Karnataka Assembly Polls: ಮಂಡ್ಯ ಜಿಲ್ಲೆಯ ವಿವಿಧ ಮತಗಟ್ಟೆಗಳಿಗೆ ಕೆಎಸ್ ಆರ್ ಟಿಸಿ ಬಸ್ ಗಳಲ್ಲಿ ಉತ್ಸಾಹದಿಂದ ತೆರಳಿದ ಸಿಬ್ಬಂದಿ
ಕೆಎಸ್ಆರ್ ಟಿ ಸಿ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ ಮಂಡ್ಯ ಹಾಗೂ ಜಿಲ್ಲೆಯ ಇತರ ಡಿಪೋಗಳಿಂದ 271 ಬಸ್ ಗಳನ್ನು ಚುನಾವಣಾ ಸಿಬ್ಬಂದಿಯ ಪ್ರಯಾಣಕ್ಕೆ ಒದಗಿಸಲಾಗಿದೆ.
ಮಂಡ್ಯ: ನಾಳೆ ಪ್ರಜಾಪ್ರಭುತ್ವ ವ್ಯವಸ್ಥೆಯ (democratic setup) ಉತ್ಸವ, ರಾಜ್ಯದ ಮತದಾರ ತನ್ನ ಇಷ್ಟದ ಸರ್ಕಾರ ಅಸ್ತಿತ್ವಕ್ಕೆ ತರಲು ಸಂವಿಧಾನದತ್ತ ಹಕ್ಕನ್ನು (Constitutional right) ಚಲಾಯಿಸುತ್ತಾನೆ. ರಾಜ್ಯ ಚುನಾವಣಾ ಆಯೋಗ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಮಂಡ್ಯ ಜಿಲ್ಲೆಯಲ್ಲಿರುವ 7 ವಿಧಾನಸಭಾ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಲು ನಿಯೋಜಿಸಲ್ಪಟ್ಟಿರುವ ಸಿಬ್ಬಂದಿಗೆ ತಮಗೆ ನಿಗದಿ ಮಾಡಲಾಗಿರುವ ಸ್ಥಳಗಳಿಗೆ ತೆರಳಲು ಮಂಡ್ಯ ನಗರದಿಂದ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ಬಸ್ (KSRTC bus) ವ್ಯವಸ್ಥೆ ಕಲ್ಪಿಸಲಾಗಿದೆ. ಮಂಡ್ಯ ಕೆಎಸ್ಆರ್ಟಿಸಿ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ ಮಂಡ್ಯ ಹಾಗೂ ಜಿಲ್ಲೆಯ ಇತರ ಡಿಪೋಗಳಿಂದ 271 ಬಸ್ ಗಳನ್ನು ಚುನಾವಣಾ ಸಿಬ್ಬಂದಿಯ ಪ್ರಯಾಣಕ್ಕೆ ಒದಗಿಸಲಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos