ಮಹಿಳಾ ಮೀಸಲಾತಿ ಸೇರಿ ಮೂರು ಮಸೂದೆಗಳ ಕುರಿತು ಲೋಕಸಭೆಯಲ್ಲಿ ಪ್ರಧಾನಿ ಮೋದಿ ಭಾಷಣದ ನೇರ ಪ್ರಸಾರ
ಭಾರತೀಯ ಸಂಸದೀಯ ಇತಿಹಾಸದ ಅತ್ಯಂತ ನಿರ್ಣಾಯಕ ಘಟ್ಟವೊಂದು ಇಂದು ಲೋಕಸಭೆಯಲ್ಲಿ ಅನಾವರಣಗೊಳ್ಳುತ್ತಿದೆ. ಮಹಿಳಾ ಮೀಸಲಾತಿ ಮತ್ತು ದೇಶದ ಭವಿಷ್ಯದ ರಾಜಕೀಯ ಭೂಪಟವನ್ನೇ ಬದಲಿಸಬಲ್ಲ ಮಸೂದೆಗಳ ಕುರಿತು ಇಡೀ ದೇಶದ ಕಣ್ಣು ಈಗ ಸಂಸತ್ತಿನತ್ತ ನೆಟ್ಟಿದೆ. ಏಪ್ರಿಲ್ 16 ರಿಂದ 18 ರವರೆಗೆ ನಡೆಯುತ್ತಿರುವ ಮೂರು ದಿನಗಳ ಈ ವಿಶೇಷ ಸಂಸತ್ ಅಧಿವೇಶನವು ಈಗ ರಾಜಕೀಯ ರಣಾಂಗಣವಾಗಿ ಮಾರ್ಪಟ್ಟಿದೆ. ಮಹಿಳಾ ಮೀಸಲಾತಿ ಮಸೂದೆಯನ್ನು ಮಹಿಳಾ ಸಬಲೀಕರಣದ "ಐತಿಹಾಸಿಕ ಹೆಜ್ಜೆ" ಎಂದು ಕರೆದಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಲೋಕಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದು, ಅದರ ನೇರ ಪ್ರಸಾರ ಇಲ್ಲಿದೆ. ಈ ಸಾಂವಿಧಾನಿಕ ತಿದ್ದುಪಡಿ ಮಸೂದೆ ಅಂಗೀಕಾರವಾಗಲು ಕೇವಲ ಬಹುಮತ ಸಾಲದು, ಹಾಜರಿರುವ ಸದಸ್ಯರಲ್ಲಿ ಮೂರನೇ ಎರಡರಷ್ಟು (2/3rd majority) ಬಹುಮತದ ಅವಶ್ಯಕತೆಯಿದೆ.
ನವದೆಹಲಿ, ಏಪ್ರಿಲ್ 16: ಭಾರತೀಯ ಸಂಸದೀಯ ಇತಿಹಾಸದ ಅತ್ಯಂತ ನಿರ್ಣಾಯಕ ಘಟ್ಟವೊಂದು ಇಂದು ಲೋಕಸಭೆಯಲ್ಲಿ ಅನಾವರಣಗೊಳ್ಳುತ್ತಿದೆ. ಮಹಿಳಾ ಮೀಸಲಾತಿ ಮತ್ತು ದೇಶದ ಭವಿಷ್ಯದ ರಾಜಕೀಯ ಭೂಪಟವನ್ನೇ ಬದಲಿಸಬಲ್ಲ ಮಸೂದೆಗಳ ಕುರಿತು ಇಡೀ ದೇಶದ ಕಣ್ಣು ಈಗ ಸಂಸತ್ತಿನತ್ತ ನೆಟ್ಟಿದೆ. ಏಪ್ರಿಲ್ 16 ರಿಂದ 18 ರವರೆಗೆ ನಡೆಯುತ್ತಿರುವ ಮೂರು ದಿನಗಳ ಈ ವಿಶೇಷ ಸಂಸತ್ ಅಧಿವೇಶನವು ಈಗ ರಾಜಕೀಯ ರಣಾಂಗಣವಾಗಿ ಮಾರ್ಪಟ್ಟಿದೆ. ಮಹಿಳಾ ಮೀಸಲಾತಿ ಮಸೂದೆಯನ್ನು ಮಹಿಳಾ ಸಬಲೀಕರಣದ “ಐತಿಹಾಸಿಕ ಹೆಜ್ಜೆ” ಎಂದು ಕರೆದಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಲೋಕಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದು, ಅದರ ನೇರ ಪ್ರಸಾರ ಇಲ್ಲಿದೆ. ಈ ಸಾಂವಿಧಾನಿಕ ತಿದ್ದುಪಡಿ ಮಸೂದೆ ಅಂಗೀಕಾರವಾಗಲು ಕೇವಲ ಬಹುಮತ ಸಾಲದು, ಹಾಜರಿರುವ ಸದಸ್ಯರಲ್ಲಿ ಮೂರನೇ ಎರಡರಷ್ಟು (2/3rd majority) ಬಹುಮತದ ಅವಶ್ಯಕತೆಯಿದೆ.
Published on: Apr 16, 2026 03:10 PM
Follow Us
