ದೆಹಲಿ ಕ್ಲಬ್ ಹೊರಗೆ ಶೂಟೌಟ್; ಬೌನ್ಸರ್ಗೆ ಹೆದರಿಸಿ ಗುಂಡು ಹಾರಿಸಿದ ವಿಡಿಯೋ ವೈರಲ್
ದೆಹಲಿಯ ಸೀಮಾಪುರಿ ಪ್ರದೇಶದ ಕಾಂಚ್ ಕ್ಲಬ್ ಎದುರು ನಿರಂತರ ಗುಂಡಿನ ದಾಳಿ ನಡೆಸುತ್ತಿರುವ ಸಿಸಿಟಿವಿ ದೃಶ್ಯಾವಳಿಗಳು ಹೊರಬಿದ್ದಿವೆ. ಗನ್ ಹಿಡಿದ ನಾಲ್ವರು ದುಷ್ಕರ್ಮಿಗಳು ಕ್ಲಬ್‌ನೊಳಗೆ ಪ್ರವೇಶಿಸಿರುವುದು ದೃಶ್ಯಾವಳಿಗಳಲ್ಲಿ ಕಂಡುಬರುತ್ತದೆ. ಅವರಲ್ಲಿ ಇಬ್ಬರು ನಿರಂತರವಾಗಿ ಗುಂಡು ಹಾರಿಸಲು ಪ್ರಾರಂಭಿಸುತ್ತಾರೆ.
ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯ ಸೀಮಾಪುರಿಯಲ್ಲಿರುವ ಕಾಂಚ್ ಕ್ಲಬ್ ಹೊರಗೆ ಭಾರೀ ಗುಂಡಿನ ದಾಳಿ ನಡೆದಿದೆ. ಈ ಘಟನೆಯ ಸಿಸಿಟಿವಿ ದೃಶ್ಯಾವಳಿ ಕೂಡ ಹೊರಬಿದ್ದಿದೆ. ಇದರಲ್ಲಿ ನಾಲ್ವರು ದುಷ್ಕರ್ಮಿಗಳು ಗನ್ ಹಿಡಿದುಕೊಂಡು ಕ್ಲಬ್ ಪ್ರವೇಶಿಸುವುದನ್ನು ಕಾಣಬಹುದು. ದುಷ್ಕರ್ಮಿಗಳಲ್ಲಿ ಒಬ್ಬರು ಕ್ಲಬ್‌ನ ಹೊರಗೆ ನಿಂತಿರುವ ಬೌನ್ಸರ್‌ಗಳಿಗೆ ಬೆದರಿಕೆ ಹಾಕುತ್ತಿರುವುದು ಕಂಡುಬಂದಿದೆ. ಮಹಿಳೆಯನ್ನು ಮೊಣಕಾಲುಗಳ ಮೇಲೆ ಕೂರುವಂತೆ ಬೆದರಿಕೆ ಹಾಕುತ್ತಿರುವುದು ಕಂಡು ಬಂದಿದೆ. ಇದರ ನಂತರ, ಇಬ್ಬರು ದುಷ್ಕರ್ಮಿಗಳು ಕ್ಲಬ್‌ನ ಹೊರಗೆ ಗಾಳಿಯಲ್ಲಿ ಭಾರೀ ಗುಂಡಿನ ದಾಳಿಯನ್ನು ಪ್ರಾರಂಭಿಸಿದರು. ಆ ಕ್ಲಬ್ ಮಾಲೀಕರಿಗೆ ಬೆದರಿಕೆ ಹಾಕಿ ಹಣ ವಸೂಲಿ ಮಾಡುವುದೇ ದುಷ್ಕರ್ಮಿಗಳು ಗುಂಡಿನ ದಾಳಿಯ ಉದ್ದೇಶ ಎಂದು ಹೇಳಲಾಗುತ್ತಿದೆ. ಶೂಟರ್‌ಗಳು ಕ್ಲಬ್‌ನತ್ತ 10ಕ್ಕೂ ಹೆಚ್ಚು ಬುಲೆಟ್‌ಗಳನ್ನು ಹಾರಿಸಿದ್ದಾರೆ. ದೆಹಲಿ ಪೊಲೀಸರು ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳಲ್ಲಿ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಉಳಿದ ಮೂವರು ದುಷ್ಕರ್ಮಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಇನ್ನಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ