ದೇಶದ್ರೋಹ ಚಟುವಟಿಕೆ ಆರೋಪ: ಮುಸ್ಲಿಂ ಮಹಿಳೆ ವಿರುದ್ಧ ಮುಸ್ಲಿಂ ಮುಖಂಡರಿಂದಲೇ ದೂರು
ತುಮಕೂರಿನ 150ಕ್ಕೂ ಹೆಚ್ಚು ಮುಸ್ಲಿಂ ಮುಖಂಡರು ಇಶ್ರತ್ ಎಂಬುವರ ವಿರುದ್ಧ ದೇಶದ್ರೋಹ ಚಟುವಟಿಕೆಗಳ ಆರೋಪ ಹೊರಿಸಿ ದೂರು ನೀಡಿದ್ದಾರೆ. ಪಾಕಿಸ್ತಾನ ಮೂಲದ ಸಂಘಟನೆಯಾದ ಎಂಎಫ್ಐ ಮೂಲಕ ಇಶ್ರತ್ ಸೂಫಿ ಪಂಥದ ತತ್ವಗಳನ್ನು ಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಇದು ಮುಸ್ಲಿಂ ಸಮುದಾಯವನ್ನು ಒಡೆಯುವ ಮತ್ತು ದೇಶದ್ರೋಹಿ ಚಟುವಟಿಕೆಗಳಲ್ಲಿ ಭಾಗವಹಿಸಲು ಪ್ರಚೋದಿಸುವ ಉದ್ದೇಶವನ್ನು ಹೊಂದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇಶ್ರತ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮುಖಂಡರು ಒತ್ತಾಯಿಸಿದ್ದಾರೆ.
ತುಮಕೂರು, ಆಗಸ್ಟ್ 26: ತುಮಕೂರು ಮೂಲದ ಇಶ್ರತ್ ಎಂಬುವರು ಪಾಕಿಸ್ತಾನ ಮೂಲದ ಸಂಘಟನೆ ಮೂಲಕ ದೇಶದ್ರೋಹ ಚಟುವಟಿಕೆ ನಡೆಸುತ್ತಿದ್ದಾರೆ ಎಂದು ತುಮಕೂರಿನ 150ಕ್ಕೂ ಹೆಚ್ಚು ಮುಸ್ಲಿಂ ಮುಖಂಡರು ದೂರು ನೀಡಿದ್ದಾರೆ. ಎಂಎಫ್ಐ-ಮೆಹ್ದಿ ಫೌಂಡೇಶನ್ನ ವಿಡಿಯೋಗಳ ಮೂಲಕ ಇಶ್ರತ್ ಸೂಫಿ ಪಂಥದ ತತ್ವ ಪ್ರಚಾರ ಮಾಡುತ್ತಿದ್ದಾರೆ. ವಿದೇಶ ಮೂಲದ ರಿಯಾಜ್ ಅಹ್ಮದ್ ಗೋಹರ್ ಶಾಹಿ ಎಂಎಫ್ಐ ಸ್ಥಾಪಿಸಿದ್ದಾರೆ. ಈ ಸಂಸ್ಥೆ ಇಂಗ್ಲೆಂಡ್ನಲ್ಲಿ ನೋಂದಣಿಯಾಗಿದೆ. ಮುಸ್ಲಿಂ ಸಮುದಾಯದ ಜನರನ್ನ ಒಡೆಯುವ ಕೆಲಸ ಹಾಗೂ ದೇಶದ್ರೋಹಿ ಚಟುವಟಿಕೆಗಳಲ್ಲಿ ಭಾಗಿಯಾಗಲು ಇಶ್ರತ್ ಪ್ರಚೋದನೆ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇಶ್ರತ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
