ಹೆಲಿಪ್ಯಾಡ್ ನಲ್ಲಿ ಶಿವಕುಮಾರ್ ರನ್ನು ಸ್ವಾಗತಿಸಿದ ಲಕ್ಷ್ಮಣ ಸವದಿ ನಿಮಗೆ ತೊಂದೆ ಕೊಡ್ತಾನೇ ಇರ್ತೀನಿ ಅಂದಿದ್ಯಾಕೆ?

|

Updated on: Mar 06, 2024 | 5:15 PM

ನಮ್ಮೆಲ್ಲರಿಗೆ ಗೊತ್ತಿರುವ ಹಾಗೆ ಲಕ್ಷ್ಮಿ ಮಗನಿಗಾಗಿ ಬೆಳಗಾವಿ ಲೋಕಸಭಾ ಕ್ಷೇತ್ರದ ಟಿಕೆಟ್ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಅವರ ಎಡಭಾಗದಿಂದ ಬಂದು ಬೋಕೆ ನೀಡಿ ಕಾಲಿಗೆ ನಮಸ್ಕರಿಸುವ ಯುವನಾಯಕ ಲಕ್ಷ್ಮಣ ಸವದಿ ಅವರ ಪುತ್ರ ಚಿದಾನಂದ ಸವದಿ. ಮಗನನ್ನು ರಾಜಕೀಯದಲ್ಲಿ ಲಾಂಚ್ ಮಾಡುವ ಬಗ್ಗೆ ಸೀನಿಯರ್ ಸವದಿ ಸೀರಿಯಸ್ಸಾಗೇನೂ ಯೋಚನೆ ಮಾಡಿದಂತಿಲ್ಲ.

ಬೆಳಗಾವಿ: ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಜಿಲ್ಲೆಯ ಅಥಣಿ ತಾಲೂಕಿನಲ್ಲಿ ಏತ ನೀರಾವರಿ ಕಾಮಗಾರಿಗೆ ಶಂಕುಸ್ಥಾಪನೆಯನ್ನು ನೆರವೇರಿಸಲು ಆಗಮಿಸಿದಾಗ ಸ್ಥಳೀಯ ಶಾಸಕ ಲಕ್ಷ್ಮಣ ಸವದಿ (Laxman Savadi) ಮತ್ತು ಬೇರೆ ಕೆಲ ಸ್ಥಳೀಯ ನಾಯಕರು ಅವರನ್ನು ಹೆಲಿಪ್ಯಾಡ್ ಬಳಿ (helipad) ಸ್ವಾಗತಿಸಿದರು. ಅವರೆಲ್ಲ ಶಿವಕುಮಾರ್ ಅವರಿಗೆ ಬೋಕೆ ಕೊಡುತ್ತಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ಸವದಿಯವರಿಂದ ಬೋಕೆ ತೆಗೆದುಕೊಂಡ ಬಳಿಕ ಶಿವಕುಮಾರ್, ಏನಯ್ಯಾ ತೊಂದರೆ ಕೊಟ್ಟೆ ಅನ್ನುತ್ತಾರೆ. ಅದಕ್ಕೆ ಸವದಿ ನಾನು ನಿಮಗೆ ತೊಂದರೆ ಕೊಡ್ತಾನೇ ಇರ್ತೀನಿ ಅನ್ನುತ್ತಾರೆ! ಅವರಿಬ್ಬರ ನಡುವೆ ದಶಕಗಳ ಸ್ನೇಹವಿದೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ.

ಈ ವಿಡಿಯೋದಲ್ಲಿ ಗಮನಿಸಬೇಕಾದ ಬೇರೆ ಅಂಶಗಳು ಸಹ ಇವೆ. ಶಿವಕುಮಾರ್ ಹೆಲಿಕಾಪ್ಟರ್ ನಿಂದ ಇಳಿದ ಬಳಿಕ ಅವರ ಬಲಭಾಗದಲ್ಲಿದ್ದ ಯುವಕರೊಬ್ಬರು ಅವರಿಗೆ ಬೋಕೆ ನೀಡುತ್ತಾರೆ. ಅದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಮಗ ಮೃಣಾಲ್. ನಮ್ಮೆಲ್ಲರಿಗೆ ಗೊತ್ತಿರುವ ಹಾಗೆ ಲಕ್ಷ್ಮಿ ಮಗನಿಗಾಗಿ ಬೆಳಗಾವಿ ಲೋಕಸಭಾ ಕ್ಷೇತ್ರದ ಟಿಕೆಟ್ ಪಡೆಯಲು ಪ್ರಯತ್ನಿಸುತ್ತಿದ್ದಾರೆ.

ಅವರ ಎಡಭಾಗದಿಂದ ಬಂದು ಬೋಕೆ ನೀಡಿ ಕಾಲಿಗೆ ನಮಸ್ಕರಿಸುವ ಯುವನಾಯಕ ಲಕ್ಷ್ಮಣ ಸವದಿ ಅವರ ಪುತ್ರ ಚಿದಾನಂದ ಸವದಿ. ಮಗನನ್ನು ರಾಜಕೀಯದಲ್ಲಿ ಲಾಂಚ್ ಮಾಡುವ ಬಗ್ಗೆ ಸೀನಿಯರ್ ಸವದಿ ಸೀರಿಯಸ್ಸಾಗೇನೂ ಯೋಚನೆ ಮಾಡಿದಂತಿಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರು ಪಾಕ್ ಪರ ಘೋಷಣೆ ಕೂಗಿದ ಪ್ರಕರಣವನ್ನು ರಾತ್ರೋರಾತ್ರಿ ಮುಚ್ಚಿ ಹಾಕಿದ್ಯಾಕೆ? ಡಿಕೆ ಶಿವಕುಮಾರ್