‘ಇದು ರುಕ್ಮಿಣಿ ವಸಂತ್ ಸಮಸ್ಯೆ ಮಾತ್ರವಲ್ಲ’; ಎಐ ಅಪಾಯದ ಬಗ್ಗೆ ನಿರ್ಮಾಪಕಿ ಎಚ್ಚರಿಕೆ
ಕಿತ್ತೂರು ರಾಣಿ ಚೆನ್ನಮ್ಮ ಕುರಿತ ಸಿನಿಮಾ ಮಾಡಲು ನಿರ್ಮಾಪಕಿ ಲತಾ ಜಯಪ್ರಕಾಶ್ ಅವರು ಮುಂದಾಗಿದ್ದಾರೆ. ಹಾಗಂತ ಇದು ಸಾಮಾನ್ಯ ಸಿನಿಮಾ ಅಲ್ಲ, ಇದು ಸಂಪೂರ್ಣವಾಗಿ ಎಐನಿಂದ ಮಾಡಿದ ಚಿತ್ರ. ಈ ಸಿನಿಮಾ ಬಗ್ಗೆ ಮಾತನಾಡುವ ಎಐ ಬಗ್ಗೆ ನಿರ್ಮಾಪಕಿ ಲತಾ ಜಯಪ್ರಕಾಶ್ ಅವರು ಮಾತನಾಡಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ.
ನಿರ್ಮಾಪಕಿ ಲತಾ ಜಯಪ್ರಕಾಶ್ ಅವರು ಕಿತ್ತೂರು ರಾಣಿ ಚೆನ್ನಮ್ಮ ಕುರಿತು ಸಿನಿಮಾ ಮಾಡುತ್ತಿದ್ದಾರೆ. ಹಾಗಂತ ಇದು ಶೂಟ್ ಮಾಡಿ ಮಾಡ್ತಿರೋ ಸಿನಿಮಾ ಅಲ್ಲ. ಇದು ಸಂಪೂರ್ಣವಾಗಿ ಎಐ ಇಂದ ಮಾಡಿದ ಸಿನಿಮಾ. ಈ ಬಗ್ಗೆ ಮಾತನಾಡುವ ಲತಾ ಜಯಪ್ರಕಾಶ್ ಅವರು ಎಐನಿಂದ ಆಗುತ್ತಿರುವ ತೊಂದರೆ ಬಗ್ಗೆ ಮಾತನಾಡಿದ್ದಾರೆ. ‘ಎಐಅನ್ನು ಒಳ್ಳೆಯ ಕಾರಣಕ್ಕೆ ಬಳಕೆ ಮಾಡಿಕೊಳ್ಳಬೇಕು. ಕೆಲವು ನಾಯಕಿಯರ ಫೋಟೋಗಳನ್ನು ಎಐ ಮೂಲಕ ಎಡಿಟ್ ಮಾಡಲಾಗಿದೆ. ಅದು ಆಗಬಾರದು’ ಎಂದು ಲತಾ ಹೇಳಿದ್ದಾರೆ. ರುಕ್ಮಿಣಿ ವಸಂತ್ ಮಾತ್ರವಲ್ಲ ಎಲ್ಲರಿಗೂ ಈ ರೀತಿಯ ತೊಂದರೆ ಆಗುತ್ತಿದೆ ಎಂದು ಲತಾ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Follow Us
Latest Videos

