ಸೋಂಕಿತನ ಕುಟುಂಬಕ್ಕೆ ನೀರು ಕೊಡಲು ಗ್ರಾಮಸ್ಥರ ಹಿಂದೇಟು, ನಂತರ ಆಗಿದ್ದೇನು?
[lazy-load-videos-and-sticky-control id=”Xd2VFjzLsMg”] ಕಲಬುರಗಿ: ನೆರೆಹೊರೆಯವರಿಂದ ಸೋಂಕಿತನ ಕುಟುಂಬಕ್ಕೆ ಮಾನಸಿಕ ಕಿರುಕುಳ ನೀಡಿರುವ ಘಟನೆ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಜೊತೆಗೆ, ಗ್ರಾಮಸ್ಥರು ಕುಟುಂಬದವರಿಗೆ ಕುಡಿಯುವ ನೀರು ಸಹ ನೀಡುತ್ತಿರಲಿಲ್ಲವೆಂದು ತಿಳಿದುಬಂದಿದೆ . ಜಿಲ್ಲೆಯ ಫರಹತಾಬಾದ್ ಗ್ರಾಮದ ಕುಟುಂಬ ಒಂದರ ಸದಸ್ಯನಾಗಿದ್ದ ವ್ಯಕ್ತಿಗೆ ಕೊರೊನಾ ಸೋಂಕು ತಗಲಿತ್ತು. ಹೀಗಾಗಿ, ಸೋಂಕಿತನ ಕುಟುಂಬಕ್ಕೆ ನೀರು ಸಹ ಕೊಡಲು ಗ್ರಾಮಸ್ಥರು ಹಿಂದೇಟು ಹಾಕುತ್ತಿದ್ದರು. ಇನ್ನು ಮಾಹಿತಿ ತಿಳಿದ ಕೂಡಲೆ ಸ್ಥಳಾಕ್ಕಾಗಮಿಸಿದ ಫರಹತಾಬಾದ್ ಠಾಣೆಯ ಎಸ್ ಐ ಯಶೋಧಾ ಸೋಂಕಿತನ ಕುಟುಂಬಕ್ಕೆ ಧೈರ್ಯ ಹೇಳಿದ್ದದಾರೆ. ಜೊತೆಗೆ, […]
[lazy-load-videos-and-sticky-control id=”Xd2VFjzLsMg”]
ಕಲಬುರಗಿ: ನೆರೆಹೊರೆಯವರಿಂದ ಸೋಂಕಿತನ ಕುಟುಂಬಕ್ಕೆ ಮಾನಸಿಕ ಕಿರುಕುಳ ನೀಡಿರುವ ಘಟನೆ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಜೊತೆಗೆ, ಗ್ರಾಮಸ್ಥರು ಕುಟುಂಬದವರಿಗೆ ಕುಡಿಯುವ ನೀರು ಸಹ ನೀಡುತ್ತಿರಲಿಲ್ಲವೆಂದು ತಿಳಿದುಬಂದಿದೆ .
ಜಿಲ್ಲೆಯ ಫರಹತಾಬಾದ್ ಗ್ರಾಮದ ಕುಟುಂಬ ಒಂದರ ಸದಸ್ಯನಾಗಿದ್ದ ವ್ಯಕ್ತಿಗೆ ಕೊರೊನಾ ಸೋಂಕು ತಗಲಿತ್ತು. ಹೀಗಾಗಿ, ಸೋಂಕಿತನ ಕುಟುಂಬಕ್ಕೆ ನೀರು ಸಹ ಕೊಡಲು ಗ್ರಾಮಸ್ಥರು ಹಿಂದೇಟು ಹಾಕುತ್ತಿದ್ದರು. ಇನ್ನು ಮಾಹಿತಿ ತಿಳಿದ ಕೂಡಲೆ ಸ್ಥಳಾಕ್ಕಾಗಮಿಸಿದ ಫರಹತಾಬಾದ್ ಠಾಣೆಯ ಎಸ್ ಐ ಯಶೋಧಾ ಸೋಂಕಿತನ ಕುಟುಂಬಕ್ಕೆ ಧೈರ್ಯ ಹೇಳಿದ್ದದಾರೆ. ಜೊತೆಗೆ, ತಮ್ಮ ಠಾಣೆಯಿಂದಲೇ ಕುಡಿಯುವ ನೀರು ಹಾಗೂ ಆಹಾರದ ಕಿಟ್ ನೀಡಿ ನೆರವಿನ ಹಸ್ತ ಚಾಚಿದ್ದಾರೆ.
Published On - 4:37 pm, Sun, 19 July 20