ಶಿವಮೊಗ್ಗ ಹರ್ಷನ ಕೊಲೆ ಆರೋಪಿಗಳು ಜೈಲಲ್ಲಿ ಮೊಬೈಲ್​ಗಳಿಂದ ಕುಟುಂಬದವರೊಂದಿಗೆ ಮಾತಾಡಿಕೊಂಡು ಮಜವಾಗಿದ್ದಾರೆ!

ಖಾಸೀಫ್ ಮತ್ತು ಅವನ ಗ್ಯಾಂಗನ್ನು ಇಟ್ಟಿರುವ ಸೆಲ್ ಮೇಲೆ ಪೊಲೀಸರು ದಾಳಿ ನಡೆಸಿದಾಗ ಅಲ್ಲಿ ಸೆಲ್ ಫೋನ್ ಮತ್ತು ಇತರ ಎಲೆಕ್ಟ್ರಾನಿಕ್ ಉಪಕರಣಗಳು ಸಿಕ್ಕಿವೆ.

TV9kannada Web Team

| Edited By: Arun Belly

Jul 04, 2022 | 4:06 PM

Shivamogga:  ಕೆಲ ತಿಂಗಳ ಹಿಂದೆ ಶಿವಮೊಗ್ಗದಲ್ಲಿ ಬಜರಂಗ ದಳದ (Bajrang Dal) ಕಾರ್ಯಕರ್ತ ಹರ್ಷನನ್ನು (Harsha) ಕೊಂದ ಅರೋಪದಲ್ಲಿ ಬೆಂಗಳೂರು  ಸೆಂಟ್ರಲ್ ಜೈಲಿನಲ್ಲಿರುವವರು ಏನು ಮಾಡುತ್ತಿದ್ದಾರೆ ಗೊತ್ತಾ? ಸೆರೆವಾಸವನ್ನು ಎಂಜಾಯ್ ಮಾಡುತ್ತಿದ್ದಾರೆ ಅಂದರೆ ನಂಬ್ತೀರಾ? ಖಾಸೀಫ್ (Khasif) ಮತ್ತು ಅವನ ಗ್ಯಾಂಗನ್ನು ಇಟ್ಟಿರುವ ಸೆಲ್ ಮೇಲೆ ಪೊಲೀಸರು ದಾಳಿ ನಡೆಸಿದಾಗ ಅಲ್ಲಿ ಸೆಲ್ ಫೋನ್ ಮತ್ತು ಇತರ ಎಲೆಕ್ಟ್ರಾನಿಕ್ ಉಪಕರಣಗಳು ಸಿಕ್ಕಿವೆ. ತಮ್ಮ ಕುಟುಂಬದ ಸದಸ್ಯರೊಂದಿಗೆ ಅವರು ವಿಡಿಯೋ ಕಾಲ್ ಮಾಡಿ ಮಾತಾಡುತ್ತಿದ್ದಾರೆ, ಸೆಲ್ಫೀಗಳನ್ನು ತೆಗೆದುಕೊಂಡು ಕಳಿಸುತ್ತಿದ್ದಾರೆ. ಅವರಲ್ಲಿಗೆ ಮೊಬೈಲ್ ಫೋನ್ ಗಳು ಹೇಗೆ ತಲುಪಿದವು ಅಂತ ಪೊಲೀಸರೇ ಹೇಳಬೇಕು.

ಇದನ್ನೂ ಓದಿ: Viral Video: ಚಬಾ ಚಂಡಮಾರುತಕ್ಕೆ ಮುಳುಗಿದ ಹಡಗು, ನಾವಿಕರನ್ನು ರಕ್ಷಿಸುವ ರೋಚಕ ವಿಡಿಯೋ ವೈರಲ್

Follow us on

Click on your DTH Provider to Add TV9 Kannada