ಹನುಮಂತ, ಧನರಾಜ್ ಫಿನಾಲೆಗೆ ಹೋದರೂ ಅಚ್ಚರಿ ಇಲ್ಲ: ಭವಿಷ್ಯ ನುಡಿದ ಶಿಶಿರ್
‘ಬಿಗ್ ಬಾಸ್ ಕನ್ನಡ ಸೀಸನ್ 11’ ಶೋನಿಂದ ಶಿಶಿರ್ ಶಾಸ್ತ್ರಿ ಎಲಿಮಿನೇಟ್ ಆಗಿದ್ದಾರೆ. ಟಿವಿ9 ಜೊತೆ ಮಾತನಾಡಿದ ಅವರು ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಹನುಮಂತ ಮತ್ತು ಧನರಾಜ್ ಅವರಿಗೆ ಬಿಗ್ ಬಾಸ್ ಫಿನಾಲೆಗೆ ಹೋಗುವ ಸಾಮರ್ಥ್ಯ ಇದೆ ಎಂದು ಶಿಶಿರ್ ಹೇಳಿದ್ದಾರೆ. ಹನುಮಂತನ ವ್ಯಕ್ತಿತ್ವ ಹೇಗಿದೆ ಎಂಬುದನ್ನು ಶಿಶಿರ್ ಅವರು ವಿವರಿಸಿದ್ದಾರೆ.
‘ರಜತ್, ಉಗ್ರಂ ಮಂಜು ಮತ್ತು ತ್ರಿವಿಕ್ರಮ್ ಅವರಿಗೆ ಹನುಮಂತ ಹಾಗೂ ಧನರಾಜ್ ಅವರು ಖಂಡಿತವಾಗಿಯೂ ಟಕ್ಕರ್ ನೀಡುತ್ತಾರೆ. ಬಿಗ್ ಬಾಸ್ ಮನೆಯ ಮಕ್ಕಳು ಫಿನಾಲೆವರೆಗೆ ಹೋದರೆ ಆಶ್ಚರ್ಯಪಡಬೇಕಾಗಿಲ್ಲ. ಅವರು ತುಂಬ ಚೆನ್ನಾಗಿ ಆಡುತ್ತಿದ್ದಾರೆ. ಹನುಮಂತ ತುಂಬ ಬುದ್ಧಿವಂತಿಕೆಯಿಂದ ಆಡುತ್ತಿದ್ದಾನೆ. ಅವನು ಕೊಡುವ ಕಾರಣಗಳು ತುಂಬ ನೇರವಾಗಿ ಇರುತ್ತವೆ. ಇದೇ ಆಟವನ್ನು ಮುಂದುವರಿಸಿಕೊಂಡು ಹೋದರೆ ಅವನು ಫಿನಾಲೆಯಲ್ಲಿ ಇರುತ್ತಾನೆ’ ಎಂದು ಶಿಶಿರ್ ಶಾಸ್ತ್ರಿ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
