Daily Devotional: ಜಪ ಮಾಲೆಯಲ್ಲಿನ 108 ಮಣಿಗಳ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
ಸನಾತನ ಹಿಂದೂ ಧರ್ಮದಲ್ಲಿ ಜಪಮಾಲೆ ಪವಿತ್ರವಾದ ಧಾರ್ಮಿಕ ವಸ್ತುವಾಗಿದೆ. 108 ಮಣಿಗಳನ್ನು ಹೊಂದಿರುವ ಜಪಮಾಲೆಯು ದೇವರ ನಾಮಸ್ಮರಣೆಗೆ ಬಳಸಲ್ಪಡುತ್ತದೆ. 108 ಸಂಖ್ಯೆಯು ಆಧ್ಯಾತ್ಮಿಕವಾಗಿ ಬಹಳ ಮಹತ್ವವನ್ನು ಹೊಂದಿದೆ ಎಂದು ನಂಬಲಾಗಿದೆ. ಜಪಮಾಲೆಯನ್ನು ಪ್ರಾಮಾಣಿಕತೆ ಮತ್ತು ಭಕ್ತಿಯಿಂದ ಬಳಸುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ.
ಸನಾತನ ಹಿಂದೂ ಧರ್ಮದಲ್ಲಿ ಜಪ ಮಾಲೆಗೆ ಬಹಳ ಪ್ರಾಮುಖ್ಯತೆ ಇದೆ. ದೇವರ ನಾಮಸ್ಮರಣೆ ಮಾಡುವಾಗ ಜಪ ಮಾಲೆಯನ್ನು ಹಿಡಿದು 108 ಬಾರಿ ಸ್ಮರಿಸಲಾಗುತ್ತದೆ. ಜಪ ಮಾಲೆಯಲ್ಲಿ 108 ಮಣಿಗಳಿರುತ್ತವೆ. ಪವಿತ್ರ ಧಾರ್ಮಿಕ ವಸ್ತುಗಳಲ್ಲಿ ಒಂದಾದ ಜಪ ಮಾಲೆಯು 108 ಮಣಿಗಳನ್ನು ಹೊಂದಲು ಸಾಕಷ್ಟು ಕಾರಣಗಳಿವೆ. 108 ಬಾರಿ ಜಪ ಮಾಡುವುದು ಅಥವಾ ಅದಕ್ಕಿಂತಲೂ ಹೆಚ್ಚು ಬಾರಿ ಪಠಿಸುವುದರಿಂದ ಯಾವ ತೊಂದರೆಯೂ ಉಂಟಾಗದು. ಪ್ರಾಮಾಣಿಕತೆ, ಭಕ್ತಿ ಭಾವದಿಂದ ಮಾಡುವ ಎಲ್ಲಾ ಸಂಗತಿಯೂ ದೇವರಿಗೆ ಪ್ರಿಯವಾದದ್ದೇ. ಅದರಿಂದ ಸಾಕಷ್ಟು ಪುಣ್ಯ ಪ್ರಾಪ್ತಿಯಾಗುವುದನ್ನು ಎನ್ನಲಾಗುತ್ತದೆ.
Latest Videos