ಕೊಡಗು ಮತ್ತೆ ತತ್ತರ, ಸ್ಥಳೀಯ ಆಡಳಿತ ನಿರುತ್ತರ - ಟಿವಿ9 ಡಿಜಿಟಲ್​ ಲೈವ್​ನಲ್ಲಿ ಚರ್ಚೆ

ಕೊಡಗು ಮತ್ತೆ ತತ್ತರ, ಸ್ಥಳೀಯ ಆಡಳಿತ ನಿರುತ್ತರ – ಟಿವಿ9 ಡಿಜಿಟಲ್​ ಲೈವ್​ನಲ್ಲಿ ಚರ್ಚೆ

TV9 Web
| Updated By: ಸಾಧು ಶ್ರೀನಾಥ್​

Updated on: Jul 04, 2022 | 3:36 PM

ಆಷಾಢದ ಮಳೆಗೆ ಮತ್ತೆ ಕೊಡಗು ತತ್ತರಿಸಿದೆ. ಮೊದಲು ಭೂಮಿ ಕಂಪಿಸಿ, ಮಳೆ ಜೋರಾದಂತೆ ಭೂ ಕುಸಿತವೂ ಆಗುತ್ತಿದೆ. ಈ ಕುರಿತಾದ ಚರ್ಚೆ ಇಂದಿನ ಟಿವಿ9 ಡಿಜಿಟಲ್​ ಲೈವ್​ನಲ್ಲಿ

ಆಷಾಢದ ಮಳೆಗೆ ಮತ್ತೆ ಕೊಡಗು ತತ್ತರಿಸಿದೆ. ಮೊದಲು ಭೂಮಿ ಕಂಪಿಸಿ, ಮಳೆ ಜೋರಾದಂತೆ ಭೂ ಕುಸಿತವೂ ಆಗುತ್ತಿದೆ. ಮಡಿಕೇರಿ (Madikeri) ತಾಲೂಕಿನ ತಾಳತ್ ಮನೆ ಗ್ರಾಮದ ಬಳಿಯ ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ (National Highway) 275 ರಲ್ಲಿ ಮತ್ತೆ ಭೂಕುಸಿತ (Landslide) ಸಂಭವಿಸಿದೆ. ಗುತ್ತಿಗೆದಾರರು ಅವೈಜ್ಞಾನಿಕವಾಗಿ ರಸ್ತೆ ಬದಿ ಗುಡ್ಡ ಅಗೆದಿದ್ದ ಕಾರಣ ಭೂಕುಸಿತ ಸಂಭವಿಸಿದ್ದು, ಗುಡ್ಡದ ಮಣ್ಣು ರಸ್ತೆಗೆ ಕೊಚ್ಚಿ ಬಂದಿದೆ. ಇದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ಸಂಚಾರಕ್ಕೆ ಅಡ್ಡಿಯಾಗಿದೆ.

ದಕ್ಷಿಣ ಕನ್ನಡ ಗಡಿಯಲ್ಲಿ ಕೊಡಗು ಭಾಗದಲ್ಲಿ ಭೂ ಕಂಪನಗಳ ಹಿನ್ನೆಲೆ 18 ಗ್ರಾಮಸ್ಥರು ಪ್ರಾಕೃತಿಕ ವಿಕೋಪ‌ ಸಂಭವಿಸದಂತೆ ದೇವರ ಮೊರೆ ಹೋಗಿದ್ದಾರೆ. ಈ ಸಂಬಂಧ ತೋಡಿಕಾನ ಶ್ರೀ ಮಲ್ಲಿಕಾರ್ಜುನ ದೇವಾಲಯದಲ್ಲಿ ಪೂಜೆ ನೆರವೇರಿಸಿದ್ದಾರೆ. ದೇವರಲ್ಲಿ ಭೂಕಂಪನ, ಭೂ ಕುಸಿತ, ಪ್ರವಾಹ ದಂತಹ ವಿಕೋಪ ಸಂಭವಿಸದಂತೆ ಬೇಡಿಕೆ ಇಟ್ಟಿದ್ದಾರೆ.

ಈ ಕುರಿತಾದ ಚರ್ಚೆಯನ್ನು ಆ್ಯಂಕರ್​ ಚಂದ್ರಮೋಹನ್​ ಇಂದಿನ ಟಿವಿ9 ಡಿಜಿಟಲ್​ ಲೈವ್​ನಲ್ಲಿ ನಡೆಸಿಕೊಡಲಿದ್ದಾರೆ. ಮಧ್ಯಾಹ್ನ 3.30 ಕ್ಕೆ ನಡೆಯುವ ಈ ಕಾರ್ಯಕ್ರಮಕ್ಕೆ ನಿಮಗೆ ಸ್ವಾಗತ. TV 9 Kannada Digital Live