Dinesh Gundu Rao: ಕಚೇರಿಯ ಪೂಜೆ ನೆರವೇರಿಸಿ ಕಾರ್ಯೋನ್ಮುಖರಾದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

Dinesh Gundu Rao: ಕಚೇರಿಯ ಪೂಜೆ ನೆರವೇರಿಸಿ ಕಾರ್ಯೋನ್ಮುಖರಾದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 09, 2023 | 1:01 PM

ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತಾಡಿದ ಸಚಿವರು ರಾಜ್ಯದ ಡಯಾಲಿಸಿಸ್ ಸೆಂಟರ್ ಗಳಲ್ಲಿ ಆವ್ಯವಸ್ಥೆ ತಾಂಡವಾಡುತ್ತಿದೆ ಅದನ್ನು ಸರಿಪಡಿಸಬೇಕಿದೆ ಎಂದರು.

ಬೆಂಗಳೂರು: ಕೆಲ ವರ್ಷಗಳಿಂದ ನೇಪಥ್ಯಕ್ಕೆ ಸರಿದಿದ್ದ ಹಿರಿಯ ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ (Dinesh Gundu Rao) 2023 ರ ಚುನಾವಣೆಯಲ್ಲಿ ಗೆದ್ದು ಮತ್ತೇ ಮುನ್ನೆಲೆಗೆ ಬಂದಿದ್ದಾರೆ. ಸಿದ್ದರಾಮಯ್ಯ (Siddaramaiah) ಸಂಪುಟದಲ್ಲಿ ಆರೋಗ್ಯ ಸಚಿವರಾಗಿರುವ ಅವರು ಇಂದು ತಮ್ಮ ಕಚೇರಿಯಲ್ಲಿ ಪೂಜೆ ಮಾಡಿಸಿ ಸ್ಥಾನದಲ್ಲಿ ಆಸೀನರಾದರು. ಇಲಾಖೆಯ ಅಧಿಕಾರಿಗಳು ಮತ್ತು ಸಚಿವರ ಕೆಲ ಆಪ್ತರು ಪೂಜೆ ವೇಳೆ ಕಚೇರಿಯಲ್ಲಿ ಹಾಜರಿದ್ದರು. ಪೂಜೆಯ ಬಳಿಕ ಇಲಾಖೆಯ ಕೆಲಸಗಳನ್ನು ಕೈಗೆತ್ತಿಕೊಂಡು ಸಚಿವರು ಮಾಡಿದ ಮೊದಲ ಕೆಲಸವೆಂದರೆ, ಹಿಂದಿನ ಆರೋಗ್ಯ ಸಚಿವ ಡಾ ಕೆ ಸುಧಾಕರ್ (Dr K Sudhakar) ಜಾರಿ ಮಾಡಿದ್ದ 108 ಅಂಬ್ಯುಲೆನ್ಸ್ ಟೆಂಡರ್ ಗಳನ್ನು ರದ್ದು ಮಾಡಿದ್ದು. ಬಳಿಕ ಸಚಿವ ಗುಂಡೂರಾವ್ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತಾಡಿ ರಾಜ್ಯದ ಡಯಾಲಿಸಿಸ್ ಸೆಂಟರ್ ಗಳಲ್ಲಿ ಆವ್ಯವಸ್ಥೆ ತಾಂಡವಾಡುತ್ತಿದೆ ಅದನ್ನು ಸರಿಪಡಿಸಬೇಕಿದೆ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ