ವಿಧಾನಸೌಧ- ವಿಕಾಸಸೌದಲ್ಲೂ ಆತ್ಯಾಚಾರ: ಮುನಿರತ್ನ ವಿರುದ್ಧ ಸಂತ್ರಸ್ತೆ ಮಹಿಳೆ ಸ್ಫೋಟಕ ಆರೋಪ!

ಅತ್ಯಾಚಾರ ಆರೋಪದಲ್ಲಿ ಸಿಲುಕಿರೋ ಶಾಸಕ ಮುನಿರತ್ನ ಈಗ SIT ಕಸ್ಟಡಿಯಲ್ಲಿದ್ದಾರೆ. ರಾಜ್ಯ ಸರ್ಕಾರದ ಆದೇಶದಂತೆ ಮುನಿರತ್ನ ವಿರುದ್ಧದ ತನಿಖೆ ನಡೆಸುತ್ತಿರೋ SIT ಟೀಂ ಮುನಿರತ್ನಗೆ ವಿಚಾರಣೆ ಶುರು ಮಾಡಿದೆ. SIT ಕಚೇರಿಯಲ್ಲೇ ಅತ್ಯಾಚಾರ ಸಂಬಂಧ ವಿಚಾರಣೆ ನಡೆಯುತ್ತಿದ್ದು, ಅಧಿಕಾರಿಗಳ ಪ್ರಶ್ನೆಗೆ ಶಾಸಕ ಥಂಡಾ ಹೊಡೆದಿದ್ದಾರೆ. ಇದರ ಮಧ್ಯ ಸಂತ್ರಸ್ತೆ ಮಹಿಳೆ ಮುನಿರತ್ನ ವಿರುದ್ಧ ಮತ್ತಷ್ಟು ಸ್ಫೋಟಕ ಆರೋಪಗಳನ್ನು ಮಾಡಿದ್ದಾರೆ.

ವಿಧಾನಸೌಧ- ವಿಕಾಸಸೌದಲ್ಲೂ ಆತ್ಯಾಚಾರ: ಮುನಿರತ್ನ ವಿರುದ್ಧ ಸಂತ್ರಸ್ತೆ ಮಹಿಳೆ ಸ್ಫೋಟಕ ಆರೋಪ!
ಮುನಿರತ್ನ
Follow us
| Updated By: ರಮೇಶ್ ಬಿ. ಜವಳಗೇರಾ

Updated on:Sep 26, 2024 | 3:46 PM

ಬೆಂಗಳೂರು, (ಸೆಪ್ಟೆಂಬರ್ 26):  ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅತ್ಯಾಚಾರ ಕೇಸ್ ಸಂಬಂಧ RR ನಗರ ಕ್ಷೇತ್ರದ ಶಾಸಕ ಬಿಜೆಪಿ ಮುನಿರತ್ನಗೆ ನ್ಯಾಯಾಂಗ ಬಂಧನದಲ್ಲಿದ್ದ ಮುನಿರತ್ನ ಈಗ SIT ಕಸ್ಟಡಿಯಲ್ಲಿದ್ದು, ಕೋರ್ಟ್ ಆದೇಶದಂತೆ ಮುನಿರತ್ನರನ್ನ ವಶಕ್ಕೆ ಪಡೆದ ವಿಶೇಷ ತನಿಖಾ ದಳದ ಅಧಿಕಾರಿಗಳು ಆರೋಪಿಯ ವಿಚಾರಣೆ ಮಾಡುತ್ತಿದ್ದಾರೆ. ಮತ್ತೊಂದೆಡೆ ಸಂತ್ರಸ್ತ ಮಹಿಳೆ ಮುನಿರತ್ನ ವಿರುದ್ಧ ಮತ್ತಷ್ಟು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಹೌದು….ವಿಧಾನಸೌಧ ಮತ್ತು ವಿಕಾಸಸೌದದಲ್ಲಿ ಆತ್ಯಾಚಾರ ಎಸಗಿದ್ದಾರೆ ಎಂದು ಸಂತ್ರಸ್ತ ಮಹಿಳೆ ಪೊಲೀಸರ ಮುಂದೆ ಮಹತ್ವದ ಹೇಳಿಕೆ ನೀಡಿದ್ದಾರೆ.

ವಿಧಾನಸೌಧ ಮತ್ತು ವಿಕಾಸಸೌದದಲ್ಲಿ ಮಾತ್ರವಲ್ಲದೇ ಸರ್ಕಾರಿ ಕಾರಿನಲ್ಲೂ ಸಹ ಅತ್ಯಾಚಾರವೆಸಗಿರುವುದಾಗಿ ಸಂತ್ರಸ್ತ ಮಹಿಳೆ ಪೊಲೀಸರ ಮುಂದೆ ಹೇಳಿಕೆ ದಾಖಲಿಸಿದ್ದಾರೆ. ಟಿವಿ9ಗೆ ಸಂತ್ರಸ್ತ ಮಹಿಳೆಯ ಎಕ್ಸೂಸ್ಲಿವ್ ಹೇಳಿಕೆ ಲಭ್ಯವಾಗಿದ್ದು, ಈ ಆರೋಪ ಮುನಿರತ್ನಗೆ ಮತ್ತಷ್ಟು ಸಂಕಷ್ಟ ತಂದೊಡ್ಡುವ ಸಾಧ್ಯತೆಗಳಿವೆ.

ಇದನ್ನೂ ಓದಿ: ಬಿಜೆಪಿ ಶಾಸಕ ಮುನಿರತ್ನ ಕೇಸ್​ಗಳ ತನಿಖೆಗೆ ಸಿದ್ಧವಾಯ್ತು ವಿಶೇಷ ಸಿಐಡಿ ತಂಡ

ಅತ್ಯಾಚಾರ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಬಿಜೆಪಿ ಶಾಸಕ ಮುನಿರತ್ನ ಈಗ SIT ಕಸ್ಟಡಿಯಲ್ಲಿದ್ದಾರೆ. ಕೋರ್ಟ್ ಆದೇಶದಂತೆ ಮುನಿರತ್ನರನ್ನ ವಶಕ್ಕೆ ಪಡೆದ ವಿಶೇಷ ತನಿಖಾ ದಳದ ಅಧಿಕಾರಿಗಳು ಆರೋಪಿಯ ವಿಚಾರಣೆ ಮಾಡುತ್ತಿದ್ದಾರೆ. ಮತ್ತೊಂದೆಡೆ ಸಂತ್ರಸ್ತ ಮಹಿಳೆ ಮುನಿರತ್ನ ವಿರುದ್ಧ ಮತ್ತಷ್ಟು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಮೊನ್ನೆ(ಸೆ.24ರ ರಾತ್ರಿಯೇ ಪರಪ್ಪನ ಅಗ್ರಹಾರ ಜೈಲಿನಿಂದ CID ಕಚೇರಿಗೆ ಬಂದಿರೋ ಮುನಿರತ್ನ ನಿನ್ನೆ(ಸೆ.25) ಇಂದು ದಿನಪೂರ್ತಿ ತನಿಖಾಧಿಕಾರಿಗಳ ವಿಚಾರಣೆಗೆ ಥಂಡಾ ಹೊಡೆದಿದ್ದಾರೆ.

ಬೇರೆ-ಬೇರೆ ಆಯಾಮಗಳಲ್ಲೂ ತನಿಖೆ

ತನಿಖಾಧಿಕಾರಿ SP ಸೌಮ್ಯಲತಾ ಮತ್ತು ಎಸಿ ಸೈಮನ್ ಆರೋಪಗಳ ಸಂಬಂಧ ಪ್ರಾಥಮಿಕ ಮಾಹಿತಿ ಕಲೆಹಾಕಿದ್ದಾರೆ. ಸಂತ್ರಸ್ಥೆ ಮಾಡಿರೋ ಆರೋಪಗಳನ್ನ ಮುಂದಿಟ್ಟು ಮುನಿರತ್ನರಿಂದ ಉತ್ತರ ಪಡೆದಿದ್ದಾರೆ. ಆದ್ರೆ ಸಂತ್ರಸ್ಥೆ ಆರೋಪಗಳೆಲ್ಲ ಸುಳ್ಳು ಎಂದಷ್ಟೇ ಮುನಿರತ್ನ ಹೇಳುತ್ತಿದ್ದಾರೆ. ಇನ್ನು ಆರೋಪಿ ಹೇಳಿಕೆ ದಾಖಲಿಸಿಕೊಂಡು ಪ್ರಾಥಮಿಕವಾಗಿ ಸಿಕ್ಕಿರೋ ಸಾಕ್ಷ್ಯಗಳನ್ನು ಮುಂದಿಟ್ಟು ಮತ್ತೊಮ್ಮೆ ಮುನಿರತ್ನರನ್ನ ವಿಚಾರಣೆ ನಡೆಸಲಿದ್ದಾರೆ.

ಇಷ್ಟಲ್ಲದೇ ನಾಳೆಯಿಂದ ಬೇರೆ ಆಯಾಮಗಳಲ್ಲೂ ಕೂಡ ತನಿಖೆ ಮುಂದುವರಿಯಲಿದೆ ಅದೇನಂದ್ರೆ ಆರೋಪಿ ಕರೆದೊಯ್ದಯ ಸ್ಥಳ ಮಹಜರು ಪ್ರಕ್ರಿಯೆ. ಆರೋಪಿ ಮುನಿರತ್ನ ಪುರುಷತ್ವ ಪರೀಕ್ಷೆ ನಡೆಸುವ ಸಾಧ್ಯತೆ. ಬೌರಿಂಗ್ ಆಸ್ಪತ್ರೆಯಲ್ಲಿ ನಡೆಯಲಿರುವ ಪುರುಷತ್ವ ಪರೀಕ್ಷೆ, ಮುನಿರತ್ನ ಮೊಬೈಲ್ ಬಗ್ಗೆ ಎಸ್ಐಟಿ ಹೆಚ್ಚು ಪೋಕಸ್ ಮಾಡಿದೆ. ಆದ್ರೆಮ  ಕೋಲಾರದ ಬಳಿ ಮೊಬೈಲ್ ಮಿಸ್ಸಿಂಗ್ ಆಗಿದೆ ಎಂದು ಮುನಿರತ್ನ ಹೇಳಿದ್ದಾರೆ. ಸದ್ಯ ಮುನಿರತ್ನ ಮೊಬೈಲ್ ನ IMEI ನಂಬರ್ ಪಡೆದು ಮೊಬೈಲ್ ಶೋಧ ನಡೆಸಿದ್ದಾರೆ. ಯಾಕಂದ್ರೆ ಈ ಮೊಬೈಲ್ ನಿಂದಲೇ ವೀಡಿಯೋ ಕಾಲ್ ಮಾಡಿದ್ರು, ಅರೆಬೆತ್ತಲಾಗುವಂತೆ ಒತ್ತಾಯ ಮಾಡಿದ್ದರು ಎಂದು ಸಂತ್ರಸ್ಥೆ ಆರೋಪ ಮಾಡಿದ್ದಾರೆ.

ಹೀಗೆ ಶಾಸಕ ಮುನಿರತ್ನ ಕೇಸ್ ಸಂಬಂಧ ಹಂತ ಹಂತವಾಗಿ SIT ಟೀಂ ತನಿಖೆ ನಡೆಸಲಿದೆ. ಸ್ಥಳ ಮಹಜರು ಪ್ರಕ್ರಿಯೆ ಕೂಡ ಬಹಳ ಮುಖ್ಯವಾಗಿದ್ದು, ಮೊಬೈಲ್ ಸಿಕ್ಕರೇ ತನಿಖೆಗೆ ದೊಡ್ಡ ಬಲ ಬರಲಿದೆ. ಒಟ್ನಲ್ಲಿ ಶಾಸಕರಾಗಿ ಐಷಾರಾಮಿ ಜೀವನ ನಡೆಸುತ್ತಿದ್ದ ಮುನಿರತ್ನ ಈಗ ರೇಪ್ ಕೇಸ್ ಆರೋಪಿಯಾಗಿ ವಿಲವಿಲ ಅಂತಿರೋದು ಸತ್ಯ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:33 pm, Thu, 26 September 24

ಅಪ್ಪು ಅಭಿಮಾನಕ್ಕೆ ಫ್ಯಾನ್ಸ್ ಕಟ್ಟಿದ ದೇವಸ್ಥಾನ ಉದ್ಘಾಟಿಸಿದ ಅಶ್ವಿನಿ
ಅಪ್ಪು ಅಭಿಮಾನಕ್ಕೆ ಫ್ಯಾನ್ಸ್ ಕಟ್ಟಿದ ದೇವಸ್ಥಾನ ಉದ್ಘಾಟಿಸಿದ ಅಶ್ವಿನಿ
ಶ್ರೀಗಳ ಉಪಟಳ ಹೆಚ್ಚಳ: ತಿರುಪತಿ ಲಡ್ಡು ಬಗ್ಗೆ ಕೋಡಿಶ್ರೀ ಮಾತು
ಶ್ರೀಗಳ ಉಪಟಳ ಹೆಚ್ಚಳ: ತಿರುಪತಿ ಲಡ್ಡು ಬಗ್ಗೆ ಕೋಡಿಶ್ರೀ ಮಾತು
ಕ್ಲಾಸ್​ರೂಂನಲ್ಲೇ ಶಿಕ್ಷಕಿಗೆ ಬೆದರಿಕೆ ಹಾಕಿ, ಉಗುಳಿದ ಎಂಬಿಎ ವಿದ್ಯಾರ್ಥಿ
ಕ್ಲಾಸ್​ರೂಂನಲ್ಲೇ ಶಿಕ್ಷಕಿಗೆ ಬೆದರಿಕೆ ಹಾಕಿ, ಉಗುಳಿದ ಎಂಬಿಎ ವಿದ್ಯಾರ್ಥಿ
ಸಿದ್ದರಾಮಯ್ಯಗೆ ಮುಡಾ ಸಂಕಷ್ಟ: ಈ ಹಿಂದೆ ಕೋಡಿಶ್ರೀ ನುಡಿದಿದ್ದ ಭವಿಷ್ಯ ನಿಜ
ಸಿದ್ದರಾಮಯ್ಯಗೆ ಮುಡಾ ಸಂಕಷ್ಟ: ಈ ಹಿಂದೆ ಕೋಡಿಶ್ರೀ ನುಡಿದಿದ್ದ ಭವಿಷ್ಯ ನಿಜ
ಕಂಠಪೂರ್ತಿ ಕುಡಿದು ಅಪ್ಪನ ತಲೆಗೆ ಇಟ್ಟಿಗೆಯಿಂದ ಹೊಡೆದು ಕೊಂದ ಮಗ
ಕಂಠಪೂರ್ತಿ ಕುಡಿದು ಅಪ್ಪನ ತಲೆಗೆ ಇಟ್ಟಿಗೆಯಿಂದ ಹೊಡೆದು ಕೊಂದ ಮಗ
ಬೆಂಗಳೂರಿನ ‘ಏರಿಯಾನ್ ಟೆಕ್ನಾಲಜಿ ಕಂಪನಿ’ಯಲ್ಲಿ ಅಗ್ನಿ ಅವಘಡ;ತಪ್ಪಿದ ಅನಾಹುತ
ಬೆಂಗಳೂರಿನ ‘ಏರಿಯಾನ್ ಟೆಕ್ನಾಲಜಿ ಕಂಪನಿ’ಯಲ್ಲಿ ಅಗ್ನಿ ಅವಘಡ;ತಪ್ಪಿದ ಅನಾಹುತ
ಅಮ್ಮ-ಮಗು ಮೇಲೆ ಬೀದಿ ನಾಯಿಗಳ ದಾಳಿ; ಶಾಕಿಂಗ್ ವಿಡಿಯೋ ವೈರಲ್
ಅಮ್ಮ-ಮಗು ಮೇಲೆ ಬೀದಿ ನಾಯಿಗಳ ದಾಳಿ; ಶಾಕಿಂಗ್ ವಿಡಿಯೋ ವೈರಲ್
ನ್ಯಾಯಾಂಗ ನಿಂದನೆ ತೂಗುಗತ್ತಿ ಬೆನ್ನಲ್ಲೇ ಎಚ್ಚೆತ್ತುಕೊಂಡ ಜಮೀರ್
ನ್ಯಾಯಾಂಗ ನಿಂದನೆ ತೂಗುಗತ್ತಿ ಬೆನ್ನಲ್ಲೇ ಎಚ್ಚೆತ್ತುಕೊಂಡ ಜಮೀರ್
ಮುನಿರತ್ನರಿಂದ ಅತ್ಯಾಚಾರ ಆರೋಪ;ವಿಕಾಸಸೌಧದಲ್ಲಿ ‘ಕೈ’ ಮುಖಂಡರಿಂದ ಶುದ್ಧೀಕರಣ
ಮುನಿರತ್ನರಿಂದ ಅತ್ಯಾಚಾರ ಆರೋಪ;ವಿಕಾಸಸೌಧದಲ್ಲಿ ‘ಕೈ’ ಮುಖಂಡರಿಂದ ಶುದ್ಧೀಕರಣ
ಮುಡಾ ಕೇಸ್: ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡಿದ್ದ ಸಚಿವ ಜಮೀರ್​ಗೆ ಸಂಕಷ್ಟ!
ಮುಡಾ ಕೇಸ್: ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡಿದ್ದ ಸಚಿವ ಜಮೀರ್​ಗೆ ಸಂಕಷ್ಟ!