ಕಚೇರಿಯಲ್ಲೇ ಮುನಿರತ್ನರಿಂದ ಅತ್ಯಾಚಾರ ಆರೋಪ; ವಿಕಾಸಸೌಧದ ಗೇಟ್ಗೆ ತೀರ್ಥಹಾಕಿ ‘ಕೈ’ ಮುಖಂಡರಿಂದ ಶುದ್ಧೀಕರಣ ಹೈಡ್ರಾಮ
ವಿಕಾಸಸೌಧದ ಕಚೇರಿಯಲ್ಲೇ ಆರ್ಆರ್ ನಗರ ಶಾಸಕ ಮುನಿರತ್ನರಿಂದ ಅತ್ಯಾಚಾರ ಆರೋಪ ಕೇಳಿಬಂದಿದ್ದು, ಈ ಹಿನ್ನಲೆ ಕಾಂಗ್ರೆಸ್ ಮುಖಂಡ ಮನೋಹರ್ ನೇತೃತ್ವದಲ್ಲಿ ವಿಕಾಸಸೌಧದ ಗೇಟ್ಗೆ ತೀರ್ಥಹಾಕಿ ಶುದ್ಧೀಕರಣ ಮಾಡಿದರು. ಕೂಡಲೇ ಕಾಂಗ್ರೆಸ್ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದು ಕರೆದೊಯ್ದಿದ್ದಾರೆ.
ಬೆಂಗಳೂರು, ಸೆ.26: ವಿಕಾಸಸೌಧದ ಕಚೇರಿಯಲ್ಲೇ ಆರ್ಆರ್ ನಗರ ಶಾಸಕ ಮುನಿರತ್ನರಿಂದ ಅತ್ಯಾಚಾರ ಆರೋಪ ಕೇಳಿಬಂದಿದ್ದು, ಈ ಹಿನ್ನಲೆ ವಿಕಾಸಸೌಧದ ಗೇಟ್ಗೆ ತೀರ್ಥಹಾಕಿ ‘ಕೈ’ ಮುಖಂಡರು ಶುದ್ಧೀಕರಣ ಮಾಡಿದರು. ಕಾಂಗ್ರೆಸ್ ಮುಖಂಡ ಮನೋಹರ್ ನೇತೃತ್ವದಲ್ಲಿ ಶುದ್ಧೀಕರಣ ಕಾರ್ಯ ನಡೆದಿದ್ದು, ಕೂಡಲೇ ಕಾಂಗ್ರೆಸ್ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದು ಕರೆದೊಯ್ದಿದ್ದಾರೆ. ಪೊಲೀಸರ ನಡೆಗೆ ಕಾಂಗ್ರೆಸ್ ಮುಖಂಡ ಮನೋಹರ್ ಆಕ್ರೋಶ ವ್ಯಕ್ತಪಡಿಸಿದ್ದು, ‘ಸಂತ್ರಸ್ತೆಯನ್ನು ವಿಕಾಸಸೌಧಕ್ಕೆ ಕರೆತಂದು ಮಹಜರು ನಡೆಸಿದ್ದಾರೆ. ಹೀಗಾಗಿ ವಿಕಾಸಸೌಧ ಶುದ್ಧಿ ಮಾಡಲು ಬಂದಿದ್ದವರನ್ನು ಬಂಧಿಸಿದ್ದಾರೆ. ಆದರೆ, ಬಿಜೆಪಿಯವರ ಪ್ರತಿಭಟನೆ ಮಾಡಲು ಅವಕಾಶ ನೀಡಿದ್ದರು. ವಿಕಾಸಸೌಧ ಶುದ್ಧೀಕರಣ ಮಾಡಲು ನಮಗೆ ಅವಕಾಶ ನೀಡುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Sep 26, 2024 06:32 PM