ಚಿಕಿತ್ಸೆ ನೀಡಲು ವೈದ್ಯರ ನಿರಾಕರಣೆ, ರಸ್ತೆಯಲ್ಲಿಯೇ ನರಳಾಡಿದ ರೋಗಿ

| Updated By: ಸಾಧು ಶ್ರೀನಾಥ್​

Updated on: Jul 19, 2020 | 6:35 PM

[lazy-load-videos-and-sticky-control id=”cs_Vray76mo”] ವಿಜಯಪುರ: ತೀವ್ರ ಜ್ವರದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರಿಗೆ ಚಿಕಿತ್ಸೆ ನೀಡಲು ವೈದರು ನಿರಾಕರಿಸಿದ ಪರಿಣಾಮ ಜ್ವರ ಬಾಧೆ ತಾಳಲಾರದೇ ರೋಗಿ ರಸ್ತೆ ಮೇಲೆಯೇ ನರಳಾಟ ನಡೆಸಿದ ಅಮಾನುಷ ಘಟನೆ ವಿಜಯಪುರ ಜಿಲ್ಲಿಯಲ್ಲಿ ಸಂಭವಿಸಿದೆ. ವಿಜಯಪುರ ಜಿಲ್ಲೆ ಆಲಮೇಲ ಪಟ್ಟಣದಲ್ಲಿ ಈ ಘಟನೆ ಸಂಭವಿಸಿದೆ. ಪಟ್ಟಣದ ವ್ಯಕ್ತಿಯೊಬ್ಬರು ತೀವ್ರವಾಗಿ ಜ್ವರದಿಂದ ಬಳಲುತ್ತಿದ್ದರು. ಹೀಗಾಗಿ ಆಲಮೇಲ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ಹೋಗಿದ್ರು. ಆದ್ರೆ ಆಸ್ಪತ್ರೆ ವೈದ್ಯರು ಮಾತ್ರ ನಮ್ಮಲ್ಲಿ ಬೆಡ್‌ ಇಲ್ಲಾ, ಟೆಸ್ಟಿಂಗ್‌ ಕಿಟ್‌ ಇಲ್ಲಾ […]

ಚಿಕಿತ್ಸೆ ನೀಡಲು ವೈದ್ಯರ ನಿರಾಕರಣೆ, ರಸ್ತೆಯಲ್ಲಿಯೇ ನರಳಾಡಿದ ರೋಗಿ
Follow us on

[lazy-load-videos-and-sticky-control id=”cs_Vray76mo”]

ವಿಜಯಪುರ: ತೀವ್ರ ಜ್ವರದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರಿಗೆ ಚಿಕಿತ್ಸೆ ನೀಡಲು ವೈದರು ನಿರಾಕರಿಸಿದ ಪರಿಣಾಮ ಜ್ವರ ಬಾಧೆ ತಾಳಲಾರದೇ ರೋಗಿ ರಸ್ತೆ ಮೇಲೆಯೇ ನರಳಾಟ ನಡೆಸಿದ ಅಮಾನುಷ ಘಟನೆ ವಿಜಯಪುರ ಜಿಲ್ಲಿಯಲ್ಲಿ ಸಂಭವಿಸಿದೆ.

ವಿಜಯಪುರ ಜಿಲ್ಲೆ ಆಲಮೇಲ ಪಟ್ಟಣದಲ್ಲಿ ಈ ಘಟನೆ ಸಂಭವಿಸಿದೆ. ಪಟ್ಟಣದ ವ್ಯಕ್ತಿಯೊಬ್ಬರು ತೀವ್ರವಾಗಿ ಜ್ವರದಿಂದ ಬಳಲುತ್ತಿದ್ದರು. ಹೀಗಾಗಿ ಆಲಮೇಲ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ಹೋಗಿದ್ರು. ಆದ್ರೆ ಆಸ್ಪತ್ರೆ ವೈದ್ಯರು ಮಾತ್ರ ನಮ್ಮಲ್ಲಿ ಬೆಡ್‌ ಇಲ್ಲಾ, ಟೆಸ್ಟಿಂಗ್‌ ಕಿಟ್‌ ಇಲ್ಲಾ ಅಂತಾ ಹೇಳಿ ಚಿಕಿತ್ಸೆ ನೀಡಲು ನಿರಾಕರಿಸಿದ್ದಾರೆ.

ಬೇರೆ ಆಸ್ಪತ್ರೆಗೆ ಹೋಗಬೇಕೆಂದ್ರೆ ಬೇಗ ಆ್ಯಂಬುಲೆನ್ಸ್‌ ಕೂಡಾ ಸಿಕ್ಕಿಲ್ಲ. ಹೀಗಾಗೀ ಜ್ವರದಿಂದ ಬಳಲುತ್ತಿದ್ದ ವ್ಯಕ್ತಿ ಬಾಧೆ ತಾಳಲಾರದೇ ರಸ್ತೆ ಮೇಲೆಯೇ ತಾಸುಗಟ್ಟಲೇ ನರಳುತ್ತಿದ್ದರು. ಇದನ್ನು ನೋಡಿದ ಸ್ಥಳಿಯ ಯುವಕರು ತಾವೇ ಪ್ರಯತ್ನ ಮಾಡಿ ಆ್ಯಂಬುಲೆನ್ಸ್ ಕರೆಸಿದ್ದಾರೆ. ನಂತರ ಅವರನ್ನು ಆ್ಯಂಬುಲೆನ್ಸ್‌ನಲ್ಲಿ ಸಿಂದಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಘಟನೆ ಸ್ಥಳೀಯರಲ್ಲಿ ಸರ್ಕಾರದ ವಿರುದ್ಧ ಆಕ್ರೋಶಕ್ಕೆ ಕಾರಣವಾಗಿದೆ.

Published On - 3:02 pm, Sun, 19 July 20