ನಗರದ ಸಮಸ್ಯೆಗಳನ್ನು ವೀಕ್ಷಿಸಿದ ಬಳಿಕ ಸಿದ್ದರಾಮಯ್ಯ ದುರಸ್ತಿಗಾಗಿ ಬಿಡಿಗಾಸನ್ನೂ ಬಿಡುಗಡೆ ಮಾಡಿಲ್ಲ: ಆರ್ ಅಶೋಕ
ಸಿದ್ದರಾಮಯ್ಯ ನಗರ ಪ್ರದಕ್ಷಿಣೆ ಹಾಕಿದ್ದು ಕೇವಲ ಫೋಟೋಶೂಟ್ ಗಾಗಿಯೇ ಹೊರತು ಮತ್ಯಾವುದಕ್ಕೂ ಅಲ್ಲ, ರಾಜಾ ಕಾಲುವೆಗಳಲ್ಲಿ ಹೂಳು ತುಂಬಿದೆ ರಸ್ತೆಗಳಲ್ಲಿ ಲಕ್ಷಾಂತರ ಗುಂಡಿಗಳು ಬಿದ್ದಿವೆ, ಅವುಗಳನ್ನು ಸರಿಪಡಿಸಲು ಮುಖ್ಯಮಂತ್ರಿಯವರು ಒಂದು ರೂಪಾಯಿಯನ್ನಾದರೂ ಬಿಡುಗಡೆ ಮಾಡಿದರೇ? ಎಂದು ಆಶೋಕ ಕೇಳಿದರು.
ಬೆಂಗಳೂರು: ರಾಜ್ಯ ಸರ್ಕಾರ ಬೆಂಗಳೂರನ್ನು ಬ್ರ್ಯಾಂಡ್ ಬೆಂಗಳೂರು ಮಾಡುತ್ತೇವೆ (Brand Bengaluru) ಅಂತ ಹೇಳಿ ಒಂದು ವರ್ಷವಾದರೂ ಯೋಜನೆಗಾಗಿ ಇದುವರೆಗೆ ಬಿಡಿಗಾಸನ್ನೂ ಬಿಡುಗಡೆ ಮಾಡಿಲ್ಲ ಎಂದು ವಿರೋಧ ಪಕ್ಷದ ನಾಯಕ ಅರ್ ಅಶೋಕ (R Ashoka) ಹೇಳಿದರು. ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು ಮಳೆಗಾಲ ಶುರುವಾಗುವ ಮೊದಲೇ ಮಳೆ ನೀರಿನಿಂದ ಅಗುವ ತೊಂದರೆಗಳ ನಿವಾರಣೆಗೆ ಎಲ್ಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಬಿಬಿಎಂಪಿ ಕಮೀಶನರ್ (BBMP Commissioner) ಒಂದು ತಿಂಗಳ ಹಿಂದೆ ಹೇಳಿದ್ದರು. ಎಲ್ಲಿದೆ ಸಿದ್ಧತೆ, ಯಾವ ರಾಜಾಕಾಲುವೆಯಿಂದ ಹೂಳೆತ್ತಲಾಗಿದೆ? ಎಂದು ಪ್ರಶ್ನಿಸಿದ ಅಶೋಕ ಎಲ್ಲ ಸಿದ್ಧತೆಗಳಾಗಿದ್ದರೆ ಮುಖ್ಯಮಂತ್ರಿಯವರು ಮೊನ್ನೆ ಸಿಟಿ ರೌಂಡ್ಸ್ ಗೆ ಹೋಗುವ ಅವಶ್ಯಕತೆ ಏನಿತ್ತು ಎಂದರು. ಸಿದ್ದರಾಮಯ್ಯ ನಗರ ಪ್ರದಕ್ಷಿಣೆ ಹಾಕಿದ್ದು ಕೇವಲ ಫೋಟೋಶೂಟ್ ಗಾಗಿಯೇ ಹೊರತು ಮತ್ಯಾವುದಕ್ಕೂ ಅಲ್ಲ, ರಾಜಾ ಕಾಲುವೆಗಳಲ್ಲಿ ಹೂಳು ತುಂಬಿದೆ ರಸ್ತೆಗಳಲ್ಲಿ ಲಕ್ಷಾಂತರ ಗುಂಡಿಗಳು ಬಿದ್ದಿವೆ, ಅವುಗಳನ್ನು ಸರಿಪಡಿಸಲು ಮುಖ್ಯಮಂತ್ರಿಯವರು ಒಂದು ರೂಪಾಯಿಯನ್ನಾದರೂ ಬಿಡುಗಡೆ ಮಾಡಿದರೇ? ಎಂದು ಆಶೋಕ ಕೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಅಶೋಕ ಸ್ವಭಾವವೇ ಹಾಗೆ, ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲ್ಲ: ಎಸ್ ಅರ್ ವಿಶ್ವನಾಥ್, ಬಿಜೆಪಿ ಶಾಸಕ