ವಿಮಾನ ದುರಂತದ ಜಾಗಕ್ಕೂ ಮನೆಗೂ 5-10 ಮೀಟರ್ ದೂರ! ಪ್ರತ್ಯಕ್ಷದರ್ಶಿ ಬಿಚ್ಚಿಟ್ಟ ಭಯಾನಕ ಅನುಭವ ಇಲ್ಲಿದೆ

Edited By:

Updated on: Jun 13, 2025 | 9:58 AM

ಅಹಮದಾಬಾದ್ ಏರ್ ಇಂಡಿಯಾ ವಿಮಾನ ಪತನ ದುರಂತದ ಬಗ್ಗೆ ಅಲ್ಲಿನ ಮೇಘಾನಿ ನಗರದ ನಿವಾಸಿ ಸುರೇಶ್ ಎಂಬವರು ‘ಟಿವಿ9’ ಜತೆ ಮಾತನಾಡಿದ್ದು, ಕರಾಳ ಹಾಗೂ ಭಯಾನಕ ಅನುಭವವನ್ನು ಬಿಚ್ಚಿಟ್ಟಿದ್ದಾರೆ. ದುರಂತದ ಸ್ಥಳದಿಂದ 10 ಮೀಟರ್ ದೂರದಲ್ಲಿದ್ದ ಪ್ರತ್ಯಕ್ಷದರ್ಶಿ ಜತೆ ಟಿವಿ9 ನಡೆಸಿರುವ ಮಾತುಕತೆಯ ವಿಡಿಯೋ ಇಲ್ಲಿದೆ.

ಅಹಮದಾಬಾದ್, ಜೂನ್ 13: ಲಂಡನ್​ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಗುರುವಾರ ಮಧ್ಯಾಹ್ನ ಅಹಮದಾಬಾದ್​​ನ ಮೇಘಾನಿ ನಗರದಲ್ಲಿ ಪತನಗೊಂಡು ಸುಮಾರು 265 ಮಂದಿ ಮೃತಪಟ್ಟಿದ್ದಾರೆ. ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ವಿಮಾನವು ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳಿದ್ದ ವಸತಿನಿಲಯದ ಮೇಲೆ ಪತನಗೊಂಡಿತ್ತು. ಘಟನೆ ಬಗ್ಗೆ ಪ್ರತ್ಯಕ್ಷದರ್ಶಿ, ಮೇಘಾನಿ ನಗರದ ಸುರೇಶ್ ಎಂಬವರು ‘ಟಿವಿ9’ ಜತೆ ಮಾತನಾಡಿದ್ದು, ಭಯಾನಕ ಅನುಭವ ಬಿಚ್ಚಿಟ್ಟಿದ್ದಾರೆ. ವಿಮಾನ ದುರಂತದ ಜಾಗಕ್ಕೂ ತಮ್ಮ ಮನೆಗೂ 5-10 ಮೀಟರ್ ದೂರವಷ್ಟೇ ಅಂತರ ಇತ್ತು ಎಂದು ಸುರೇಶ್ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ