ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ಐಶ್ವರ್ಯಾ ಸಿಂಧೋಗಿ ಅವರು ಬಿಗ್ ಬಾಸ್ ಶೋನಿಂದ ಎಲಿಮಿನೇಟ್ ಆಗಿದ್ದು, ಟಿವಿ9 ಜೊತೆ ಮಾತನಾಡಿದ್ದಾರೆ. ಈ ಬಾರಿ ಯಾರು ಫೈನಲ್ ತಲುಪುತ್ತಾರೆ ಎಂಬ ಬಗ್ಗೆ ಅವರು ಭವಿಷ್ಯ ನುಡಿದಿದ್ದಾರೆ. ಅಲ್ಲದೇ ಮುಂದಿನ ವಾರ ಯಾರು ಎಲಿಮಿನೇಟ್ ಆಗಬಹುದು ಎಂಬ ಪ್ರಶ್ನೆಗೂ ಐಶ್ವರ್ಯಾ ಉತ್ತರ ನೀಡಿದ್ದಾರೆ. ಸಂದರ್ಭದ ವಿಡಿಯೋ ಇಲ್ಲಿದೆ ನೋಡಿ..
‘ಮೊದಲಿಗೆ ಬಂದಾಗ ತ್ರಿವಿಕ್ರಮ್, ಜಗದೀಶ್, ಶಿಶಿರ್ ಅವರು ಫೈನಲಿಸ್ಟ್ ಆಗಬಹುದು ಎಂದುಕೊಂಡಿದ್ದೆ. ಆದರೆ ಈಗಿನ ಲೆಕ್ಕಾಚಾರದಲ್ಲಿ ನನ್ನ ಪ್ರಕಾರ ಧನರಾಜ್, ಮೋಕ್ಷಿತಾ, ಹನುಮಂತ, ಉಗ್ರಂ ಮಂಜು ಅವರು ಫೈನಲ್ ತಲುಪಬಹುದು ಅಂತ ಅನಿಸುತ್ತದೆ. ಪ್ರತಿ ವಾರ ಟಾಸ್ಕ್ ಬೇರೆ ರೀತಿ ಇದೆ. ಆದ್ದರಿಂದ ಮುಂದಿನ ವಾರ ಯಾರು ಔಟ್ ಆಗುತ್ತಾರೆ ಎಂಬುದನ್ನು ಹೇಳೋದು ಕಷ್ಟ’ ಎಂದು ಐಶ್ವರ್ಯಾ ಸಿಂಧೋಗಿ ಅವರು ಹೇಳಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 11’ ಫಿನಾಲೆ ಹತ್ತಿರ ಆಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.