ಗಣಪತಿ ವಿಸರ್ಜನೆ ಬಳಿಕ ಈಜಲು ಹೊಳೆಗೆ ಹಾರಿದ ಯುವಕರು; ದುರಂತವಾಗಿ ಅಂತ್ಯವಾದ ಗಣೇಶ ಉತ್ಸವ
ಎಲ್ಲ ಹಬ್ಬಗಳಿಗಿಂತ ವಿಶೇಷವಾಗಿ ವಿನಾಯಕ ಚೌತಿಯನ್ನು ಆಚರಿಸಲು ಎಲ್ಲರೂ ಇಷ್ಟಪಡುತ್ತಾರೆ. ಗಣೇಶೋತ್ಸವವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ಗಣಪತಿ ಹಬ್ಬದವರೆಗೂ ಎಲ್ಲವೂ ಸರಿಯೇ ಇದ್ದರೂ ಗಣಪತಿ ವಿಸರ್ಜನೆ ವೇಳೆ ಕೆಲವರು ಮಾಡುವ ಸಣ್ಣಪುಟ್ಟ ತಪ್ಪುಗಳು ಅವರ ಸಂಭ್ರಮವನ್ನೇ ಕಸಿದುಬಿಡುತ್ತವೆ. ಅಂಥದ್ದೇ ಘಟನೆ ಕಡಪದಲ್ಲಿ ನಡೆದಿದೆ.
ಕಡಪ: ಆಂಧ್ರಪ್ರದೇಶದ ಕಡಪ ಜಿಲ್ಲೆಯ ಕಮಲಾಪುರಂನ ವಿರುಪುನಯನಿ ಪಲ್ಲಿ ಮಂಡಲದಲ್ಲಿ ಗಣಪತಿ ವಿಸರ್ಜನೆಗೆ ಅಡ್ಡಿಯಾಗಿದೆ. ಮಗುಮುರು ತಿರುವಿನಲ್ಲಿ ಈಜಲು ಹೋಗಿ ಇಬ್ಬರು ನಾಪತ್ತೆಯಾಗಿದ್ದಾರೆ. ಗಣಪತಿ ವಿಸರ್ಜನೆ ಮಾಡಿದ ಬಳಿಕ ಕೆಲವು ಯುವಕರು ನದಿಗೆ ಹಾರಿದ್ದಾರೆ. ಅವರಲ್ಲಿ ರಾಜಾ ಮತ್ತು ವಂಶಿ ಈಜುವಾಗ ಆಳಕ್ಕೆ ಹೋಗಿ ಕೊಚ್ಚಿಕೊಂಡು ಹೋಗಿದ್ದಾರೆ. ಆದರೆ, ಗ್ರಾಮಸ್ಥರು ಇದನ್ನು ಗಮನಿಸಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅವರ ಶವ ಇನ್ನೂ ಪತ್ತೆಯಾಗಿಲ್ಲ. ನಾಪತ್ತೆಯಾದವರಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.
ಇನ್ನಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ