Amboli Ghat: ಬಿರುಸು ಮಳೆಗೆ ಮೈದುಂಬಿದ ಅಂಬೋಲಿ ಘಾಟ್, ಜಲಪಾತ ನೋಡಲು ಪ್ರವಾಸಿಗರ ದಂಡು
ಬಿರುಸು ಮಳೆಗೆ ಅಂಬೋಲಿ ಘಾಟ್ ಮೈದುಂಬಿದ್ದು, ನೂರಡಿ ಮೇಲಿಂದ ಧುಮ್ಮಿಕ್ಕುವ ಜಲಧಾರೆಯನ್ನು ನೋಡಲು ನೂರಾರು ಸಂಖ್ಯೆಯಲ್ಲಿ ಜನರು ಆಗಮಿಸುತ್ತಿದ್ದಾರೆ.
ಬೆಳಗಾವಿ: ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವ ಪರಿಣಾಮವಾಗಿ ಮಹಾರಾಷ್ಟ್ರ-ಗೋವಾ ಮಾರ್ಗದಲ್ಲಿರುವ ಅಂಬೋಲಿ ಘಾಟ್ ಜಲಪಾತ (Amboli Ghat waterfall) ಧುಮುಕುತ್ತಿದೆ. ಆ ಮೂಲಕ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಬೆಳಗಾವಿ ಗಡಿಗೆ ಹೊಂದಿಕೊಂಡು ಮಹಾರಾಷ್ಟ್ರದ ಪಶ್ಚಿಮ ಘಟ್ಟ ಅರಣ್ಯ ಪ್ರದೇಶದಲ್ಲಿರುವ ಅಂಬೋಲಿ ಪಾಲ್ಸ್ನಲ್ಲಿ ನೂರು ಅಡಿ ಮೇಲಿಂದ ನೀರು ಧುಮುಕುವುದನ್ನು ನೋಡಲು ನೂರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದು, ಜಲಧಾರೆ ನೋಡಿ ಜನರು ಮನಸೋತಿದ್ದಾರೆ.
ಇದನ್ನೂ ಓದಿ: Reservoir Levels: ಕರ್ನಾಟಕದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ, ರಾಜ್ಯದ ವಿವಿಧ ಅಣೆಕಟ್ಟುಗಳ ಸದ್ಯದ ಸ್ಥಿತಿಗತಿ ಹೀಗಿದೆ