ಧರ್ಮಸ್ಥಳ: ಬೊಳಿಯೂರು ತಲುಪಿದ ಆಕಾಂಕ್ಷಾ ಎಸ್ ನಾಯರ್ ಪಾರ್ಥಿವ ಶರೀರ
ಧರ್ಮಸ್ಥಳದ ಬೊಳಿಯೂರು ನಿವಾಸಿಯಾ ಸುರೇಂದ್ರ ನಾಯರ್ ಹಾಗೂ ಸಿಂಧೂದೇವಿ ದಂಪತಿಯ ಪುತ್ರಿ ಆಕಾಂಕ್ಷಾ ಎಸ್ ನಾಯರ್ ಪಾರ್ಥಿವ ಶರೀರವನ್ನು ಬುಧವಾರ ಬೆಳಗ್ಗೆ ಸ್ವಗೃಹಕ್ಕೆ ತರಲಾಯಿತು. ಪಂಜಾಬ್ನಲ್ಲಿ ನಿಗೂಢವಾಗಿ ಮೃತಪಟ್ಟಿದ್ದ ಆಕಾಂಕ್ಷಾ ಮೃತದೇಹವನ್ನು ಬೆಂಗಳೂರಿಗೆ ತಂದು ಅಲ್ಲಿಂದ ಆ್ಯಂಬುಲೆನ್ಸ್ ಮೂಲಕ ಹುಟ್ಟೂರಿಗೆ ತರಲಾಯಿತು. ವಿಡಿಯೋ ಇಲ್ಲಿದೆ.
ಮಂಗಳೂರು, ಮೇ 21: ಪಂಜಾಬ್ನನಲ್ಲಿ ನಿಗೂಢವಾಗಿ ಮೃತಪಟ್ಟ ಧರ್ಮಸ್ಥಳದ ಬೊಳಿಯೂರು ನಿವಾಸಿ ಆಕಾಂಕ್ಷಾ ಎಸ್ ನಾಯರ್ ಮೃತದೇಹವವನ್ನು ಬುಧವಾರ ಹುಟ್ಟೂರಿಗೆ ತರಲಾಯಿತು. ಬೆಂಗಳೂರು ವಿಮಾನ ನಿಲ್ದಾಣದಿಂದ ಆ್ಯಂಬುಲೆನ್ಸ್ ಮೂಲಕ ಮೃತದೇಹ ತರಲಾಯಿತು. ಭಾರೀ ಮಳೆಯ ಹಿನ್ನಲೆ ಮನೆಗೆ ಸಾಗುವ ದಾರಿಯಲ್ಲಿ ಆ್ಯಂಬುಲೆನ್ಸ್ ಮಣ್ಣಿನಲ್ಲಿ ಹೂತ ಘಟನೆಯೂ ನಡೆಯಿತು. ನಂತರ ಸ್ಥಳೀಯರು ಆ್ಯಂಬುಲೆನ್ಸ್ ಟೈರ್ ಅನ್ನು ಮಣ್ಣಿನಿಂದ ಹೊರತೆಗೆದರು. ಸದ್ಯ ಆಕಾಂಕ್ಷಾ ಮೃತದೇಹ ಬೋಳಿಯಾರ್ನಲ್ಲಿರುವ ಮನೆಗೆ ತಲುಪಿದೆ. ಮೃತದೇಹ ಕಂಡು ಕುಟುಂಬಸ್ಥರ ಆಕ್ರಂದನ ಹೆಚ್ಚಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ