ಏರ್​ ಇಂಡಿಯಾ ವಿಮಾನ ಬಿದ್ದ ರಭಸಕ್ಕೆ ಅಹಮದಾಬಾದ್ ಮೆಡಿಕಲ್ ಕಾಲೇಜಿನ ಹಾಸ್ಟೆಲ್ ಹೇಗಾಗಿದೆ ನೋಡಿ

Updated on: Jun 14, 2025 | 8:53 AM

ಅಹಮದಾಬಾದ್​ನ ಮೇಘನಾನಿ ನಗರದಲ್ಲಿ ಏರ್ ಇಂಡಿಯಾ ವಿಮಾನ ಮೆಡಿಕಲ್ ಕಾಲೇಜಿನ ಹಾಸ್ಟೆಲ್ ಮೇಲೆ ಪತನಗೊಂಡ ಕಾರಣ ಆ ಕಟ್ಟಡ ಛಿದ್ರವಾಗಿದೆ. ಘಟನೆಯಲ್ಲಿ ವೈದ್ಯಕೀಯ ವಿದ್ಯಾರ್ಥಿಗಳೂ ಸೇರಿದಂತೆ 265 ಜನ ಸಾವಿಗೀಡಾಗಿದ್ದಾರೆ. ಘಟನೆಯ ಭೀಕರತೆಯನ್ನು ಮೆಡಿಕಲ್ ಕಾಲೇಜಿನ ಛಿದ್ರವಾಗಿರುವ ಹಾಸ್ಟೆಲ್ ಕಟ್ಟಡ ಇದೀಗ ಬಿಚ್ಚಿಟ್ಟಿದೆ. ವಿಡಿಯೋ ಇಲ್ಲಿದೆ.

ಅಹಮದಾಬಾದ್, ಜೂನ್ 14: ಲಂಡನ್​ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ಪತನವಾಗಿ 265 ಜನ ಮೃತಪಟ್ಟ ದಾರುಣ ಘಟನೆಯ ಆಘಾತದಿಂದ ದೇಶದ ಜನ ಇನ್ನೂ ಹೊರಬಂದಿಲ್ಲ. ಅಹಮದಾಬಾದ್​ನ ಮೇಘನಾನಿ ನಗರದಲ್ಲಿ ಮೆಡಿಕಲ್ ಕಾಲೇಜಿನ ಹಾಸ್ಟೆಲ್ ಮೇಲೆ ವಿಮಾನ ಪತನವಾದ ಕಾರಣ ವಿಮಾನದಲ್ಲಿದ್ದವರು ಮಾತ್ರವಲ್ಲದೆ, ವೈದ್ಯಕೀಯ ವಿದ್ಯಾರ್ಥಿಗಳೂ ಮೃತಪಟ್ಟಿದ್ದರು. ವಿಮಾನ ಪತನದಿಂದ ಮೆಡಿಕಲ್ ಕಾಲೇಜಿನ ಹಾಸ್ಟೆಲ್ ಛಿದ್ರವಾಗಿದ್ದು, ಆ ಭೀಕರತೆಗೆ ಸಾಕ್ಷಿ ಒದಗಿಸುವ ವಿಡಿಯೋ ಇಲ್ಲಿದೆ ನೋಡಿ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Loading...
Unable to load recommendations.
Follow Us
ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More