ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಎಲ್ಲ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು, ಬಿಜೆಪಿ ನಿಲುವು ಸ್ಪಷ್ಟ: ಬಿವೈ ವಿಜಯೇಂದ್ರ
ಘಟಾನುಘಟಿಗಳ ಹೆಸರು ಕೇಳಿಬರುತ್ತಿರುವುದು ನಿಜ, ಅದೇ ಕಾರಣಕ್ಕೆ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಬೇಕೆಂದು ಬಿಜೆಪಿ ಆಗ್ರಹ ಮಾಡುತ್ತಿದೆ, ಅನ್ಯಾಯಕ್ಕೊಳಗಾಗಿರುವ ಮಹಿಳೆಯರಿಗೆ ನ್ಯಾಯ ಕೊಡಿಸುವುದು ಎಸ್ಐಟಿಯಿಂದ ಸಾಧ್ಯವಿಲ್ಲ, ಸಿಬಿಐ ತನಿಖೆ ನಡೆಸಿದರೆ ಅವರಿಗೆ ನ್ಯಾಯ ಸಿಗುವ ಜೊತೆಗೆ ಮುಚ್ಚಿಹೋಗುವ ಅಪಾಯದಲ್ಲಿರುವ ಎಲ್ಲ ಸಂಗತಿಗಳು ಹೊರಬೀಳಲಿವೆ ಎಂದು ವಿಜಯೇಂದ್ರ ಹೇಳಿದರು.
ಬೆಂಗಳೂರು: ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ (Prajwal Revanna case) ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರ ಹೆಸರು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಪ್ರಕರಣವು ರಾಜ್ಯ ಬಿಜೆಪಿಯನ್ನು ಸುತ್ತುಕೊಳ್ಳಲಿದೆಯಾ ಎಂದು ಬೆಂಗಳೂರಲ್ಲಿ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra), ಪ್ರಜ್ವಲ್ ಪ್ರಕರಣದಲ್ಲಿ ಬಿಜೆಪಿಗೆ ಯಾವುದೇ ಗೊಂದಲವಿಲ್ಲ, ತಪ್ಪಿತಸ್ಥರಿಗೆ ಶಿಕ್ಷೆಯಾಗಲೇಬೇಕು (prosecuted) ಅದರಲ್ಲಿ ಎರಡು ಮಾತಿಲ್ಲ, ಅದರೆ ಪೆನ್ ಡ್ರೈವ್ ಗಳನ್ನು ಹಾದಿ ಬೀದಿಯಲ್ಲಿ ಬಿಸಾಡಿದವರನ್ನು ಶಿಕ್ಷೆಗೊಳಡಿಸಬೇಕು, ಇದರ ಹಿಂದೆ ಯಾಱರಿದ್ದಾರೆ ಅನ್ನೋದು ತನಿಖೆಯಾಗಬೇಕು ಎಂದು ಹೇಳಿದರು. ಪ್ರಕರಣದಲ್ಲಿ ಡಿಕೆ ಶಿವಕುಮಾರ್ ಹೆಸರು ಕೇಳಿಬರುತ್ತಿರುವುದನ್ನು ಅವರ ಗಮನಕ್ಕೆ ತಂದಾಗ, ಘಟಾನುಘಟಿಗಳ ಹೆಸರು ಕೇಳಿಬರುತ್ತಿರುವುದು ನಿಜ, ಅದೇ ಕಾರಣಕ್ಕೆ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಬೇಕೆಂದು ಬಿಜೆಪಿ ಆಗ್ರಹ ಮಾಡುತ್ತಿದೆ, ಅನ್ಯಾಯಕ್ಕೊಳಗಾಗಿರುವ ಮಹಿಳೆಯರಿಗೆ ನ್ಯಾಯ ಕೊಡಿಸುವುದು ಎಸ್ಐಟಿಯಿಂದ ಸಾಧ್ಯವಿಲ್ಲ, ಸಿಬಿಐ ತನಿಖೆ ನಡೆಸಿದರೆ ಅವರಿಗೆ ನ್ಯಾಯ ಸಿಗುವ ಜೊತೆಗೆ ಮುಚ್ಚಿಹೋಗುವ ಅಪಾಯದಲ್ಲಿರುವ ಎಲ್ಲ ಸಂಗತಿಗಳು ಹೊರಬೀಳಲಿವೆ ಎಂದು ವಿಜಯೇಂದ್ರ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ