ಕರ್ನಾಟಕದಲ್ಲಿ ಭುಗಿಲೆದ್ದ ಕಾವೇರಿ ಕಿಚ್ಚು: ಬೆಂಗಳೂರಿನಲ್ಲಿ ತಮಿಳರು ವಾಸಿಸುವ ಏರಿಯಾಗಳಲ್ಲಿ ಕಟ್ಟೆಚ್ಚರ
ತಮಿಳುನಾಡಿಗೆ ನೀರು ಹರಿಸುವಂತೆ ಸುಪ್ರೀಂಕೋರ್ಟ್ ಆದೇಶ ಹಿನ್ನೆಲೆ ಇಂದು(ಸೆ.22) ರೈತರು ಹಾಗೂ ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆ ಸಾಧ್ಯತೆಯಿದೆ. ಹೀಗಾಗಿ ಬೆಂಗಳೂರಿನಾದ್ಯಂತ ಕಟ್ಟೆಚ್ಚರ ವಹಿಸಲು ಪೊಲೀಸ್ ಆಯುಕ್ತ ದಯಾನಂದ್ ಬೆಂಗಳೂರಿನ ಎಲ್ಲಾ ಡಿಸಿಪಿಗಳಿಗೆ ಸೂಚನೆ ನೀಡಿದರು.
ಬೆಂಗಳೂರು, ಸೆ.22: ತಮಿಳುನಾಡಿಗೆ ನೀರು ಹರಿಸುವಂತೆ ಸುಪ್ರೀಂಕೋರ್ಟ್ ಆದೇಶ ಹಿನ್ನೆಲೆ ಇಂದು(ಸೆ.22) ರೈತರು ಹಾಗೂ ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆ ಸಾಧ್ಯತೆಯಿದೆ. ಈ ವೇಳೆ ತಮಿಳುನಾಡು ಸರ್ಕಾರಿ ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆಯಬಹುದು. ಹೀಗಾಗಿ ಬೆಂಗಳೂರಿನಾದ್ಯಂತ(Bengaluru) ಕಟ್ಟೆಚ್ಚರ ವಹಿಸಲು ಪೊಲೀಸ್ ಆಯುಕ್ತ ದಯಾನಂದ್ ಸೂಚನೆ ನೀಡಿದರು. ಮುಖ್ಯವಾಗಿ ತಮಿಳರು ವಾಸಿಸುವ ಏರಿಯಾಗಳಲ್ಲಿ ಹೆಚ್ಚು ನಿಗಾ ಇಡುವಂತೆ ಸೂಚಿಸಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಿ, ರಸ್ತೆ ತಡೆ ನಡೆಸುವವರ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುವಂತೆ ಬೆಂಗಳೂರಿನ ಎಲ್ಲಾ ಡಿಸಿಪಿಗಳಿಗೆ ಪೊಲೀಸ್ ಆಯುಕ್ತ ದಯಾನಂದ್ ಸೂಚಿಸಿದ್ದಾರೆ.
ನಾಳೆ ಮಂಡ್ಯ ಬಂದ್
ಹೌದು, ಸುಪ್ರೀಂ ಕೋರ್ಟ್ ಆದೇಶ ನೀಡಿರುವ ಹಿನ್ನೆಲೆಯಲ್ಲಿ ನಾಳೆ (ಸೆ.23) ರಂದು ಮಂಡ್ಯ ಬಂದ್ಗೆ ಮಂಡ್ಯ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ಕರೆ ನೀಡಿದೆ. ಈ ಸಂಬಂಧ ಇಂದು ರಾಜಕೀಯ ಪಕ್ಷಗಳ ನಾಯಕರು, ವರ್ತಕರು, ಸಂಘಟನೆ ಮುಖಂಡರು ಸೇರಿ ಮತ್ತೊಂದು ಸುತ್ತಿನ ಸಭೆ ನಡೆಸಲಿದ್ದಾರೆ. ಇಂದಿನ ಸಭೆಯಲ್ಲಿ ಮಂಡ್ಯ ನಗರ ಬಂದ್‌ನ ರೂಪರೇಷೆ ಬಗ್ಗೆ ಚರ್ಚೆ ಮಾಡಲಿದ್ದಾರೆ.
ಇದನ್ನೂ ಓದಿ:ಪ್ರತಿಭಟನೆ ಬಳಿಕ ಕಾವೇರಿ ಪರ ‘ಆನ್ಲೈನ್ ಬೆಂಬಲ’ ವ್ಯಕ್ತಪಡಿಸಲಾರಂಭಿಸಿದ ನಟರು
ಮಂಡ್ಯದಲ್ಲಿ ಮುಂದುವರಿಯಲಿದೆ ಕಾವೇರಿ ಕಿಚ್ಚು
ಮಂಡ್ಯದಲ್ಲಿ ಇಂದು ಸಹ ಕಾವೇರಿ ಕಿಚ್ಚು ಮುಂದುವರಿಯಲಿದೆ. ಅದರಂತೆ ಬೆಳಗ್ಗೆ 10 ಗಂಟೆಗೆ ಕನ್ನಡಪರ ಸಂಘಟನೆ ಕಾರ್ಯಕರ್ತರು ಇಡೀ ಬೆಂಗಳೂರು ನಗರಕ್ಕೆ ನೀರನ್ನು ಸರಬರಾಜು ಮಾಡುವ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ತೊರೆಕಾಡನಹಳ್ಳಿಯ ಟಿ.ಕೆ ಹಳ್ಳಿ ಪಂಪ್ ಹೌಸ್ಗೆ ಮುತ್ತಿಗೆ ಹಾಕಲಿದ್ದಾರೆ. ಬೆಂಗಳೂರು ಜನರಿಗೆ ನೀರನ್ನ ನಿಲ್ಲಿಸಿ, ರೈತರಿಗೆ ನೀರು ಕೊಡಿ ಎಂದು ಒತ್ತಾಯ ಮಾಡಲಿದ್ದಾರೆ.
ಕಾವೇರಿ ಹೋರಾಟದಲ್ಲಿ ಅಭಿಷೇಕ್ ಅಂಬರೀಶ್ ಭಾಗಿ
ಇನ್ನು ಕಾವೇರಿ ಹೋರಾಟದಲ್ಲಿ ಯಂಗ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಸಹ ಭಾಗಿಯಾಗಲಿದ್ದಾರೆ. ಹೌದು, ಮಂಡ್ಯದಲ್ಲಿ ನಡೆಯುವ ರೈತರ ಪ್ರತಿಭಟನೆಯಲ್ಲಿ ಬೆಳಗ್ಗೆ 11 ಗಂಟೆಗೆ ಹೋರಾಟಗಾರರ ಜೊತೆ ಸೇರಿಕೊಳ್ಳಲಿದ್ದಾರೆ. ಉಳಿದಂತೆ ಶ್ರೀರಂಗಪಟ್ಟಣ, ಪಾಂಡವಪುರ, ಮದ್ದೂರಿನಲ್ಲಿ ವಿವಿಧ ರೈತ ಸಂಘಗಳು ಪ್ರತಿಭಟನೆ ನಡೆಸುತ್ತಿದೆ. ಈ ಮಧ್ಯೆ ನಾಳೆ ಮಂಡ್ಯನಗರ ಬಂದ್ಗೆ ಕರೆ ಕೊಟ್ಟಿರೊ ಜಿಲ್ಲಾ ರೈತ ಹಿತರಕ್ಷಣಾ ಸಮತಿ ನಾಳೆ ಬಂದ್ ಕುರಿತು ಇಂದು ರೂಪುರೇಷು ತಯಾರಿ ನಡೆಸಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ