ಯಾರೇನೆ ಮೈತ್ರಿ ಮಾಡಿಕೊಂಡರೂ ನನ್ನ ನಿಲುವಿಗೆ ನಾನು ಬದ್ಧ: ಸುಮಲತಾ ಅಂಬರೀಶ್, ಸಂಸದೆ
ಪಕ್ಷೇತರ ಸಂಸದರಾಗಿದ್ದರೂ ಬಿಜೆಪಿಗೆ ತಮ್ಮ ಬೆಂಬಲ ಸೂಚಿಸಿರುವ ಸುಮಲತಾ ರಾಜ್ಯದ ಕೆಲ ಬಿಜೆಪಿ ನಾಯಕರ ಹಾಗೆ ಜೆಡಿಎಸ್ ಜೊತೆ ಮೈತ್ರಿ ವಿಚಾರಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ. ಯಾರು ಯಾರೊಂದಿಗೆ ಮೈತ್ರಿ ಮಾಡಿಕೊಂಡರೂ ಅದು ತನಗೆ ಸಂಬಂಧಿಸದ ವಿಷಯ, ತಾನು ಮಾತ್ರ ತನ್ನ ನಿಲುವಿಗೆ ಬದ್ಧರಾಗಿರುವುದಾಗಿ ಹೇಳಿ ಮಂಡ್ಯ ರಾಜಕಾರಣ ಸದಾ ಸವಾಲುಗಳಿಂದ ಕೂಡಿರುತ್ತದೆ ಅಂದರು.
ಮಂಡ್ಯ: ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ತಮ್ಮನ್ನು ಇಂಟರ್ ಪಾರ್ಲಿಮೆಂಟರಿ ಯೂನಿಯನ್ (Inter Parliamentary Union) ಹೆಸರಿನ ಒಂದು ಜಾಗತಿಕ ಸಭೆಗಾಗಿ ವಿಶ್ವಸಂಸ್ಥೆಯಲ್ಲಿ ಭಾರತೀಯ ಸಂಸದರನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಿದ್ದು ವೈಯಕ್ತಿಕವಾಗಿ ತನಗೆ ಮತ್ತು ತಾವು ಪ್ರತಿನಿಧಿಸುವ ಮಂಡ್ಯ ಜಿಲ್ಲೆಗೆ ಸಂದ ದೊಡ್ಡ ಗೌರವ ಎಂದು ಹೇಳಿದರು. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ (UN Security Council) ವಿಶ್ವದ ನಾನಾ ದೇಶಗಳ ಸಂಸದರ ಮುಂದೆ ಭಯೋತ್ಪಾದನೆ ವಿರುದ್ಧ ಭಾರತದ ನಿಲುವನ್ನು ಸ್ಪಷ್ಟಪಡಿಸುವ ಅವಕಾಶ ಸಿಕ್ಕಿದ್ದು ಹೆಮ್ಮೆಯ ವಿಚಾರ ಎಂದು ಸುಮಲತಾ ಹೇಳಿದರು. ಬಳಿಕ ರಾಜ್ಯ ರಾಜಕಾರಣದ ಬಗ್ಗೆ ಮಾತಾಡಿದ ಅವರು ಬಿಜೆಪಿ-ಜೆಡಿಎಸ್ ಮೈತ್ರಿಯ ಬಗ್ಗೆ ಕೇಳಿದಾಗ ಜೋರಾಗಿ ನಕ್ಕರು. ಪಕ್ಷೇತರ ಸಂಸದರಾಗಿದ್ದರೂ ಬಿಜೆಪಿಗೆ ತಮ್ಮ ಬೆಂಬಲ ಸೂಚಿಸಿರುವ ಸುಮಲತಾ ರಾಜ್ಯದ ಕೆಲ ಬಿಜೆಪಿ ನಾಯಕರ ಹಾಗೆ ಜೆಡಿಎಸ್ ಜೊತೆ ಮೈತ್ರಿ ವಿಚಾರಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ. ಯಾರು ಯಾರೊಂದಿಗೆ ಮೈತ್ರಿ ಮಾಡಿಕೊಂಡರೂ ಅದು ತನಗೆ ಸಂಬಂಧಿಸದ ವಿಷಯ, ತಾನು ಮಾತ್ರ ತನ್ನ ನಿಲುವಿಗೆ ಬದ್ಧರಾಗಿರುವುದಾಗಿ ಹೇಳಿ ಮಂಡ್ಯ ರಾಜಕಾರಣ ಸದಾ ಸವಾಲುಗಳಿಂದ ಕೂಡಿರುತ್ತದೆ ಅಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ