AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಮಿಳುನಾಡಿಗೆ ಮತ್ತೆ ನೀರು ಹರಿಸುವಂತೆ ಸುಪ್ರೀಂಕೋರ್ಟ್ ಆದೇಶ: ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಿಷ್ಟು

ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಸುಪ್ರೀಂ ಕೋರ್ಟ್​ ಆದೇಶ ನೀಡಿದೆ. ಈ ಕುರಿತಾಗಿ ಮಂಡ್ಯದಲ್ಲಿ ಮಾತನಾಡಿದ ಸಂಸದೆ ಸುಮಲತಾ ಅಂಬರೀಶ್​​, ಸುಪ್ರಿಂ ಕೋರ್ಟ್ ರಿಲೀಫ್ ಕೊಡುತ್ತದೆ ಎಂದು ಭಾವಿಸಿದ್ದೇವು. ಆದರೆ ಮತ್ತೆ ನಮಗೆ ಅನ್ಯಾಯ ಆಗಿದೆ. ಸುಪ್ರಿಂ ಕೋರ್ಟ್ ಆದೇಶ ಗೌರವಿಸಬೇಕು, ಪಾಲಿಸಬೇಕು. ಇದನ್ನ ನಾನು ರಾಜಕೀಯವಾಗಿ ಮಾತನಾಡಲ್ಲ ಎಂದಿದ್ದಾರೆ.

ತಮಿಳುನಾಡಿಗೆ ಮತ್ತೆ ನೀರು ಹರಿಸುವಂತೆ ಸುಪ್ರೀಂಕೋರ್ಟ್ ಆದೇಶ: ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಿಷ್ಟು
ಸಂಸದೆ ಸುಮಲತಾ ಅಂಬರೀಶ್
ಪ್ರಶಾಂತ್​ ಬಿ.
| Edited By: |

Updated on: Sep 21, 2023 | 6:08 PM

Share

ಮಂಡ್ಯ, ಸೆಪ್ಟೆಂಬರ್​ 21: ಸುಪ್ರಿಂ ಕೋರ್ಟ್ ರಿಲೀಫ್ ಕೊಡುತ್ತದೆ ಎಂದು ಭಾವಿಸಿದ್ದೇವು. ಆದರೆ ಮತ್ತೆ ನಮಗೆ ಅನ್ಯಾಯ ಆಗಿದೆ. ಸುಪ್ರಿಂ ಕೋರ್ಟ್ ಆದೇಶ ಗೌರವಿಸಬೇಕು, ಪಾಲಿಸಬೇಕು. ಇದನ್ನ ನಾನು ರಾಜಕೀಯವಾಗಿ ಮಾತನಾಡಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ (MP Sumalatha Ambarish) ಹೇಳಿದ್ದಾರೆ. ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಯಾರು ಮಧ್ಯ ಪ್ರವೇಶಿಸಿದ ಪರಿಸ್ಥಿತಿಯಲ್ಲಿ ಇದ್ದೇವೆ. ಕೇಂದ್ರ ಸಹ ಮಧ್ಯ ಪ್ರವೇಶಿಸಿದ ಪರಿಸ್ಥಿತಿ ಇದೆ. ಅನ್ಯಾಯ ಆಗುವ ರೈತರಿಗೆ ಏನು ಉತ್ತರ ಕೊಡಬೇಕು. ಸುಪ್ರಿಂ ಕೋರ್ಟ್ ಹತ್ತಿರ ಹೋಗಿ ಹೋರಾಟ ಮಾಡಲು ಸಾಧ್ಯವಿಲ್ಲ. ಅಧಿಕಾರಿಗಳು ಹೇಳುವ ಮಾಹಿತಿ ಕೇಳಿ ಆತಂಕ ಆಗುತ್ತದೆ ಎಂದು ಹೇಳಿದ್ದಾರೆ.

ಕೃಷಿಗೆ ನೀರು ಬಿಡುವ ಪರಿಸ್ಥಿತಿ ಇಲ್ಲ. ಕುಡಿಯುವ ನೀರಿಗೂ ಸಮಸ್ಯೆ ಆಗಲಿದೆ. ಏನು ಮಾಡಬೇಕು ಎಂದು ಕೇಳಿದ್ದೇನೆ. ಸಿಎಂ ಅವರು ಮೂರು ಸಭೆ ಕರೆದಿದ್ದರು. ಎಲ್ಲ ಸಭೆ ಕೂಡ ಭಾಗಿಯಾಗಿದ್ದೇನೆ. ಯಾತಕ್ಕೆ ಪ್ರತಿಭಾರಿ ಹಿನ್ನಡೆಯಾಗುತ್ತಿದೆ. ವಾದ ಮಾಡುವಲ್ಲಿ ಲೋಪ ಕಾಣಿಸುತ್ತಿದೆ. ಸಿಬ್ಲ್ಯೂಡಿ ಮೀಟಿಂಗ್​ನಲ್ಲಿ ತಮಿಳುನಾಡಿನ ಎಲ್ಲ ಅಧಿಕಾರಿಗಳು ಭಾಗಿಯಾಗಿದ್ದರು. ಆದರೆ ನಮ್ಮ ಅಧಿಕಾರಿಗಳು ವಿಡಿಯೋ ಕನ್ಫರೆನ್ಸ್ ಮೂಲಕ ಭಾಗಿಯಾಗಿದ್ದಾರೆ. ಇದರಿಂದ ಏನು ಏಫೆಕ್ಟ್ ಬರಲಿದೆ. ನಮ್ಮ ಪ್ರಯತ್ನ ಮಾಡಬೇಕು. ಗಂಭೀರ ವಿಷಯವನ್ನ ಉಡಾಫೆಯಾಗಿ ತೆಗೆದುಕೊಂಡಿದ್ದಾರೆ. ಇದನ್ನ ಖಂಡಿಸುತ್ತೇನೆ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Mandya Bandh; ಕಾವೇರಿ ಹೋರಾಟ ತೀವ್ರ; ಸೆಪ್ಟೆಂಬರ್ 23 ರಂದು ಮಂಡ್ಯ ಬಂದ್

16 ಟಿಎಂಸಿಯಲ್ಲಿ ತಮಿಳುನಾಡಿಗೆ ಬಿಟ್ಟು, ಕೃಷಿ ಕುಡಿಯಲು ಬಳಸಬೇಕಿದೆ. 4 ಟಿಎಂಸಿ ಡೆಡ್ ಸ್ಟೋರೇಜ್ ಇದೆ. ಮಳೆ ಬಂದರೆ ಮಾತ್ರ ಕಷ್ಟ ಬಗೆಹರಿಯಲಿದೆ. ಬೇರೆ ದಾರಿ ಕಾಣುತ್ತಿಲ್ಲ. ದೆಹಲಿಯಲ್ಲಿ ಜಲಶಕ್ತಿ ಸಚಿವರನ್ನ ಭೇಟಿ ಮಾಡಿದ್ದೇನೆ. ಏನಾದರೂ ದಾರಿ ಮಾಡಿಕೊಡಿ ಎಂದು ಕೇಳಿದ್ದೇ. ಒಂದು ಕಮಿಟಿ ಮಾಡಿ ವಾಸ್ತವ ಪರಿಸ್ಥಿತಿ ತಿಳಿಯಲು ಸರ್ವೆ ಮಾಡಿಸುತ್ತೇನೆ ಎಂದಿದ್ದಾರೆ. ನಮಗೆ ಉಳಿದಿರುವ ದಾರಿ ಬೇರೆ ಇಲ್ಲ. ಕುಡಿಯುವ ನೀರಿನ ಅಗತ್ಯ ಬಿಟ್ಟು, ಕೃಷಿಗೆ ನೀರನ್ನ ಬಿಡಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು‌ ಹೇಳುತ್ತಿದ್ದಾರೆ.

ಇದನ್ನೂ ಓದಿ: ಮಂಡ್ಯದಲ್ಲಿ ತೀವ್ರಗೊಂಡ ರೈತರ ಪ್ರತಿಭಟನೆ; ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್

ಇಂತಹ ಸಂದರ್ಭದಲ್ಲಿ ಸರ್ಕಾರ ರೈತರ ನೆರವಿಗೆ ಬರಬೇಕು. ಸರ್ಕಾರ ನಷ್ಟ ಪರಿಹಾರ ಘೋಷಣೆ ಮಾಡಬೇಕು. ಬೆಳೆ ಇನ್ಶೂರೆನ್ಸ್ ಮಾಡಿಸಿಕೊಳ್ಳುವಲ್ಲಿ ರೈತರು ಎಡವಿದ್ದಾರೆ. ನಾಲ್ಕು ವರ್ಷ ಮಳೆ ಬಂದಿತ್ತು. ಯಾರಿಗೂ ಯೋಚನೆ ಬಂದಿರಲಿಲ್ಲ. ಮತ್ತೆ ದೆಹಲಿಗೆ ಹೋಗುತ್ತೇನೆ. ಪರಸ್ಪರ ರಾಜ್ಯಗಳು ಕುಳಿತು ಮಾತನಾಡಬೇಕು. ಗುಡ್ ವಿಲ್ ಬಳಸಿಕೊಂಡು ಮಾತುಕತೆ ನಡೆಸಬೇಕು. ಇಲ್ಲಿನ ಪರಿಸ್ಥಿತಿ ತಿಳಿಸಬೇಕು. ನೀರು ಕೊಡಲು ಆಗಲ್ಲ ಎಂಬುದಲ್ಲ ವಾದ. ನಮ್ಮ ಪರಿಸ್ಥಿತಿ ಏನಿದೆ ಎಂದು ನೋಡಿ ಎಂದು ತಿಳಿಸಬೇಕು. ನಮ್ಮಲ್ಲೂ ತಮಿಳಿಗರು ಇದ್ದಾರೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಬಾಂಗ್ಲಾದಲ್ಲಿ ಮತ್ತೋರ್ವ ಹಿಂದೂ ಮೇಲೆ ಹಲ್ಲೆ ನಡೆಸಿ, ಬೆಂಕಿ ಹಚ್ಚಿದ ಗುಂಪು
ಬಾಂಗ್ಲಾದಲ್ಲಿ ಮತ್ತೋರ್ವ ಹಿಂದೂ ಮೇಲೆ ಹಲ್ಲೆ ನಡೆಸಿ, ಬೆಂಕಿ ಹಚ್ಚಿದ ಗುಂಪು
46 ಎಸೆತಗಳಲ್ಲಿ 58 ರನ್ ಬಾರಿಸಿ ತಂಡ ಗೆಲ್ಲಿಸಿದ ಬಾಬರ್ ಆಝಂ
46 ಎಸೆತಗಳಲ್ಲಿ 58 ರನ್ ಬಾರಿಸಿ ತಂಡ ಗೆಲ್ಲಿಸಿದ ಬಾಬರ್ ಆಝಂ
ರಾಹುಲ್ ಗಾಂಧಿಯನ್ನು ಶ್ರೀರಾಮನಿಗೆ ಹೋಲಿಸಿದ ಕಾಂಗ್ರೆಸ್ ನಾಯಕ ನಾನಾ ಪಟೋಲೆ
ರಾಹುಲ್ ಗಾಂಧಿಯನ್ನು ಶ್ರೀರಾಮನಿಗೆ ಹೋಲಿಸಿದ ಕಾಂಗ್ರೆಸ್ ನಾಯಕ ನಾನಾ ಪಟೋಲೆ
ಬಿಗ್​​ಬಾಸ್​​ ಶೋನಲ್ಲಿ ಈ ವಾರ ಏನು ಮಾಡ್ತೀನಿ ನೋಡ್ತಿರಿ: ಸುದೀಪ್
ಬಿಗ್​​ಬಾಸ್​​ ಶೋನಲ್ಲಿ ಈ ವಾರ ಏನು ಮಾಡ್ತೀನಿ ನೋಡ್ತಿರಿ: ಸುದೀಪ್
ಮದ್ಯದ ಅಮಲಲ್ಲಿ ಫುಟ್ಪಾತ್​​ಗೆ ಕಾರು ನುಗ್ಗಿಸಿದ ಚಾಲಕ: ಬಾಲಕಿ ಜಸ್ಟ್​​ಮಿಸ್
ಮದ್ಯದ ಅಮಲಲ್ಲಿ ಫುಟ್ಪಾತ್​​ಗೆ ಕಾರು ನುಗ್ಗಿಸಿದ ಚಾಲಕ: ಬಾಲಕಿ ಜಸ್ಟ್​​ಮಿಸ್
ಕರ್ನಾಟಕದವರನ್ನ ಬಿಟ್ಟು ಬೇರೆಯವರಿಗೆ ಮನೆ ಕೊಡಲ್ಲ: ಸಚಿವ ಜಮೀರ್ ಖಡಕ್ ಮಾತು
ಕರ್ನಾಟಕದವರನ್ನ ಬಿಟ್ಟು ಬೇರೆಯವರಿಗೆ ಮನೆ ಕೊಡಲ್ಲ: ಸಚಿವ ಜಮೀರ್ ಖಡಕ್ ಮಾತು
ಬೆಂಗಳೂರಲ್ಲಿ 26 ಕಿ.ಮೀ. ಹೆಜ್ಜೆ ಹಾಕಿದ ಪಾದಚಾರಿಗಳು: ಕಾರಣ ಏನು?
ಬೆಂಗಳೂರಲ್ಲಿ 26 ಕಿ.ಮೀ. ಹೆಜ್ಜೆ ಹಾಕಿದ ಪಾದಚಾರಿಗಳು: ಕಾರಣ ಏನು?
ಟಿ20 ವಿಶ್ವಕಪ್​ಗೆ ತಂಡ ಪ್ರಕಟವಾದ ಬೆನ್ನಲ್ಲೇ ಅಬ್ಬರಿಸಿದ ಆಸೀಸ್ ನಾಯಕ
ಟಿ20 ವಿಶ್ವಕಪ್​ಗೆ ತಂಡ ಪ್ರಕಟವಾದ ಬೆನ್ನಲ್ಲೇ ಅಬ್ಬರಿಸಿದ ಆಸೀಸ್ ನಾಯಕ
ಗಿಲ್ಲಿ ಹಾಡಿಗೆ ಧ್ರುವಂತ್ ಅಪಸ್ವರ: ಉಗುರಲ್ಲೇ ಕೊಲ್ಲುವೆ ಎಂದ ಗಿಲ್ಲಿ
ಗಿಲ್ಲಿ ಹಾಡಿಗೆ ಧ್ರುವಂತ್ ಅಪಸ್ವರ: ಉಗುರಲ್ಲೇ ಕೊಲ್ಲುವೆ ಎಂದ ಗಿಲ್ಲಿ
ರಾಮನಗರ: ನಡುರಸ್ತೆಯಲ್ಲೇ ವಾಮಾಚಾರ; ನ್ಯೂಇಯರ್​ ಸಂಭ್ರಮದಲ್ಲಿದ್ದವರಿಗೆ ಶಾಕ್
ರಾಮನಗರ: ನಡುರಸ್ತೆಯಲ್ಲೇ ವಾಮಾಚಾರ; ನ್ಯೂಇಯರ್​ ಸಂಭ್ರಮದಲ್ಲಿದ್ದವರಿಗೆ ಶಾಕ್