ರಮೇಶ್ ಬಳಿಕ ಸತೀಶ್ ಜಾರಕಿಹೊಳಿ ಮುಗಿಸಲೂ ಯತ್ನ: ಸ್ಫೋಟಕ ಹೇಳಿಕೆ ಕೊಟ್ಟ ಹೆಚ್.ಡಿ. ಕುಮಾರಸ್ವಾಮಿ
ಅಮೆರಿಕಾ ಪ್ರವಾಸ ಮುಗಿಸಿ ಮರಳಿದ ಹೆಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ರಾಜಕಾರಣದ ಬಗ್ಗೆ ಮಾತನಾಡಿದ್ದಾರೆ. ED ದಾಳಿಗಳು, ರಮೇಶ್ ಹಾಗೂ ಸತೀಶ್ ಜಾರಕಿಹೊಳಿ ಪ್ರಕರಣಗಳು, ಕಾಂಗ್ರೆಸ್ ಪಕ್ಷದ ಆಂತರಿಕ ಭಿನ್ನಾಭಿಪ್ರಾಯಗಳು ಮತ್ತು ಸರ್ಕಾರದ 100 ದಿನಗಳ ಆಡಳಿತದ ಕುರಿತು ಪ್ರಶ್ನಿಸಿದ್ದಾರೆ. ವಿಜಯದಶಮಿ ಯುದ್ಧಕ್ಕೆ ಕಾಲ ಎಂದ ಅವರು, ಹಲವು ವಿಷಯಗಳ ಬಗ್ಗೆ ಟೀಕಿಸಿದರು.
ಹಾಸನ, ಸೆಪ್ಟೆಂಬರ್ 15: ನಾನು ಒಂದು ಪದ ಬಳಸಿದ್ದಕ್ಕೆ ಕಳೆದ ಹತ್ತು ದಿನಗಳಿಂದ ಕುಮಾರಸ್ವಾಮಿ ಯಾವಾಗ ಬರ್ತಾರೆ? ನಂದೇನಿದೆ, ನಂದೇನಿದೆ ಎಂದು ಎಷ್ಟು ಜನ ರಾತ್ರಿಯೆಲ್ಲಾ ಕನವರಸಿಕೊಂಡಿದ್ದಾರೆ ಅನ್ನೋದು ಗೊತ್ತಿದೆ. ಆದರೆ ಮಾಧ್ಯಮ ಸ್ನೇಹಿತರಿಗೆ ನಿರಾಸೆ ಮಾಡಲ್ಲ ಒಳ್ಳೆಯ ಆಹಾರ ಕೊಡ್ತೇನೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಈಗಾಗಲೇ ರಾಜಣ್ಣರ ಧ್ವನಿ ನಿಲ್ಲಿಸಿದ್ರು, ರಮೇಶ್ ಜಾರಕಿಹೋಳಿ ಮುಗ್ಸಿದ್ರು. ಸತೀಶ್ ಜಾರಕಿಹೊಳಿ ನಾನು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಎಂದು ಹೇಳುತ್ತಿದ್ದರು. ಹೀಗಾಗಿ ಈಗ ಅವರನ್ನೂ ಹೇಗೆ ಮುಗಿಸಬೇಕೆಂದು ಸಿದ್ದತೆ ಮಾಡಿಕೊಂಡರು. ಪಾಪ ನಾಗೇಂದ್ರ ಅವರದ್ದು ಯಾವ್ಯಾವ ತರ ನಡೀತು? ನಂಗೇನೂ ಆತುರ ಇಲ್ಲ. ಎಲ್ಲವನ್ನೂ ಜನರ ಮುಂದಿಡುತ್ತೇನೆ ಎಂದವರು ತಿಳಿಸಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us
