‘ಎಷ್ಟೇ ಎತ್ತರಕ್ಕೆ ಬೆಳೆದರೂ ಬೆಂಬಲವಾಗಿ ನಿಲ್ಲುತ್ತಾರೆ’; ಯಶ್ ಮಾಡಿದ ಸಹಾಯ ನೆನೆದ ಅಜಯ್ ರಾವ್

|

Updated on: Apr 04, 2025 | 10:31 AM

Yash: ಯಶ್ ಅವರು ಅನೇಕರಿಗೆ ಸಹಾಯ ಮಾಡಿದ್ದಾರೆ. ಈ ಪೈಕಿ ಅಜಯ್ ರಾವ್ ಕೂಡ ಒಬ್ಬರು. ಈ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಅವರು ಮಾಡಿದ ಸಹಾಯವನ್ನು ಮರೆಯಬಾರದು ಎಂದು ಅಜಯ್ ರಾವ್ ಅವರು ಹೇಳಿಕೊಂಡಿದ್ದಾರೆ. ಅವರ ಸಹಾಯಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ಸಿಗುತ್ತಾ ಇದೆ.

ಕೆವಿಎನ್ ಸಂಸ್ಥೆ ‘ಯುದ್ಧಕಾಂಡ’ (Yudhdhakanda) ಚಿತ್ರವನ್ನು ರಿಲೀಸ್ ಮಾಡುತ್ತಿದೆ. ಇದಕ್ಕೆ ಕಾರಣ ಯಶ್ ಎಂದಿದ್ದಾರೆ ಅಜಯ್ ರಾವ್. ‘ಕೆವಿಎನ್​ ಜೊತೆ ಮಾತನಾಡಿ ಯಶ್ (Yash) ಅವರೇ ನಮ್ಮ ಸಿನಿಮಾದ ಹಂಚಿಕೆ ಮಾಡಿಸಿಕೊಟ್ಟಿದ್ದಾರೆ. ಅವರು ಇದನ್ನು ಹೇಳಿಕೊಳ್ಳಲು ಇಷ್ಟಪಡಲ್ಲ. ಅವರು ಎಷ್ಟೇ ಎತ್ತರಕ್ಕೆ ಬೆಳೆದರೂ ಬೇರೆಯವರ ಸಹಾಯಕ್ಕೆ ನಿಲ್ಲುತ್ತಾರೆ. ಒಳ್ಳೆಯ ಸಿನಿಮಾ ಮಾಡಿದಾಗ ಬೆಂಬಲ ನಿಲ್ಲುತ್ತಾರೆ’ ಎಂದಿದ್ದಾರೆ ಅಜಯ್ ರಾವ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.