Dasara Mahotsav 2024: ಅರಮನೆ ಆವರಣದಲ್ಲಿ ರಾತ್ರಿ ವಿಶ್ರಮಿಸಿದ ನಂತರ ಮಾರ್ನಿಂಗ್ ವಾಕ್​ಗೆ ಹೊರಟ ಆನೆಗಳು!

ದೈತ್ಯಜೀವಿಗಳಾಗಿರುವ ಆನೆಗಳ ನಡಿಗೆ ಮನಸೂರೆಗೊಳ್ಳುತ್ತದೆ. ತಮ್ಮ ಭಾರೀ ದೇಹವನ್ನು ಕಂಬದಂಥ ಕಾಲುಗಳ ಮೇಲೆ ಹೊತ್ತು ಸೊಂಡಿಲಿನ ಮುಂಭಾಗವನ್ನು ನೆಲಕ್ಕೆ ತಾಕದಂತೆ ಕೊಂಚ ಮುದುಡಿಕೊಂಡು ಅವು ಕಾಡಿನಲ್ಲಾಗಲೀ ಅಥವಾ ನಾಡಿನಲ್ಲಾಗಲೀ ನಡೆದುಹೋಗುವ ದೃಶ್ಯ ಗಮನ ಸೆಳೆಯುತ್ತದೆ ಮತ್ತು ನಿಂತು ವೀಕ್ಷಿಸುವಂತೆ ಮಾಡುತ್ತದೆ.

Dasara Mahotsav 2024: ಅರಮನೆ ಆವರಣದಲ್ಲಿ ರಾತ್ರಿ ವಿಶ್ರಮಿಸಿದ ನಂತರ ಮಾರ್ನಿಂಗ್ ವಾಕ್​ಗೆ ಹೊರಟ ಆನೆಗಳು!
|

Updated on: Aug 24, 2024 | 10:17 AM

ಮೈಸೂರು: ದಸರಾ ಮಹೋತ್ಸವ 2024ರ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲು ವೀರನಹೊಸಹಳ್ಳಿ ಕಾಡಿನಿಂದ ಮೈಸೂರಿಗೆ ಬಂದು ನಿನ್ನೆ ಅರಮನೆ ಆವರಣ ಸೇರಿರುವ ಅಭಿಮನ್ಯು ನೇತೃತ್ವದ ಆನೆಗಳ ರಾಜಾತಿಥ್ಯ ಶುರುವಾಗಿದೆ. ನಿನ್ನೆ ಒಂಭತ್ತು ಮನೆಗಳನ್ನು ಅರಣ್ಯ ಭವನದ ಆವರಣದಿಂದ ಅರಮನೆ ಆವರಣಕ್ಕೆ ಮೆರವಣಿಗೆ ಮತ್ತು ವಾದ್ಯಮೇಳಗಳೊಂದಿಗೆ ಕರೆದೊಯ್ದ ದೃಶ್ಯಗಳನ್ನು ನಿಮಗೆ ತೋರಿಸಿದ್ದೇವೆ. ಅರಮನೆಯಲ್ಲಿ ಆನೆಗಳಿಗೆ ಸಿಕ್ಕಿದ್ದು ಅದ್ದೂರಿಯ ಸ್ವಾಗತ. ನಿನ್ನೆ ಅರಮನೆ ಆವರಣದಲ್ಲಿ ರಾಜಭಕ್ಷ್ಯಗಳನ್ನು ಸೇವಿಸಿ ಚೆನ್ನಾಗಿ ವಿಶ್ರಮಿಸಿಕೊಂಡ ನಂತರ ಇಂದು ಬೆಳಗ್ಗೆ ಗಜಪಡೆಯನ್ನು ಮಾರ್ನಿಂಗ್ ವಾಕ್ ಗೆ ಕರೆದೊಯ್ಯಲಾಯಿತು. ಫಾರ್ ಎ ಚೇಂಜ್ ಬೆಳಗಿನ ವಿಹಾರದ ಸಮಯದಲ್ಲಿ ಗಜಗಳ ಟೀಮನ್ನು ಅಭಿಮನ್ಯು ಬದಲು ಏಕಲವ್ಯ ಲೀಡ್ ಮಾಡುತ್ತಿದ್ದ. ಈಗಾಗಲೇ ತಿಳಿಸಿರುವಂತೆ ಏಕಲವ್ಯ ಮೊದಲ ಬಾರಿಗೆ ದಸರಾ ಉತ್ಸವದಲ್ಲಿ ಭಾಗಿಯಾಗುತ್ತಿದ್ದಾನೆ. ಮುಂಬರುವ ವರ್ಷಗಳಲ್ಲಿ ಅಂಬಾರಿ ಹೊರುವ ಕೆಲಸ ಅವನ ಹೆಗಲಿಗೆ ಹಾಕಲಿರುವಿದರಿಂದ ಈಗಿಂದಲೇ ಲೀಡ್ ಮಾಡುವ ತರಬೇತಿಯನ್ನು ಮಾವುತ ಮತ್ತು ಕಾವಾಡಿಗರು ಅರಂಭಿಸಿದಂತಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ದಸರಾ ಮಹೋತ್ಸವ 2024; ಈ ಸಲ ಯುವ ದಸರಾ ಮತ್ತು ದೀಪಾಲಂಕಾರ ಅವಧಿ ವಿಸ್ತರಿಸಲಾಗಿದೆ: ಹೆಚ್​ಸಿ ಮಹದೇವಪ್ಪ

Follow us
ಕೊನೆಯ ಓವರ್​ನಲ್ಲಿ 5 ಸಿಕ್ಸ್ ಸಿಡಿಸಿ ಇಡೀ ಪಂದ್ಯದ ಚಿತ್ರಣ ಬದಲಿಸಿದ ಮಯಾಂಕ್
ಕೊನೆಯ ಓವರ್​ನಲ್ಲಿ 5 ಸಿಕ್ಸ್ ಸಿಡಿಸಿ ಇಡೀ ಪಂದ್ಯದ ಚಿತ್ರಣ ಬದಲಿಸಿದ ಮಯಾಂಕ್
ಲಕ್ಷ್ಮಿಯ ಪುತ್ರ ಗಣಪನಿಗೆ ಭಾರೀ ಬಂದೋಬಸ್ತ್​: ಸಿಸಿಟಿವಿ ಕಣ್ಗಾವಲು, ವಿಡಿಯೋ
ಲಕ್ಷ್ಮಿಯ ಪುತ್ರ ಗಣಪನಿಗೆ ಭಾರೀ ಬಂದೋಬಸ್ತ್​: ಸಿಸಿಟಿವಿ ಕಣ್ಗಾವಲು, ವಿಡಿಯೋ
ಕೊಪ್ಪಳ: ಡ್ಯೂಟಿ ವೇಳೆ ಹಾಲು ಕದ್ದ ಹೆಡ್ ಕಾನ್ಸಟೇಬಲ್, ವಿಡಿಯೋ ವೈರಲ್
ಕೊಪ್ಪಳ: ಡ್ಯೂಟಿ ವೇಳೆ ಹಾಲು ಕದ್ದ ಹೆಡ್ ಕಾನ್ಸಟೇಬಲ್, ವಿಡಿಯೋ ವೈರಲ್
ಬೈಕ್​ಗೆ ಕಾರು ಡಿಕ್ಕಿ; 10 ಅಡಿ ಎತ್ತರಕ್ಕೆ ಹಾರಿ ಬಿದ್ದ ಸವಾರರು
ಬೈಕ್​ಗೆ ಕಾರು ಡಿಕ್ಕಿ; 10 ಅಡಿ ಎತ್ತರಕ್ಕೆ ಹಾರಿ ಬಿದ್ದ ಸವಾರರು
‘ಕಾಲಾಪತ್ಥರ್’ ಸಿನಿಮಾ ತಂಡದ ಕಡೆಯಿಂದ ಶಿವಣ್ಣಗೆ ಸಿಕ್ತು ಭರ್ಜರಿ ಗಿಫ್ಟ್
‘ಕಾಲಾಪತ್ಥರ್’ ಸಿನಿಮಾ ತಂಡದ ಕಡೆಯಿಂದ ಶಿವಣ್ಣಗೆ ಸಿಕ್ತು ಭರ್ಜರಿ ಗಿಫ್ಟ್
ಗಣೇಶ ವಿಸರ್ಜನೆ ಸಮಯ, ಹೇಗೆ ಮಾಡಬೇಕು? ವಿಡಿಯೋ ನೋಡಿ
ಗಣೇಶ ವಿಸರ್ಜನೆ ಸಮಯ, ಹೇಗೆ ಮಾಡಬೇಕು? ವಿಡಿಯೋ ನೋಡಿ
Nithya Bhavishya: ಭಾದ್ರಪದ ಮಾಸ ಎರಡನೇ ಸೋಮವಾರದ ದಿನಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಎರಡನೇ ಸೋಮವಾರದ ದಿನಭವಿಷ್ಯ ತಿಳಿಯಿರಿ
ಮೀನುಗಾರಿಕೆ ಏಳಿಗೆಗಾಗಿ ಬೋಟ್​ ಚಲಾಯಿಸಿಕೊಂಡು ಹೋಗಿ ಪೂಜೆ ಸಲ್ಲಿಸಿದ ಸಚಿವ
ಮೀನುಗಾರಿಕೆ ಏಳಿಗೆಗಾಗಿ ಬೋಟ್​ ಚಲಾಯಿಸಿಕೊಂಡು ಹೋಗಿ ಪೂಜೆ ಸಲ್ಲಿಸಿದ ಸಚಿವ
25 ವರ್ಷಗಳ ಹಿಂದೆ ‘ಉಪೇಂದ್ರ’ ಸಿನಿಮಾಗೆ ಉಪ್ಪಿ ಪಡೆದ ಸಂಭಾವನೆ ಎಷ್ಟು?
25 ವರ್ಷಗಳ ಹಿಂದೆ ‘ಉಪೇಂದ್ರ’ ಸಿನಿಮಾಗೆ ಉಪ್ಪಿ ಪಡೆದ ಸಂಭಾವನೆ ಎಷ್ಟು?
ವೇಸ್ಟ್ ಪ್ಲಾಸ್ಟಿಕ್ ಬಳಸಿ ಗಣೇಶನಿಗೆ ರೂಪ ಕೊಟ್ಟ ಚಿತ್ರಕಲಾ ವಿದ್ಯಾರ್ಥಿಗಳು
ವೇಸ್ಟ್ ಪ್ಲಾಸ್ಟಿಕ್ ಬಳಸಿ ಗಣೇಶನಿಗೆ ರೂಪ ಕೊಟ್ಟ ಚಿತ್ರಕಲಾ ವಿದ್ಯಾರ್ಥಿಗಳು