Karnataka Assembly Polls: ತಮಿಳುನಾಡುನಿಂದ ಗಡಿಜಿಲ್ಲೆ ಕೋಲಾರಗೆ ಬರುವ ಎಲ್ಲ ವಾಹನಗಳ ಬಿಗಿ ತಪಾಸಣೆ
ಮತದಾರರನ್ನು ಸೆಳೆಯಲು, ಒಲಿಸಿಕೊಳ್ಳಲು ಅಭ್ಯರ್ಥಿಗಳು ಹಣ, ಉಡುಗೊರೆ, ಮದ್ಯದ ಆಮಿಶಗಳನ್ನೊಡ್ಡುವುದು ಸರ್ವೇ ಸಾಮಾನ್ಯ.
ಕೋಲಾರ: ರಾಜ್ಯದಲ್ಲಿ ಮತದಾನಕ್ಕೆ (voting) ಈಗ ಕೆಲವು ಗಂಟೆಗಳು ಮಾತ್ರ ಬಾಕಿಯಳಿದಿವೆ. ಮತದಾರರನ್ನು ಸೆಳೆಯಲು, ಒಲಿಸಿಕೊಳ್ಳಲು ಅಭ್ಯರ್ಥಿಗಳು ಹಣ, ಉಡುಗೊರೆ, ಮದ್ಯದ ಆಮಿಶಗಳನ್ನೊಡ್ಡುವುದು ಸರ್ವೇ ಸಾಮಾನ್ಯ. ಈ ಹಿನ್ನೆಲೆಯಲ್ಲಿ ರಾಜ್ಯದ ಗಡಿಭಾಗದ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಕೋಲಾರ ಜಿಲ್ಲೆ ತಮಿಳು ನಾಡು (Tamil Nadu) ಗಡಿಭಾಗಕ್ಕಂಟಿಕೊಂಡಿರುವುದರಿಂದ ಹಲವಾರು ಚೆಕ್ ಪೋಸ್ಟ್ ಗಳನ್ನು ನಿರ್ಮಿಸಿ ನೆರೆರಾಜ್ಯದಿಂದ ಬರುವ ವಾಹನಗಳ ತಪಾಸಣೆ ಮಾಡಲಾಗುತ್ತಿದೆ. ಎಲ್ಲ ಚೆಕ್ ಪೋಸ್ಟ್ ಗಳಲ್ಲಿ ಚುನಾವಣಾ ಆಯೋಗದ (Election Commission) ಸಿಬ್ಬಂದಿ ಮತ್ತು ಪೋಲಿಸರು ವಾಹನಗಳನ್ನು ನಿಲ್ಲಿಸಿ ಕೂಲಂಕುಶ ಪರಿಶೀಲನೆ ನಡೆಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಟಿವಿ9 ವಾಹಿನಿಯ ಕೋಲಾರ ವರದಿಗಾರ ರಾಜೇಂದ್ರ ಸಿಂಹ ಈ ವಾಕ್ ಥ್ರೂ ಮಾಡಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos