸೆಯ ಸ್ವರೂಪ ನಿರ್ಧರಿಸಲಾಗುತ್ತದೆ, ಅವರ ಬೆನ್ನುನೋವು ಅಪರಿಮಿತವಾಗಿದ್ದು ಎಡಗಾಲಿನ ಸೆಳೆತದಿಂದ ಸಹ ಬಳಲುತ್ತಿದ್ದಾರೆ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ನಟ ದರ್ಶನ್​ ವಿಚಾರದಲ್ಲಿ ಅರ್ಜುನ್ ಗುರೂಜಿ ನುಡಿದಿದ್ದ ಭವಿಷ್ಯ ನಿಜ ಆಯ್ತು