AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Reservoir Levels: ಕರ್ನಾಟಕದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ, ರಾಜ್ಯದ ವಿವಿಧ ಅಣೆಕಟ್ಟುಗಳ ಸದ್ಯದ ಸ್ಥಿತಿಗತಿ ಹೀಗಿದೆ

ರಾಜ್ಯದ ವಿವಿಧ ಕಡೆಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವ ಪರಿಣಾಮ ವಿವಿಧ ಅಣೆಕಟ್ಟುಗಳಿಗೆ ಅಪಾರ ಪ್ರಮಾಣದಲ್ಲಿ ನೀರಿನ ಒಳಹರಿವು ಆಗುತ್ತಿದೆ. ರಾಜ್ಯದ ವಿವಿಧ ಅಣೆಕಟ್ಟುಗಳ ಸದ್ಯದ ಸ್ಥಿತಿಗತಿ ಸಂಪೂರ್ಣ ಮಾಹಿತಿ ಇಲ್ಲಿದೆ.

Reservoir Levels: ಕರ್ನಾಟಕದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ, ರಾಜ್ಯದ ವಿವಿಧ ಅಣೆಕಟ್ಟುಗಳ ಸದ್ಯದ ಸ್ಥಿತಿಗತಿ ಹೀಗಿದೆ
ಅಣೆಕಟ್ಟು
TV9 Web
| Updated By: Rakesh Nayak Manchi|

Updated on:Jul 08, 2022 | 10:43 AM

Share

ಬೆಂಗಳೂರು: ರಾಜ್ಯದ ವಿವಿಧ ಕಡೆಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವ ಪರಿಣಾಮ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಕೆಲವೊಂದು ಪ್ರದೇಶಗಳಲ್ಲಿ ಪ್ರವಾಹದ ರೀತಿಯಲ್ಲಿ ನೀರು ಹರಿಯಲು ಆರಂಭಿಸಿದೆ. ಸದ್ಯ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ರಾಜ್ಯದ ವಿವಿಧ ನದಿಗಳು ಉಕ್ಕಿ ಹರಿಯಲು ಆರಂಭವಾಗಿದೆ. ಅಲ್ಲದೆ ಅಣೆಕಟ್ಟುಗಳಿಗೆ ಅಪಾರ ಪ್ರಮಾಣದಲ್ಲಿ ನೀರಿನ ಒಳಹರಿವು ಆಗುತ್ತಿದ್ದು, ತುಂಗಭದ್ರಾ ಸೇರಿದಂತೆ ವಿವಿಧ ಅಣೆಕಟ್ಟುಗಳ ಸದ್ಯದ ಸ್ಥಿತಿಗತಿಗಳ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: Karnataka Rains Live Updates: ಕರ್ನಾಟಕದಲ್ಲಿ ಮುಂದುವರೆದ ಮಳೆ: ಹಲವೆಡೆ ರೆಡ್ ಅಲರ್ಟ್, 7 ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ

ತುಂಗಭದ್ರಾ ನದಿ ಪಾತ್ರದಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನೆಲೆ ತುಂಗಭದ್ರಾ ನದಿಯು ಉಕ್ಕಿಹರಿಯಲು ಆರಂಭಿಸಿದೆ. ಈ ನಿಟ್ಟಿನಲ್ಲಿ ತುಂಗಾಭದ್ರ ಅಣೆಕಟ್ಟಿನಿಂದ ಅಪಾರ ಪ್ರಮಾಣದಲ್ಲಿ ನೀರನ್ನು ಹರಿಬಿಡಲಾಗಿದ್ದು, ಈ ಬಗ್ಗೆ ನದಿದಡದ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಎಚ್ಚರಿಕೆ ನೀಡಲಾಗಿದೆ. ಸದ್ಯ 57,563 ಕ್ಯೂಸೆಕ್ ಒಳಹರಿವು ಆಗಿದ್ದು, ಈ ನೀರನ್ನು 14 ಗೇಟುಗಳ ಮೂಲಕ ಹರಿಬಿಡಲಾಗಿದೆ.

ವಿಜಯಪುರ ಜಿಲ್ಲೆಯ ಬಾಗೇವಾಡಿ ತಾಲೂಕಿನಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿ ಇರುವ ಆಲಮಟ್ಟಿ ಅಣೆಕಟ್ಟಿನಲ್ಲಿ ಕಳೆದ ವರ್ಷ ಈ ಸಮಯದಲ್ಲಿ 90.07 ಟಿಎಂಸಿ ನೀರು ಸಂಗ್ರಹವಾಗಿತ್ತು. ಆದರೆ ಈ ಬಾರಿ 57.39 ಟಿಎಂಸಿ ನೀರು ಮಾತ್ರ ಸಂಗ್ರಹವಾಗಿದೆ. ಅದಾಗ್ಯೂ ಜು.7ರಂದು ಅಣೆಕಟ್ಟಿಗೆ 43,066 ಕ್ಯೂಸೆಕ್ ನೀರು ಒಳಹರಿವು ಆಗಿದ್ದು, 451 ಕ್ಯೂಸೆಕ್ ನೀರನ್ನು ಹರಿಬಿಡಲಾಗಿದೆ.

ಇದನ್ನೂ ಓದಿ: Kerala Rain: ಕೇರಳದಲ್ಲಿ ಐದು ದಿನ ಭಾರೀ ಮಳೆ: ಮುಖ್ಯಮಂತ್ರಿ ಕಚೇರಿಯಿಂದ ಸಿದ್ಧತೆಗೆ ಸೂಚನೆ

ಮಂಡ್ಯ ಮತ್ತು ಮೈಸೂರು ಜಿಲ್ಲೆಗಳ ಸಾವಿರಾರು ಎಕರೆಗಳಿಗೆ ನೀರುಣಿಸುವ ಕೃಷ್ಣರಾಜ ಸಾಗರ ಅಣೆಕಟ್ಟಿನಲ್ಲಿ ಈ ಸಮಯದಲ್ಲಿ ಕಳೆದಬಾರಿಗಿಂತ ಈ ಬಾರಿ ಹೆಚ್ಚು ನೀರು ಸಂಗ್ರಹವಾಗಿದೆ. ಕಳೆದ ವರ್ಷ 15.97 ಟಿಎಂಸಿ ಸಂಗ್ರಹವಾಗಿತ್ತು, ಈ ಬಾರಿ 39.30 ಟಿಎಂಸಿ ನೀರು ಸಂಗ್ರಹವಾಗಿದೆ. ಅದಾಗ್ಯೂ ಜು.7ರಂದು 33,602 ಕ್ಯೂಸೆಕ್ ನೀರು ಅಣೆಕಟ್ಟಿಗೆ ಹರಿದು ಬಂದಿದ್ದು, 3,576 ಕ್ಯೂಸೆಕ್ ನೀರನ್ನು ಹೊರಬಿಡಲಾಗಿದೆ.

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಲಿಂಗನಮಕ್ಕಿಯಲ್ಲಿರುವ ಅಣೆಕಟ್ಟಿನಲ್ಲಿ ಕಳೆಬಾರಿಗಿಂತ ಈ ಬಾರಿ ಕಡಿಮೆ ನೀರು ಸಂಗ್ರಹವಾಗಿದೆ. ಕಳೆದಬಾರಿ ಇದೇ ಸಮಯದಲ್ಲಿ 61.9 ಟಿಎಂಸಿ ಸಂಗ್ರಹವಾಗಿದ್ದ ಲಿಂಗನಮಕ್ಕಿ ಅಣೆಕಟ್ಟಿನಲ್ಲಿ ಈ ಬಾರಿ 38.38 ಟಿಎಂಸಿ ನೀರು ಸಂಗ್ರಹಿಸಲಾಗಿದೆ. ಜು.7ರಂದು 57,638 ಕ್ಯೂಸೆಕ್ ನೀರಿನ ಒಳಹರಿವು ಆಗಿದ್ದು, 2,445 ಕ್ಯೂಸೆಕ್ ನೀರಿನ ಹೊರಹರಿವು ಆಗಿದೆ.

ಕರ್ನಾಟಕದ ಅತ್ಯಂತ ಎತ್ತರವಾದ ಅಣೆಕಟ್ಟು ಎಂಬ ಖ್ಯಾತಿ ಪಡೆದಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಸುಪಾ ಅಣೆಕಟ್ಟಿನಲ್ಲಿ ಇದೇ ಸಮಯದಲ್ಲಿ ಕಳೆದ ವರ್ಷ 57.2 ಟಿಎಂಸಿ ನೀರು ಸಂಗ್ರಹವಾಗಿತ್ತು ಮತ್ತು ಈ ವರ್ಷ ಇದೇ ಸಮಯದಲ್ಲಿ 29.10 ಟಿಎಂಸಿ ನೀರನ್ನು ಸಂಗ್ರಹವಾಗಿದೆ. ಜು.7ರಂದು 30,753 ಕ್ಯೂಸೆಕ್ ನೀರು ಅಣೆಕಟ್ಟಿಗೆ ಹರಿದುಬಂದಿದ್ದು, ನೀರಿನ ಹೊರ ಹರಿವು ಆಗಿಲ್ಲ.

ಇದನ್ನೂ ಓದಿ: ಮಳೆ ಆರ್ಭಟ: ಶುಕ್ರವಾರ ಡಿಸಿಗಳೊಂದಿಗೆ ಸಿಎಂ ಬೊಮ್ಮಾಯಿ ತುರ್ತು ವಿಡಿಯೋ ಸಂವಾದ

ಇನ್ನುಳಿದಂತೆ, ಕಳೆದವರ್ಷ ಇದೇ ಸಮಯದಲ್ಲಿ 19.14 ಟಿಎಂಸಿ ಸಂಗ್ರಹವಾಗಿದ್ದ ಮಲಪ್ರಭಾ ಅಣೆಕಟ್ಟಿನಲ್ಲಿ ಈ ಬಾರಿ 12.50 ಟಿಎಂಸಿ ನೀರು ಸಂಗ್ರಹವಾಗಿದೆ. ಜು.7ರಂದು 7,729 ಕ್ಯೂಸೆಕ್ ನೀರಿನ ಒಳಹರಿವು ಆಗಿದ್ದು, 194 ಕ್ಯೂಸೆಕ್ ನೀರಿನ ಹೊರಹರಿವು ಆಗಿದೆ. ಹೇಮಾವತಿ ಅಣೆಕಟ್ಟಿನಲ್ಲಿ ಕಳೆದ ವರ್ಷ ಇದೇ ಸಮಯದಲ್ಲಿ 17.49 ಟಿಎಂಸಿ ನೀರು ಸಂಗ್ರಹವಾಗಿತ್ತು, ಈ ಬಾರಿ 29.57 ಟಿಎಂಸಿ ನೀರು ಸಂಗ್ರಹವಾಗಿದೆ. ಜು.7ರಂದು 16,660 ಕ್ಯೂಸೆಕ್ ನೀರಿನ ಒಳಹರಿವು ಆಗಿದ್ದು, 250 ಕ್ಯೂಸೆಕ್ ನೀರಿನ ಹೊರಹರಿವು ಆಗಿದೆ.

ಭದ್ರಾ ಅಣೆಕಟ್ಟಿನಲ್ಲಿ ಕಳೆದ ವರ್ಷ ಇದೇ ಸಮಯದಲ್ಲಿ 38.87 ಟಿಎಂಸಿ ನೀರು ಸಂಗ್ರಹವಾಗಿದ್ದು, ಈ ಬಾರಿ 46.56 ಟಿಎಂಸಿ ನೀರು ಸಂಗ್ರವಾಗಿದೆ. ಜು.7ರಂದು 31,667 ಕ್ಯೂಸೆಕ್ ನೀರಿನ ಒಳಹರಿವು ಆಗಿದ್ದು, 139 ಕ್ಯೂಸೆಕ್ ನೀರನ್ನು ಹೊರಬಿಡಲಾಗಿದೆ. ಹಾರಂಗಿ ಅಣೆಕಟ್ಟಿನಲ್ಲಿ ಕಳೆದ ವರ್ಷ ಇದೇ ಸಮಯದಲ್ಲಿ 4.44 ಟಿಎಂಸಿ ನೀರು ಸಂಗ್ರಹವಾಗಿತ್ತು, ಈ ಬಾರಿ 6.85 ಟಿಎಂಸಿ ನೀರು ಸಂಗ್ರಹವಾಗಿದೆ. ಜು.7ರಂದು 13,974 ಕ್ಯೂಸೆಕ್ ನೀರಿನ ಒಳಹರಿವು ಆಗಿದ್ದು, 15,600 ಕ್ಯೂಸೆಕ್ ನೀರನ್ನು ಹರಿಬಿಡಲಾಗಿದೆ.

ಇದೆ ಸಮಯವನ್ನು ಕಳೆದ ಬಾರಿಗೆ ಹೋಲಿಸಿದರೆ ಕಬಿನಿ ಅಣೆಕಟ್ಟಿನಲ್ಲಿ ಕೊಂಚ ನೀರಿನ ಸಂಗ್ರಹ ಹೆಚ್ಚಾಗಿದೆ. ಒಟ್ಟು 19.52 ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿರುವ ಈ ಅಣೆಕಟ್ಟಿನಲ್ಲಿ ಕಳೆದ ವರ್ಷ 14.78 ಟಿಎಂಸಿ ನೀರು ಸಂಗ್ರಹವಾಗಿತ್ತು. ಈ ಬಾರಿ 15.25 ಟಿಎಂಸಿ ನೀರು ಸಂಗ್ರಹವಾಗಿದೆ. ಜು.7ರಂದು 18,563 ಕ್ಯೂಸೆಕ್ ನೀರಿನ ಒಳಹರಿವು ಆಗಿದ್ದು, 1000 ಕ್ಯೂಸೆಕ್ ನೀರಿನ ಹೊರಹರಿವು ಆಗಿದೆ.

ಇದನ್ನೂ ಓದಿ: ಉಡುಪಿಯಲ್ಲಿ ನಿಲ್ಲದ ಮಳೆ, ಉಕ್ಕಿ ಹರಿಯುತ್ತಿದೆ ಸೌಪರ್ಣಿಕಾ ನದಿ, ಹಲವು ಗ್ರಾಮಗಳು ಜಲಾವೃತ

Published On - 10:36 am, Fri, 8 July 22

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!