ಬಳ್ಳಾರಿ ಜೈಲಲ್ಲಿ ದರ್ಶನ್ ಭೇಟಿ ಮಾಡಿದ ‘ಡೆವಿಲ್’ ನಿರ್ದೇಶಕ; ಬ್ಯಾಗ್ ತುಂಬ ತಂದಿದ್ದೇನು?
ದರ್ಶನ್ ಜೈಲಿಗೆ ಹೋಗುವುದಕ್ಕೂ ಮುನ್ನ ‘ಡೆವಿಲ್’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದರು. ಆದರೆ ಅವರ ಮೇಲೆ ಕೊಲೆ ಆರೋಪ ಬಂದಿದ್ದರಿಂದ ಸಿನಿಮಾದ ಕೆಲಸಗಳು ಅರ್ಧಕ್ಕೆ ನಿಂತು ಹೋದವು. ಇಂದು (ಸೆಪ್ಟೆಂಬರ್ 26) ‘ಡೆವಿಲ್’ ಸಿನಿಮಾದ ನಿರ್ದೇಶಕ ಪ್ರಕಾಶ್ ವೀರ್ ಅವರು ಬಳ್ಳಾರಿ ಜೈಲಿಗೆ ಹೋಗಿ ದರ್ಶನ್ ಭೇಟಿ ಮಾಡಿದ್ದಾರೆ.
‘ಡೆವಿಲ್’ ಚಿತ್ರದ ನಿರ್ದೇಶಕ ಪ್ರಕಾಶ್ ವೀರ್ ಅವರು ಬಳ್ಳಾರಿ ಜೈಲಿನಲ್ಲಿ ದರ್ಶನ್ ಅವರನ್ನು ಭೇಟಿಯಾಗಿದ್ದಾರೆ. ದರ್ಶನ್ಗಾಗಿ ಅವರು ಎರಡು ಬ್ಯಾಗ್ ತುಂಬ ಬಾಳೆಕಾಯಿ ಚಿಪ್ಸ್, ಬಿಸ್ಕೆಟ್ ಮುಂತಾದ ತಿನಿಸುಗಳನ್ನು ತಂದಿದ್ದಾರೆ. ಎಲ್ಲವನ್ನೂ ಪೊಲೀಸರು ತಪಾಸಣೆ ಮಾಡಿ ನಂತರ ಒಳಗೆ ಕಳಿಸಿದ್ದಾರೆ. ಸಿನಿಮಾಗೆ ಸಂಬಂಧಿಸಿದಂತೆ ಕೆಲವು ಮುಖ್ಯ ವಿಚಾರಗಳನ್ನು ಕೂಡ ದರ್ಶನ್ ಜೊತೆ ಪ್ರಕಾಶ್ ಮಾತನಾಡಿ ಬಂದಿದ್ದಾರೆ. ಶೀಘ್ರದಲ್ಲೇ ದರ್ಶನ್ಗೆ ಜಾಮೀನು ಸಿಗಬಹುದು ಎಂಬ ನಿರೀಕ್ಷೆ ಅವರ ಆಪ್ತವಲಯಕ್ಕೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 5:55 pm, Thu, 26 September 24